AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rain: ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ವರುಣನ ಆರ್ಭಟ, ಹಲವೆಡೆ ಭಾರಿ ಮಳೆ

ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ ಸುರಿದಿಯುತ್ತಿದೆ. ಶಾಂತಿನಗರ, ಕೋರಮಂಗಲ, ಆಡುಗೋಡಿ, ಮೆಜೆಸ್ಟಿಕ್, ಜೆ.ಸಿ. ನಗರ, ಜೆ.ಪಿ. ನಗರ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುತ್ತಿದೆ.

Bengaluru Rain: ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ವರುಣನ ಆರ್ಭಟ, ಹಲವೆಡೆ ಭಾರಿ ಮಳೆ
ಬೆಂಗಳೂರು ಮಳೆ
TV9 Web
| Edited By: ಆಯೇಷಾ ಬಾನು|

Updated on:Apr 14, 2022 | 9:54 PM

Share

ಬೆಂಗಳೂರು: ರಾಜಧಾನಿ ಬೆಂಗಳೂರಿನ(Bengaluru Rain) ಸುತ್ತಮುತ್ತ ಮತ್ತೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು ಬೇಸಿಗೆಗೆ ಬೇಸತ್ತಿದ್ದ ಮಂದಿ ಕೂಲ್ ಆಗಿದ್ದಾರೆ. ತಕ್ಷಣಕ್ಕೆ ಸುರಿದ ಬಿರುಗಾಳಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ ಸುರಿದಿಯುತ್ತಿದೆ. ವಿಜಯನಗರ, ಬಸವೇಶ್ವರ ನಗರ, ಮಲ್ಲೇಶ್ವರ, ವಸಂತನಗರ, ಶಾಂತಿನಗರ, ಕೋರಮಂಗಲ, ಇಂದಿರಾ ನಗರ, ಆಡುಗೋಡಿ, ಮೆಜೆಸ್ಟಿಕ್, ಜೆ.ಸಿ. ನಗರ, ಜೆ.ಪಿ. ನಗರ, ಜಯ ನಗರ, ಯಶವಂತಪುರ, ಜಾಲಹಳ್ಳಿ, ಪೀಣ್ಯಾ,ದಾಸರಹಳ್ಳಿ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುತ್ತಿದೆ. ತಾಪಮಾನ ಏರಿಕೆ ಹಿನ್ನೆಲೆ ಬೇಸತ್ತಿದ್ದ ಜನರು ಬೆಂಗಳೂರಿನಲ್ಲಿ ಮಳೆ ಕಂಡು ಸಂತಸಗೊಂಡಿದ್ದಾರೆ. ಆದರೆ, ಜೋರಾಗಿ ಸುರಿಯುತ್ತಿರುವ ಗಾಳಿ, ಮಳೆಗೆ ವಾಹನ ಸವಾರರು ಅಸ್ತವ್ಯಸ್ತರಾಗಿದ್ದಾರೆ. ಕೆಲವೆಡೆ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ತೊಂದರೆ ಉಂಟಾಗಿದೆ.

ಕಳೆದ ಕೆಲ ದಿನಗಳಿಂದ ಸಂಜೆಯಾಗುತ್ತಿದ್ದಂತೆ ಮಳೆರಾಯ ಬೆಂಗಳೂರಿನ ಮಂದಿಗೆ ದರ್ಶನ ತೋರುತ್ತಿದ್ದಾನೆ. ನಿನ್ನೆ ಕೂಡ ನಗರದಲ್ಲಿ ಭಾರಿ ಮಳೆಯಾಗಿದ್ದು ಕೆಲ ಕಡೆ ಅವಘಡಗಳು ಸಂಭವಿಸಿದ್ದವು. ಧಾರಾಕಾರ ಮಳೆ ಹಿನ್ನಲೆ ದ್ವಿಚಕ್ರ ವಾಹನ ಸವಾರರು ಪರದಾಡುತ್ತಿದ್ದು ಬಸ್ ನಿಲ್ದಾಣಗಳಲ್ಲಿ ಬೈಕ್​ಗಳನ್ನು ಪಾರ್ಕ್ ಮಾಡಿ ಮಳೆ ಬೀಳದ ಕಡೆ ನಿಂತಿದ್ದಾರೆ. ಕೆಂಪೇಗೌಡ ರಸ್ತೆ, ಮೆಜೆಸ್ಟಿಕ್ ಸುತ್ತಾ ಮುತ್ತಾ ಟ್ರಾಫಿಕ್ ಜಾಮ್ ಉಂಟಾಗಿದೆ.

ನಗರದ ತಗ್ಗು ಪ್ರದೇಶದ ಬಹುತೇಕ ರಸ್ತೆಗಳು ಮಳೆ‌ ನೀರಿನಿಂದ ಆವೃತಗೊಂಡಿವೆ. ಜಲಾವೃತವಾಗಿ ರಸ್ತೆಗಳು ಕೆರೆಯಂತಾಗಿವೆ. ಚಾಲುಕ್ಯ ಸರ್ಕಲ್, ಶಿವಾನಂದ ವೃತ್ತ, ಓಕಳಿಪುರಂ, ಹಡ್ಸನ್ ಸರ್ಕಲ್, ಬ್ರಿಗೇಡ್ ರೋಡ್ ಜಂಕ್ಷನ್, ಆನಂದರಾವ್ ಸರ್ಕಲ್, ರೇಸ್ ಕೋರ್ಸ್ ರಸ್ತೆ ಬಳಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರು ನಗರದ ಉತ್ತರಹಳ್ಳಿಯಲ್ಲಿ ಮಳೆ ನೀರು ನುಗ್ಗಿ ಅವಾಂತರವಾಗಿದ್ದು ಉತ್ತರಹಳ್ಳಿಯ ಹೇಮಾವತಿ ವಾಟರ್ ಸಪ್ಲೈ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ನೀರು ನುಗ್ಗಿದೆ. ಈ ರಸ್ತೆಯ ಸುಮಾರು 10ಕ್ಕೂ ಅಧಿಕ ಮನೆಗೆಳ ವಸ್ತುಗಳು ನೀರು ಪಾಲಾಗಿವೆ. ಮನೆಯಲ್ಲಿದ್ದ ಫ್ರಿಡ್ಜ್, ಟಿವಿ ಸೇರಿದಂತೆ ಹಲವು ವಸ್ತುಗಳು ನೀರು ಪಾಲಾಗಿವೆ. ಮಳೆ ನೀರು ಹೊರಹಾಕಲು ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಬೆಂಗಳೂರಿನ ನಾಲ್ಕು ಕಡೆ ರಸ್ತೆಗೆ ಉರುಳಿದ ಮರಗಳು ಬೆಂಗಳೂರಿನಲ್ಲಿ ಮಳೆಗೆ ಮರಗಳು ರಸ್ತೆಗೆ ಉರುಳಿವೆ. ಎರಡು ಗಂಟೆ ಸುರಿದ ಧಾರಾಕಾರ ಮಳೆಗೆ ಯಶವಂತಪುರ, ಚಾಮರಾಜಪೇಟೆ, ಹನುಮಂತರನಗರ, ಉತ್ತರಹಳ್ಳಿ ಸೇರಿದಂತೆ ಬೆಂಗಳೂರಿನ ನಾಲ್ಕು ಕಡೆ ಮರಗಳು ರಸ್ತೆಗೆ ಉರುಳಿವೆ. ಬಿಬಿಎಂಪಿ‌‌‌ ಕಂಟ್ರೋಲ್ ರೂಂ ಸ್ಥಳೀಯರಿಗೆ ಮಾಹಿತಿ‌ ನೀಡಿದ್ದಾರೆ.

ಸಿಡಿಲು ಬಿದ್ದು ಧಗ ಧಗನೆ ಹೊತ್ತಿ ಉರಿದ ತೆಂಗಿನ ಮರ ಕೋಲಾರ ಜಿಲ್ಲೆಯಾದ್ಯಂತ ಭಾರಿ ಗುಡುಗು ಸಹಿತ ಮಳೆಯಾಗುತ್ತಿದೆ. ಸಿಡಿಲು ಬಿದ್ದು ತೆಂಗಿನ ಮರ ಧಗ ಧಗನೆ ಹೊತ್ತಿ ಉರಿದಿದೆ. ಕೋಲಾರ ಜಿಲ್ಲೆ ಕೆಜಿಎಫ್​ನ ಉರಿಗಾಂ ಪೇಟೆಯ ಶಿವನ ದೇವಾಲಯದ ಮುಂದೆ ಘಟನೆ ನಡೆದಿದೆ. ಸಂಜೆಯಿಂದ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆ ಸುರಿಯುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪ್ರಾಯವಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ಸಿಡಿಲು ಬಡಿದು ಓರ್ವ ರೈತ ಸಾವು ವಿಜಯಪುರ ಜಿಲ್ಲೆ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಗುಡುಗು ಸಿಡಿಲಿನೊಂದಿಗೆ ವರುಣ ಸುರಿಯುತ್ತಿದ್ದು ಸಿಡಿಲು ಬಡಿದು ಓರ್ವ ರೈತ ಮೃತಪಟ್ಟಿದ್ದಾರೆ. ಜಮೀನಿನಲ್ಲಿದ್ದ ವೇಳೆ ಸಿಡಿಲು ಬಡಿದು ಮರೆಮಸಾಬ್ ಜಾತಗಾರ (42) ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನೆರವೇರಿತು ಆಲಿಯಾ ಭಟ್​-ರಣಬೀರ್ ಕಪೂರ್ ಮದುವೆ; ಕ್ಯೂಟ್​ ದಂಪತಿಯ ಫೋಟೋಗಳು ಇಲ್ಲಿವೆ

ಭಾರತೀಯ ರೈಲ್ವೇ ನಿಯಮ ಬದಲಾವಣೆ; ಪ್ರಯಾಣಿಸುವ ವೇಳೆ ಜೋರಾಗಿ ಮಾತನಾಡುವಂತಿಲ್ಲ, ಹಾಡು ಕೇಳುವಂತಿಲ್ಲ

Published On - 7:52 pm, Thu, 14 April 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು