Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಭಾನುವಾರದವರೆಗೆ ಪವರ್ ಕಟ್

Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಭಾನುವಾರದವರೆಗೆ ಪವರ್ ಕಟ್
ಪವರ್ ಕಟ್

Power Cut in Bangalore: ಶನಿವಾರ ಮತ್ತು ಭಾನುವಾರ ಬೆಳ್ಳಂದೂರು, ಬೊಮ್ಮನಹಳ್ಳಿ, ಮೈಕೋ ಲೇಔಟ್, ಬೊಮ್ಮಸಂದ್ರ ಮುಂತಾದ ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. 

TV9kannada Web Team

| Edited By: Sushma Chakre

May 13, 2022 | 3:14 PM

ಬೆಂಗಳೂರು: ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಈ ವಾರಾಂತ್ಯದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಗೆ ತೊಂದರೆಯಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತಿಳಿಸಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇಂದಿನಿಂದ ಭಾನುವಾರದವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ನಡುವೆ ಮೂರು ಗಂಟೆಗಳ ಕಾಲ ವಿದ್ಯುತ್ ಕಡಿತವಾಗಲಿದೆ. ಶನಿವಾರ ಮತ್ತು ಭಾನುವಾರ ಬೆಳ್ಳಂದೂರು, ಬೊಮ್ಮನಹಳ್ಳಿ, ಮೈಕೋ ಲೇಔಟ್, ಬೊಮ್ಮಸಂದ್ರ ಮುಂತಾದ ಏರಿಯಾಗಳಲ್ಲಿ ಪವರ್ ಕಟ್ (Power Cut) ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಈಗಾಗಲೇ ಇಂದು ಬೆಳ್ಳಂದೂರು ಗ್ರಾಮ, ಬೊಮ್ಮನಹಳ್ಳಿ, NGR ಲೇಔಟ್, ರೂಪೇನ ಅಗ್ರಹಾರ, ಗಾರ್ವೆಭಾವಿಪಾಳ್ಯ, ಹಿಮಗಿರಿ ಲೇಔಟ್ ಮತ್ತು ಅಂಜನಾಪುರ ಬಿಡಿಎ 5 ನೇ ಬ್ಲಾಕ್, ಗಂಗಾ ನಗರ, ಹರಿಶ್ಚಂದ್ರ ಘಾಟ್, ಮಲ್ಲೇಶ್ವರಂ, ದೊಮ್ಮಲೂರು ಲೇಔಟ್ , ಕೆ.ಆರ್ ಕಾಲೋನಿ, ಮಾರತ್ತಹಳ್ಳಿ, ಮಂಜುನಾಥ ನಗರ ಮುಂತಾದ ಏರಿಯಾಗಳಲ್ಲಿ ಇಂದು ಮಧ್ಯಾಹ್ನದವರೆಗೆ ಪವರ್ ಕಟ್ ಇತ್ತು. ಶನಿವಾರ ಮತ್ತು ಭಾನುವಾರ ಕೂಡ ಹಲವು ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ. ನಾಳೆಯಿಂದ 2 ದಿನ ಪವರ್ ಕಟ್ ಇರುವ ಬೆಂಗಳೂರಿನ ಏರಿಯಾಗಳ ಪಟ್ಟಿ ಇಲ್ಲಿದೆ…

ಶನಿವಾರ ಪವರ್ ಕಟ್ ಇರುವ ಏರಿಯಾಗಳು: ಶನಿವಾರ (ಮೇ 14) ಬೆಂಗಳೂರಿನ ಬೊಮ್ಮನಹಳ್ಳಿ, ಎನ್​ಜಿಆರ್​ ಲೇಔಟ್, ರೂಪೇನ ಅಗ್ರಹಾರ, ಸೂಲಿಕುಂಟೆ, ಮುತ್ತಾನಾಳೂರು ಕ್ರಾಸ್, ಬೇಗೂರು ಮುಖ್ಯ ರಸ್ತೆ, ವಿದ್ಯಾ ಜ್ಯೋತಿ ಸ್ಕೂಲ್ ರಸ್ತೆ, ಎಸ್ ಆರ್ ನಾಯ್ಡು ಲೇಔಟ್, ಹೊಸ ಮೈಕೋ ಲೇಔಟ್, ಜುನ್ನಸಂದ್ರ ಮುಖ್ಯ ರಸ್ತೆ, ಸನ್ ಸಿಟಿ, ಎಂ.ಎಸ್ ರಾಮಯ್ಯ ನಗರ, ರಾಘವೇಂದ್ರ ಬಡಾವಣೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪವರ್ ಕಟ್ ಇರಲಿದೆ.

ಭಾನುವಾರ ಪವರ್ ಕಟ್ ಇರುವ ಏರಿಯಾಗಳು: ಬೆಂಗಳೂರಿನ ಗಾಂಧಿಗ್ರಾಮ, ದೇವಯ್ಯ ಪಾರ್ಕ್, ಇ-ಬ್ಲಾಕ್ ಸುಬ್ರಹ್ಮಣ್ಯನಗರ ಬೀದಿದೀಪ, ಎ- ಬ್ಲಾಕ್ ಸುಬ್ರಹ್ಮಣ್ಯನಗರ, WP ರಸ್ತೆ 15 ನೇ ಕ್ರಾಸ್, 16ನೇ ಕ್ರಾಸ್ ಮಲ್ಲೇಶ್ವರಂ, ಎಲ್ ಜಿ ಹಳ್ಳಿ, ಸೂಲಿಕುಂಟೆ, ಮುತ್ತಾನಲ್ಲೂರು ಕ್ರಾಸ್, ಜುನಸಂದ್ರ ಮುಖ್ಯ ರಸ್ತೆ, ಸನ್ ಸಿಟಿ, ಎಂ.ಎಸ್ ರಾಮಯ್ಯ ನಗರ, ಎಸ್ ಆರಾಧನಾ ಶಾಲೆ ರಾಘವೇಂದ್ರ ಲೇಔಟ್, ಜಿ.ಆರ್ ಲ್ಯಾವೆಂಡರ್ ಅಪಾರ್ಟ್‌ಮೆಂಟ್‌ಗಳು, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಜಿಗಣಿ ಕೈಗಾರಿಕಾ ಪ್ರದೇಶಗಳು, ಜಿಗಣಿ KIADB ಪ್ರದೇಶಗಳು, ಅನಂತನಗರ ಕೈಗಾರಿಕಾ ಪ್ರದೇಶಗಳು, ವೀರಸಂದ್ರ ಕೈಗಾರಿಕಾ ಪ್ರದೇಶಗಳು, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ವಸಂತನರಸಾಪುರ ಕೈಗಾರಿಕಾ ಪ್ರದೇಶಗಳು 2 ಮತ್ತು 3 ನೇ ಹಂತದಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada