Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಭಾನುವಾರ ಪವರ್ ಕಟ್

Power Cut in Bangalore: ಬೆಸ್ಕಾಂ ಕೈಗೊಂಡ ಕೆಲವು ಉನ್ನತೀಕರಣ ಮತ್ತು ಇತರ ನಿರ್ವಹಣಾ ಕಾರ್ಯಗಳಿಂದಾಗಿ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಇಂದು (ಏ. 16) ಮತ್ತು ನಾಳೆ (ಏ. 17) ವಿದ್ಯುತ್ ಕಡಿತವಾಗಲಿದೆ.

Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಭಾನುವಾರ ಪವರ್ ಕಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 16, 2022 | 4:48 PM

ಬೆಂಗಳೂರು: ಬೆಂಗಳೂರಿನಲ್ಲಿ (Bangalore Power Cut) ನಡೆಯುತ್ತಿರುವ ನಿರ್ವಹಣಾ ಕಾಮಗಾರಿಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಭಾರೀ ವಿದ್ಯುತ್ ಕಡಿತವಾಗುತ್ತಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಕೈಗೊಂಡ ಕೆಲವು ಉನ್ನತೀಕರಣ ಮತ್ತು ಇತರ ನಿರ್ವಹಣಾ ಕಾರ್ಯಗಳಿಂದಾಗಿ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಇಂದು (ಏ. 16) ಮತ್ತು ನಾಳೆ (ಏ. 17) ವಿದ್ಯುತ್ ಕಡಿತವಾಗಲಿದೆ. ಬೆಂಗಳೂರಿನ ಪೂರ್ವ, ದಕ್ಷಿಣ, ಉತ್ತರ ಮತ್ತು ಪಶ್ಚಿಮ ವಲಯಗಳ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ(Power Cut) ವ್ಯತ್ಯಯವಾಗಲಿದೆ.

ಇಂದು ಬೆಂಗಳೂರಿನ ಚಂದ್ರಾ ಲೇಔಟ್, ಸುಂಕದಕಟ್ಟೆ, ವೃಷಭಾವತಿ ಲೇಔಟ್, ಆರ್.ಆರ್. ಲೇಔಟ್, ಕಲ್ಯಾಣಿ ಲೇಔಟ್, ಜಯನಗರ 4ನೇ ಟಿ ಬ್ಲಾಕ್‌ನ 22ನೇ ಮುಖ್ಯರಸ್ತೆ, ತಲಘಟ್ಟಪುರ, ಇಂದಿರಾನಗರ, ಹೆಸರಘಟ್ಟ ಮುಖ್ಯರಸ್ತೆ, ಜಕ್ಕೂರು ಮುಖ್ಯರಸ್ತೆ, ವಿನಾಯಕ ಲೇಔಟ್​ ಮುಂತಾದೆಡೆ ಪವರ್ ಕಟ್ ಉಂಟಾಗಿತ್ತು.

ಭಾನುವಾರ (ಏಪ್ರಿಲ್ 17) ಬೆಂಗಳೂರಿನ ದಕ್ಷಿಣ ವಲಯದಲ್ಲಿ ಮೈಕೋ ಲೇಔಟ್ ಪೊಲೀಸ್ ಠಾಣೆಯ ಸುತ್ತಮುತ್ತ, ಬಿಟಿಎಂ ಲೇಔಟ್ 16ನೇ ಮುಖ್ಯ ರಸ್ತೆ, KPRC ಲೇಔಟ್, ಜಯನಗರ ಈಸ್ಟ್ ಎಂಡ್ ಮುಖ್ಯ ರಸ್ತೆ, ಗೊಟ್ಟಿಗೆರೆ, ಶಾಂತಿನಿಕೇತನ ಲೇಔಟ್, ನ್ಯೂ ಹಾರಿಜನ್ ಕಾಲೇಜು ರಸ್ತೆ, ವಿವೇಕಾನಂದ ಲೇಔಟ್, ಕೃಪಾನಿಧಿ ಕಾಲೇಜು ರಸ್ತೆ, ಕುಂದಲಹಳ್ಳಿ, ತಾವರೆಕೆರೆ ಮುಖ್ಯರಸ್ತೆ, ಮಡಿವಾಳ ಗ್ರಾ.ಪಂ. ರಸ್ತೆ ಹಾಗೂ ಚಿಕ್ಕಾಡುಗೋಡಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಉಮರ್‌ನಗರ, ಚಾಣಕ್ಯ ಲೇಔಟ್, ನಾಗವಾರ, ಕೆ. ನಾರಾಯಣಪುರ, ದೊಮ್ಮಸಂದ್ರ ರಸ್ತೆ, ಕೃಪಾನಿಧಿ ಕಾಲೇಜು ರಸ್ತೆ, ಗೌತಮಪುರ, ಕೇಂಬ್ರಿಡ್ಜ್ ಲೇಔಟ್, ಜೋಗುಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಪೈ ಲೇಔಟ್, ವರ್ತೂರು ರಸ್ತೆ, ಹೊಯ್ಸಳನಗರ ಮತ್ತು ಕೋಡಿಹಳ್ಳಿ 2ನೇ ಮುಖ್ಯ ರಸ್ತೆಯ ಭಾಗಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬಿಇಎಲ್ ಲೇಔಟ್ 1 ಮತ್ತು 2ನೇ ಹಂತ, ಉಳ್ಳಾಲ ನಗರ, ಮಾರುತಿನಗರ, ರಾಬಿನ್ ಥಿಯೇಟರ್ ಸರ್ಕಲ್, ಟಿ.ಪಿ.ಮುಖ್ಯ ರಸ್ತೆ, ಬಿಎಚ್‌ಇಎಲ್ ಲೇಔಟ್, ಉತ್ತರಹಳ್ಳಿ, ಪ್ರಶಾಂತನಗರ, ನಾಗರಭಾವಿ 9ನೇ ಬ್ಲಾಕ್, ಕಾಮಾಕ್ಷಿಪಾಳ್ಯ, ವೃಷಭಾವತಿ ನಗರ, ಸುಂಕದಕಟ್ಟೆ ಮತ್ತು ಚಂದ್ರಾ ಲೇಔಟ್ ಭಾಗಗಳಲ್ಲಿ ಬೆಳಗ್ಗೆ ಮತ್ತು ಸಂಜೆ 5ರವರೆಗೆ ಪವರ್ ಕಟ್ ಇರಲಿದೆ.

ಬೆಂಗಳೂರಿನ ಉತ್ತರ ವಲಯದಲ್ಲಿ ಟಿ. ದಾಸರಹಳ್ಳಿ, ನೃಪತುಂಗ ರಸ್ತೆ, ಮಲ್ಲಸಂದ್ರ, ಬಾಬಾ ನಗರ, ಆರ್‌ಟಿ ನಗರ, ಕೊಡಿಗೇಹಳ್ಳಿ, ಎಂಎಸ್‌ ಪಾಳ್ಯ ವೃತ್ತ, ಏರ್‌ಫೋರ್ಸ್‌ ರಸ್ತೆ, ಹೆಸರಘಟ್ಟ, ಮಾವಳ್ಳಿಪುರ ಮತ್ತು ಮಂಜುನಾಥನಗರದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರುವುದಿಲ್ಲ.

ಇದನ್ನೂ ಓದಿ: Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ನಾಳೆ ಪವರ್ ಕಟ್; ನಿರ್ವಹಣಾ ಕಾಮಗಾರಿ ಆರಂಭಿಸಿದ ಬೆಸ್ಕಾಂ

Viral Video: ಆಂಧ್ರದ ಆಸ್ಪತ್ರೆಯಲ್ಲಿ ಪವರ್ ಕಟ್; ಮೊಬೈಲ್ ಬೆಳಕಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿದ ವೈದ್ಯರು

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ