ಭಾರತೀಯ ರೈಲ್ವೇ ನಿಯಮ ಬದಲಾವಣೆ; ಪ್ರಯಾಣಿಸುವ ವೇಳೆ ಜೋರಾಗಿ ಮಾತನಾಡುವಂತಿಲ್ಲ, ಹಾಡು ಕೇಳುವಂತಿಲ್ಲ
ಮೊಬೈಲ್‌ನಲ್ಲಿ ಹಾಡುಗಳನ್ನು ಕೇಳುವುದಲ್ಲದೆ, ಜನರು ರೈಲುಗಳಲ್ಲಿ ಗುಂಪುಗಳಾಗಿ ಕುಳಿತು ಜೋರಾಗಿ ಮಾತನಾಡುತ್ತಾರೆ ಎಂಬ ಅನೇಕ ದೂರುಗಳು ರೈಲ್ವೆ ಇಲಾಖೆಗೆ ಬಂದಿವೆ.
Indian Railways: ಈಗ ನೀವು ರೈಲಿನಲ್ಲಿ ಪ್ರಯಾಣಿಸುವಾಗ, ಅನೇಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಣ್ಣ ತಪ್ಪು ಕೂಡ ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು. ವಾಸ್ತವವಾಗಿ, ಭಾರತೀಯ ರೈಲ್ವೇಯು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಇದು ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಅನ್ವಯಿಸುತ್ತೆ. ಇತ್ತೀಚೆಗಷ್ಟೇ ರೈಲ್ವೆ ಇಲಾಖೆ ಮಾಡಿರುವ ಬದಲಾವಣೆ ರಾತ್ರಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಬಂಧಿಸಿದೆ. ರೈಲ್ವೆಯ ಹೊಸ ನಿಯಮಗಳ ಪ್ರಕಾರ, ಈಗ ನಿಮ್ಮ ಆಸನ, ಕಂಪಾರ್ಟ್‌ಮೆಂಟ್ ಅಥವಾ ಕೋಚ್‌ನಲ್ಲಿರುವ ಯಾವುದೇ ಪ್ರಯಾಣಿಕರು ಮೊಬೈಲ್‌ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುವಂತಿಲ್ಲ. ಜತೆಗೆ ಜೋರಾಗಿ ಹಾಡುಗಳನ್ನು ಹಾಕುವಂತ್ತಿಲ್ಲ. ಇತರೆ ಪ್ರಯಾಣಿಕರ ನಿದ್ರೆಗೆ ಯಾವುದೇ ತೊಂದರೆಯಾಗದಂತೆ ಮತ್ತು ಪ್ರಯಾಣದ ಸಮಯದಲ್ಲಿ ಶಾಂತಿಯುತವಾಗಿ ಮಲಗಲು ರೈಲ್ವೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಅನೇಕ ಪ್ರಯಾಣಿಕರು ತಮ್ಮ ಕೋಚ್‌ನಲ್ಲಿ ಒಟ್ಟಿಗೆ ಪ್ರಯಾಣಿಸುವವರು ಫೋನ್‌ನಲ್ಲಿ ಜೋರಾಗಿ ಮಾತನಾಡುತ್ತಾರೆ ಅಥವಾ ತಡರಾತ್ರಿಯವರೆಗೆ ಹಾಡುಗಳನ್ನು ಕೇಳುತ್ತಾರೆ ಎಂದು ದೂರಲಾಗಿದೆ. ರೈಲ್ವೆ ಬೆಂಗಾವಲು ಸಿಬ್ಬಂದಿ ಅಥವಾ ನಿರ್ವಹಣಾ ಸಿಬ್ಬಂದಿ ಕೂಡ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಾರೆ ಎಂದು ಕೆಲವು ಪ್ರಯಾಣಿಕರಿಂದ ದೂರು ಬಂದಿವೆ. ಇದಲ್ಲದೇ ಅನೇಕ ಪ್ರಯಾಣಿಕರು ರಾತ್ರಿ 10 ಗಂಟೆಯ ನಂತರವೂ ಲೈಟ್‌ಗಳನ್ನು ಆನ್ ಮಾಡುವುದರಿಂದ ಅವರ ನಿದ್ರೆಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಹೊಸ ನಿಯಮ ರೂಪಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪ್ರಯಾಣಿಕರು ನಿಯಮಗಳನ್ನು ಪಾಲಿಸದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಹೊಸ ನಿಯಮಗಳು ಯಾವುವು ಎಂದು ತಿಳಿಯಿರಿ: ರೈಲಿನಲ್ಲಿ ಪ್ರಯಾಣಿಸುವಾಗ ರಾತ್ರಿ 10 ಗಂಟೆಯ ನಂತರ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಮಂಡಳಿ ನಿರ್ಧರಿಸಿದೆ. ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣದ ವೇಳೆ ಪ್ರಯಾಣಿಕರು ಜೋರಾಗಿ ಮಾತನಾಡುವಂತಿಲ್ಲ, ಸಂಗೀತ ಕೇಳುವಂತಿಲ್ಲ. ಯಾವುದೇ ಪ್ರಯಾಣಿಕರು ದೂರು ನೀಡಿದರೆ, ಅದನ್ನು ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯದ್ದಾಗಿರುತ್ತದೆ.
ಇದನ್ನೂ ಓದಿ:
ಬಾಗಲಕೋಟೆಯಲ್ಲಿ 1 ಲಕ್ಷ 50 ಸಾವಿರ ರೂ ಮೌಲ್ಯದ 800 ಕೆಜಿ ತೂಕದ ಬೃಹತ್ ಸೇಬು ಹಾರಹಾಕಿ ಸಚಿವ S.R.ಪಾಟೀಲ್ಗೆ ಸ್ವಾಗತ
ಈಶ್ವರಪ್ಪ ರಾಜೀನಾಮೆ ನೀಡೋದು ಅನುಮಾನ, ಮೊದಲು ಅವರ ಬಂಧನವಾಗಲೀ ಎಂದ ಕಾಂಗ್ರೆಸ್