ಸಚಿವ ಈಶ್ವರಪ್ಪ ರಾಜೀನಾಮೆ ನೀಡೋದು ಅನುಮಾನ​, ಮೊದಲು ಅವರ ಬಂಧನವಾಗಲೀ ಎಂದ ಕಾಂಗ್ರೆಸ್​

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ 1 ಆಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ ಅವರು ಕೊನೆಗೂ ಒತ್ತಡಕ್ಕೆ ಮಣಿದು, ಶುಕ್ರವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ (KS Eshwarappa Resignation) ನೀಡುವುದಾಗಿ ಶಿವಮೊಗ್ಗದಲ್ಲಿ ಘೋಷಿಸಿದ್ದಾರೆ. ಇದೇ ವೇಳೆ ಈಶ್ವರಪ್ಪ ರಾಜೀನಾಮೆ ಘೋಷಣೆ ಬೆನ್ನಲ್ಲೇ ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ​ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈಶ್ವರಪ್ಪ ನಾಳೆಯೇ ರಾಜೀನಾಮೆ ನೀಡುವೆ ಎಂದಿದ್ದರೂ ಅವರು ರಾಜೀನಾಮೆ ನೀಡುವ ಬಗ್ಗೆ ಕಾಂಗ್ರೆಸ್​​ಗೆ ಅನುಮಾನವಿದೆ, ಮೊದಲು ಸಚಿವ ಈಶ್ವರಪ್ಪ ಬಂಧನವಾಗಲೀ […]

ಸಚಿವ ಈಶ್ವರಪ್ಪ ರಾಜೀನಾಮೆ ನೀಡೋದು ಅನುಮಾನ​, ಮೊದಲು ಅವರ ಬಂಧನವಾಗಲೀ ಎಂದ ಕಾಂಗ್ರೆಸ್​
ಡಿ ಕೆ ಶಿವಕುಮಾರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 15, 2022 | 3:43 PM

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ 1 ಆಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ ಅವರು ಕೊನೆಗೂ ಒತ್ತಡಕ್ಕೆ ಮಣಿದು, ಶುಕ್ರವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ (KS Eshwarappa Resignation) ನೀಡುವುದಾಗಿ ಶಿವಮೊಗ್ಗದಲ್ಲಿ ಘೋಷಿಸಿದ್ದಾರೆ. ಇದೇ ವೇಳೆ ಈಶ್ವರಪ್ಪ ರಾಜೀನಾಮೆ ಘೋಷಣೆ ಬೆನ್ನಲ್ಲೇ ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ​ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈಶ್ವರಪ್ಪ ನಾಳೆಯೇ ರಾಜೀನಾಮೆ ನೀಡುವೆ ಎಂದಿದ್ದರೂ ಅವರು ರಾಜೀನಾಮೆ ನೀಡುವ ಬಗ್ಗೆ ಕಾಂಗ್ರೆಸ್​​ಗೆ ಅನುಮಾನವಿದೆ, ಮೊದಲು ಸಚಿವ ಈಶ್ವರಪ್ಪ ಬಂಧನವಾಗಲೀ ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (KPCC Chief  DK Shivakumar)​ ಪಟ್ಟುಹಿಡಿದಿದ್ದಾರೆ.​

ನಾಳೆ ಈಶ್ವರಪ್ಪ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ. ಆದರೆ ಈಶ್ವರಪ್ಪ ಯಾವತ್ತೂ ನುಡಿದಂತೆ ನಡೆಯುವುದಿಲ್ಲ. ನಾವು ಈಶ್ವರಪ್ಪ ರಾಜೀನಾಮೆ ಬಗ್ಗೆ ಹೆಚ್ಚು ಮಾತಾಡುತ್ತಿಲ್ಲ. ಭ್ರಷ್ಟಾಚಾರದ ಬಗ್ಗೆ ಸೆಕ್ಷನ್​ ಹಾಕದೇ ಕೇಸ್​ ದಾಖಲಿಸಿದ್ದಾರೆ. ನಮ್ಮ ಒತ್ತಾಯ ಭ್ರಷ್ಟಾಚಾರ ಕಾಯ್ದೆಯಡಿ ಕೇಸ್​ ದಾಖಲಿಸಲಿ. ಕೇಸ್​ ದಾಖಲಿಸಿ ಈಶ್ವರಪ್ಪರನ್ನ ಕೂಡಲೇ ಬಂಧಿಸಬೇಕು. ಸುಳ್ಳು ಕಂಪನಿ ಚೇರ್ಮನ್​ ಕೆ.ಎಸ್​.ಈಶ್ವರಪ್ಪ ಎಂದು ಡಿಕೆ ಶಿವಕುಮಾರ್​ ಕಿಡಿಕಾರಿದ್ದಾರೆ. ಮೊದಲು ಕೆ.ಎಸ್​.ಈಶ್ವರಪ್ಪರನ್ನ ಬಂಧಿಸುವ ಕೆಲಸ ಮಾಡಲಿ. ಇದು ಸ್ವಾಭಿಮಾನದ ಜನತೆಯ ಜಯ. ಇದು ಕೇವಲ ಸಿದ್ದರಾಮಯ್ಯ, ಡಿಕೆಶಿ ಜಯ ಅಲ್ಲ ಎಂದು ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ​ ಬಣ್ಣಿಸಿದ್ದಾರೆ.

ಭ್ರಷ್ಟಾಚಾರದ ಕಾಯ್ದೆ ಅಡಿ ಕೇಸ್ ಹಾಕಿ, ಈಶ್ವರಪ್ಪನನ್ನ ಬಂಧಿಸಿ- ಕಾಂಗ್ರೆಸ್ ಭ್ರಷ್ಟಾಚಾರದ ಕಾಯ್ದೆ ಅಡಿ ಕೇಸ್ ಹಾಕಿಲ್ಲ. ನಮ್ಮ ಒತ್ತಾಯ ಏನೆಂದರೆ ಭ್ರಷ್ಟಾಚಾರದ ಕಾಯ್ದೆ ಅಡಿ ಕೇಸ್ ದಾಖಲಿಸಬೇಕು. ಇಂತಹ ಕೇಸ್ ನಲ್ಲಿ ಕೂಡಲೇ ಬಂಧಿಸಬೇಕು. ಇದು ವಿಶೇಷ ಕೇಸ್ ಅಲ್ಲ. ಅಂಗೈಯಲ್ಲಿ ಇರುವ ಹುಣ್ಣಿಗೆ ಕನ್ನಡಿ ಏಕೆ? ಸಂತೋಷ್​ ಯಾರು ನನಗೆ ಗೊತ್ತೇ ಇಲ್ಲ ಅಂತಾ ಈಶ್ವರಪ್ಪ ಅಂದಿದ್ದರು. ಆದರೆ ಗ್ರಾಮ ಪಂಚಾಯತಿ ಅಧ್ಯಕ್ಷ ನಾನೇ ಕರೆದುಕೊಂಡು ಈಶ್ವರಪ್ಪ ಅವರ ಬಳಿಗೆ ಹೋಗಿದಿನಿ ಅಂತಾ ಹೇಳಿದ್ದಾರೆ. ಈಶ್ವರಪ್ಪ ಸುಳ್ಳಿನ ಫ್ಯಾಕ್ಟರಿ. ಮೊದಲು ಈಶ್ವರಪ್ಪ ಬಂಧಿಸಿ. ಬಳಿಕ ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ನಡೆಯಲಿ. ಅವರು ಗುತ್ತಿಗೆ ಕೆಲಸನೇ ಮಾಡಿಲ್ಲ ಅಂತಾ ಈಶ್ವರಪ್ಪ ಹೇಳ್ತಾರೆ. ಆದರೆ ಸಂತೋಷ್ ಕೆಲಸ ಮಾಡಿರೋ ಫೋಟೊಗಳು ಇವೆ. ನಮ್ಮ‌ಹೋರಾಟ ಇಲ್ಲಿಗೆ ನಿಲ್ಲೋದಿಲ್ಲ. ಮೊದಲು ಅವರನ್ನ ಅರೆಸ್ಟ್ ಮಾಡಬೇಕು. ಅವರ ಮೇಲೆ ಕರಪ್ಶನ್ ಕೇಸ್ ಹಾಕಬೇಕು ಎಂದು ಡಿಕೆ ಶಿವಕುಮಾರ್​ ಹೇಳಿದರು.

ಮೂರೂ ಆರೋಪಿಗಳ ಬಂಧನವಾಗಲಿ; ಜೊತೆಗೆ ಕಾಮಗಾರಿ ಬಿಲ್ ಆಗಬೇಕು: ಈ ಮಧ್ಯೆ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಅವರ ಸಹೋದರ ಪ್ರಶಾಂತ್‌ ಮಾತನಾಡಿದ್ದು, ಕೇವಲ ರಾಜೀನಾಮೆ ನೀಡಿದರೆ ಸಾಕಾಗಲ್ಲ. ಕೂಡಲೇ ಈಶ್ವರಪ್ಪ ಸೇರಿ ಮೂವರೂ ಆರೋಪಿಗಳನ್ನು ಬಂಧಿಸಬೇಕು. ಜೊತೆಗೆ ಕಾಮಗಾರಿ ಬಿಲ್ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಈಶ್ವರಪ್ಪ ರಾಜೀನಾಮೆ ವಿಷ್ಯ Tv9 ಮೂಲಕ ತಿಳಿದುಕೊಂಡ ಸಿದ್ರಾಮಯ್ಯ

ಇದೂ ಓದಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ತನಿಖಾ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ -ಸಿಎಂ ಬೊಮ್ಮಾಯಿ

ಇದೂ ಓದಿ: KS Eshwarappa Resigns: ಶುಕ್ರವಾರ ಸಂಜೆ ರಾಜೀನಾಮೆ ನೀಡುವೆ, ಸಚಿವ ಕೆ ಎಸ್​ಈಶ್ವರಪ್ಪ ಘೋಷಣೆ

Published On - 6:39 pm, Thu, 14 April 22

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ