ಹರಕೆಯ ಡಿಕೆ ಎಂದು ರಾಜ್ಯ ಬಿಜೆಪಿ ಟ್ವೀಟ್, ಭ್ರಷ್ಟಾಧ್ಯಕ್ಷರಿಗೆ ರಮ್ಯಾ ಮಂಗಳಾರತಿ ಮಾಡಿದರೆ ಸಿದ್ದರಾಮಯ್ಯ ಆಪ್ತರು ರಮ್ಯಾ ಪರ ನಿಲ್ಲುತ್ತಿದ್ದಾರೆ!

ಹರಕೆಯ ಡಿಕೆ ಎಂದು ರಾಜ್ಯ ಬಿಜೆಪಿ ಟ್ವೀಟ್, ಭ್ರಷ್ಟಾಧ್ಯಕ್ಷರಿಗೆ ರಮ್ಯಾ ಮಂಗಳಾರತಿ ಮಾಡಿದರೆ ಸಿದ್ದರಾಮಯ್ಯ ಆಪ್ತರು ರಮ್ಯಾ ಪರ ನಿಲ್ಲುತ್ತಿದ್ದಾರೆ!
ಡಿಕೆ ಶಿವಕುಮಾರ್​

ಭ್ರಷ್ಟಾಧ್ಯಕ್ಷರಿಗೆ ಮಾಜಿ ಸಂಸದೆ ರಮ್ಯಾ ಮಂಗಳಾರತಿ ಮಾಡಿದರೆ CLP ನಾಯಕ ಸಿದ್ದರಾಮಯ್ಯ ಆಪ್ತರು ರಮ್ಯಾ ಪರ ನಿಲ್ಲುತ್ತಿದ್ದಾರೆ. ಹರಕೆಯ ಡಿ.ಕೆ.ಶಿವಕುಮಾರ್ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

TV9kannada Web Team

| Edited By: Ayesha Banu

May 13, 2022 | 2:41 PM

ಬೆಂಗಳೂರು: ಸಿದ್ದರಾಮಯ್ಯ(Siddaramaiah ), ಡಿ.ಕೆ.ಶಿವಕುಮಾರ್(DK Shivakumar)ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಚಿಂತನಾ ಸಭೆ ನಡೆಯುತ್ತಿದೆ. ರಾಹುಲ್ ಗಾಂಧಿಗೆ ಮತ್ತೆ ಎಐಸಿಸಿ ಪಟ್ಟ ಕಟ್ಟುವಂತೆ ಚರ್ಚೆ ನಡೆದಿದೆ. ಇದೇ ವೇಳೆ ಸಿದ್ದರಾಮಯ್ಯ ಬಣ ಡಿಕೆಶಿ ವಿರುದ್ಧ ಒಳಸಂಚು ನಡೆಸ್ತಿದೆ ಎಂದು ರಾಜ್ಯ ಕಾಂಗ್ರೆಸ್ ಬಣ ರಾಜಕೀಯದ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಭ್ರಷ್ಟಾಧ್ಯಕ್ಷರಿಗೆ ಮಾಜಿ ಸಂಸದೆ ರಮ್ಯಾ ಮಂಗಳಾರತಿ ಮಾಡಿದರೆ CLP ನಾಯಕ ಸಿದ್ದರಾಮಯ್ಯ ಆಪ್ತರು ರಮ್ಯಾ ಪರ ನಿಲ್ಲುತ್ತಿದ್ದಾರೆ. ಹರಕೆಯ ಡಿ.ಕೆ.ಶಿವಕುಮಾರ್ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ಇಷ್ಟು ದಿನಗಳ‌ ಕಾಲ ‘ಅಂತರ್ಧಾನ’ ಸ್ಥಿತಿಯಲ್ಲಿದ್ದ ನಟಿ ರಮ್ಯಾ ಈಗ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿ ಪ್ರತ್ಯಕ್ಷರಾಗಿದ್ದಾರೆ. ಈ ಅನಿರೀಕ್ಷಿತ ದಾಳಿಯ ಹಿಂದೆ ಮೀರ್‌ ಸಾದಿಕ್‌ ಕೈವಾಡವಿದೆ. ಡಿಕೆಶಿ ಅವರೇ, ನಿಮ್ಮ ವಿರೋಧಿ ಶಕ್ತಿಗಳ ಕೈ ಮೇಲಾಗುತ್ತಿದೆಯೇ? ಹರಕೆಯ ಡಿಕೆ ಎಂದು ಟ್ವಿಟರ್ನಲ್ಲಿ ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೆಚ್.ಸಿ.ಮಹದೇವಪ್ಪ ರಮ್ಯಾ ಪರ‌ ಬ್ಯಾಟ್ ಬೀಸಿದ್ದಾರೆಯೇ‌? ಮಹದೇವಪ್ಪ ಡಿಕೆಶಿ ಪರವಲ್ಲ, ಸಿದ್ದರಾಮಯ್ಯ ಅತ್ಯಾಪ್ತರಲ್ಲೊಬ್ಬರು. ಸಿದ್ದರಾಮಯ್ಯ ಆಪ್ತರೆಲ್ಲಾ ರಮ್ಯಾ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ? ಮೀರ್‌ ಸಾದಿಕ್‌ ಬಣ ಡಿಕೆಶಿಯನ್ನು ಹರಕೆಯ ಕುರಿಯಾಗಿಸಲು ಹೊರಟಿದೆಯೇ? ಡಿ.ಕೆ.ಶಿವಕುಮಾರ್ರವರೇ, ಈಗ ನಿಮ್ಮ ವಿರುದ್ಧ ನಡೆಯುತ್ತಿರುವುದು ಮೀರ್‌ಸಾದಿಕ್ ಬಣದ ಸಂಚು, ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮನ್ನು ನಿಮ್ಮ ತಂಡವನ್ನು ರೌಡಿಪಟ್ಟಿಗೆ ಸೇರಿಸುವ ತಂತ್ರ ನಡೆಯುತ್ತಿದೆ ಎಂದು ಟ್ವಿಟರ್ನಲ್ಲಿ ಕಾಂಗ್ರೆಸ್ ಬಣಗಳ ಬಗ್ಗೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಗೊಂದಲಗಳ ವಿಚಾರ ನಮಗ್ಯಾಕೆ? ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಸಂಸದೆ ರಮ್ಯಾ ಟ್ವಿಟರ್ ವಾರ್ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಗೊಂದಲಗಳ ವಿಚಾರ ನಮಗ್ಯಾಕೆ? ಎಂದು ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ಹೇಳಿಕೆ, ರಮ್ಯಾ ಟ್ವೀಟ್, ಮೊಹಮ್ಮದ್ ನಲಪಾಡ್ ಹೇಳಿಕೆ, ಎಂ.ಬಿ. ಪಾಟೀಲ್ ಭೇಟಿಯ ಹೇಳಿಕೆಗಳು ನಮಗೆ ಬೇಕಿಲ್ಲ. ನಮಗ್ಯಾಕೆ ಅವರ ಪಕ್ಷದ ವಿಚಾರ? ಅದು ನಮಗೆ ಬೇಡವಾದ ವಿಚಾರ. ರಮ್ಯಾ ಕನ್ನಡ ಚಿತ್ರರಂಗದ ಒಳ್ಳೆಯ ನಟಿ, ಅವರ ಬಗ್ಗೆ ಗೌರವ ಇದೆ. ರಮ್ಯಾ ಜತೆ ಮತ್ತೊಂದು ಸಿನಿಮಾ‌ ಮಾಡುವ ಯೋಚನೆ ಇದೆ. ಆದ್ರೆ ಇದು ಚುನಾವಣೆಯ ಕಾಲ, ಸಮಯ ಆಗಲ್ಲ ಎಂದು ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada