ಆ್ಯಸಿಡ್ ಸಂತ್ರಸ್ತರ ಮಾಸಾಶನ ಹೆಚ್ಚಿಸಿದ ಸಿಎಂ ಬೊಮ್ಮಾಯಿ, ನಿವೇಶನ ಕೊಡುವ ಬಗ್ಗೆ ನಾಳೆಯೊಳಗೆ ಆದೇಶ ಪ್ರಕಟ; ಸಿಎಂಗೆ ಧನ್ಯವಾದ ತಿಳಿಸಿ ಸಚಿವ ಅಶೋಕ್ ಭಾವುಕ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಹಲೋ ಕಂದಾಯ ಸಚಿವರೇ ಸಹಾಯವಾಣಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆ್ಯಸಿಡ್ ಸಂತ್ರಸ್ತರ ಮಾಸಾಶನ 3 ಸಾವಿರದಿಂದ 10 ಸಾವಿರ ರೂ.ಗೆ ಹೆಚ್ಚಳ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಬೆಂಗಳೂರು: ಆ್ಯಸಿಡ್ ಸಂತ್ರಸ್ತರ ಮಾಸಾಶನ 3 ಸಾವಿರದಿಂದ 10 ಸಾವಿರ ರೂ.ಗೆ ಹೆಚ್ಚಳ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಕಾರ್ಯಕ್ರಮಯೊಂದರಲ್ಲಿ ಘೋಷಿಸಿದ್ದಾರೆ. ನಿವೇಶನದ ವ್ಯವಸ್ಥೆ ಬಗ್ಗೆ ನಾಳೆಯೊಳಗೆ ಆದೇಶ ಪ್ರಕಟಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸ್ವಸಹಾಯ ಸಂಘಗಳಿಂದಲೂ 5 ಲಕ್ಷದವರೆಗೆ ಸಾಲ ಕೊಡಿಸುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸಾಲ ಸೌಲಭ್ಯ ಘೋಷಿಸಿದ್ದಕ್ಕೆ ಸಿಎಂಗೆ ಕಂದಾಯ ಸಚಿವ ಆರ್.ಅಶೋಕ್ ಧನ್ಯವಾದ ಹೇಳಿದ್ರು. ಈ ವೇಳೆ ಸಚಿವ ಅಶೋಕ್ ಭಾವುಕರಾದ್ರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಹಲೋ ಕಂದಾಯ ಸಚಿವರೇ ಸಹಾಯವಾಣಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಆಡಳಿತ & ರಾಜಕಾರಣ ಎರಡೂ ಕೂಡ ಜನಪರವಾಗಿರಬೇಕು. ರಾಜಕಾರಣದಲ್ಲಿ ಎರಡು ರೀತಿಯ ರಾಜಕಾರಣ ಇದೆ. ಒಂದು ಪೀಪಲ್ ಪಾಲಿಟಿಕ್ಸ್, ಇನ್ನೊಂದು ಪವರ್ ಪಾಲಿಟಿಕ್ಸ್. ಅಧಿಕಾರದಲ್ಲಿದ್ದಾಗ ತಮ್ಮ ಸ್ವಂತದ ಬಗ್ಗೆ ಯೋಚನೆ ಮಾಡಿದವರು. ಅಂಥವರು ದೇಶಕ್ಕೆ ಹಾನಿ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ. ನಾವು ವಿಧಾನಸಭೆಯಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತೇವೆ. ಆದರೆ ಹಳ್ಳಿಯಲ್ಲಿ ರೈತರು ಸಮಸ್ಯೆಗಳ ಜೊತೆ ಜೀವನ ಮಾಡ್ತಾರೆ. ಸಮಸ್ಯೆಗಳ ಚರ್ಚೆಗೂ & ಜೀವನ ಮಾಡುವುದಕ್ಕೂ ವ್ಯತ್ಯಾಸ ಇದೆ. ಜನರ ಜೊತೆ ಸಂಪರ್ಕ ಇದ್ದರೆ ಮಾತ್ರ ಜನಪರ ಆಡಳಿತ ಸಾಧ್ಯ. ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ.
ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯನ ಶಿಲಾ ಶಾಸನದಲ್ಲಿದೆ. ಜನರ ಸಮಸ್ಯೆ ಪರಿಹರಿಸುವ ಹೃದಯ ಶ್ರೀಮಂತಿಕೆ ಇರಬೇಕು. ಈವರೆಗೆ ಇಲಾಖೆ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಆಗಿರಲಿಲ್ಲ. ಜನರು ದಾಖಲೆ ಪಡೆದುಕೊಳ್ಳುವ ವ್ಯವಸ್ಥೆ ಯಾರೂ ಸರಿಪಡಿಸಿರಲಿಲ್ಲ. ಮನೆ ಬಾಗಿಲಿಗೆ ಸರ್ಕಾರ ಬರುವುದು ಅಧಿಕಾರದ ವಿಕೇಂದ್ರೀಕರಣ. ವಿಧಾನಸೌಧದಲ್ಲಿ ಹೆಪ್ಪುಗಟ್ಟಿದಂತೆ ಇದ್ದರೆ ಜನರಿಗೆ ತಲುಪುವುದಿಲ್ಲ. ಅಧಿಕಾರ ಜನರ ಬಳಿ ಜೇನು ತುಪ್ಪದಂತೆ ಹರಿದು ಹೋಗಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ರು.
72 ಗಂಟೆಗಳಲ್ಲಿ ಸರ್ಕಾರದಿಂದ ಮನೆ ಬಾಗಿಲಿಗೆ ಪಿಂಚಣಿ ಸೇವೆ ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, 72 ಗಂಟೆಗಳಲ್ಲಿ ಸರ್ಕಾರದಿಂದ ಮನೆ ಬಾಗಿಲಿಗೆ ಪಿಂಚಣಿ ಸೇವೆ ಕಲ್ಪಿಸಲಾಗಿದೆ. ಎಲ್ಲೋ ವಿಧಾನಸೌಧದಲ್ಲಿ ಕೂತು ಹಲವಾರು ಯೋಜನೆ ಮಾಡುತ್ತೇವೆ. ಆದರೆ ಜನರಿಗೆ ಏನು ಆಗಬೇಕಾಗಿದೆ ಅದನ್ನು ಮಾಡಬೇಕು. ಗ್ರಾಮ ವಾಸ್ತವ್ಯದ ವೇಳೆ ಪಿಂಚಣಿಗಾಗಿ ಸಾವಿರಾರು ಜನ ನಿಂತಿರುವುದು ನೋಡಿದೆ. ವೃದ್ಧರು, ವಿಧವೆ, ಆಸಿಡ್ ದಾಳಿಗೊಳಗಾದವರು ಪಿಂಚಣಿಗಾಗಿ ಕಾಯುವುದು ಸಾಮಾನ್ಯವಾಗಿದೆ. ಅವರ ಬವಣೆ ಅರ್ಥ ಮಾಡಿಕೊಳ್ಳುವವರೇ ಇಲ್ಲ. 10,000 ಕೋಟಿ ರೂ. ಪಿಂಚಣಿ ಹಣ ಕೊಡುತ್ತಿದ್ದೇವೆ. 4 ಲಕ್ಷ ಬೋಗಸ್ ಪಿಂಚಣಿ ಪ್ರಮಾಣ ಪತ್ರ ರದ್ದು ಮಾಡಿದ್ದೇವೆ. ಹಲೋ ಅಂದರೆ ಹೇಗೆ ಪಿಂಚಣಿ ಸಿಗುತ್ತೆ ಎಂಬುದು ಎಲ್ಲರ ಕುತೂಹಲವಾಗಿತ್ತು. ಅರ್ಜಿದಾರರಿಂದ ಆಧಾರ್ ನಂ. ಮತ್ತು ಬ್ಯಾಂಕ್ ಖಾತೆ ನಂ. ಮಾತ್ರ ಕೇಳುತ್ತೇವೆ. ಪಿಂಚಣಿ ಅರ್ಹರ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ. ಅಷ್ಟಿದ್ದರೂ ಅವರಿಗೆ ಮತ್ತೆ ದಾಖಲೆ ಕೊಡುವ ಪರಿಸ್ಥಿತಿ ಇತ್ತು. ಈಗ ನೂರು ರೂಪಾಯಿ ಕೊಟ್ಟರೆ ನೂರು ರೂಪಾಯಿ ಫಲಾನುಭವಿಗಳ ಖಾತೆಗೆ ಹೋಗುತ್ತದೆ. ಪೋಸ್ಟ್ ಮ್ಯಾನ್ ಹಣ ತಲುಪಿಸುವ ವ್ಯವಸ್ಥೆ ಈಗ ಇಲ್ಲ. ಹಣ ಅವರ ಖಾತೆಗೆ ನೇರವಾಗಿ ಹೋಗುತ್ತದೆ. ಅಧಿಕಾರಿಗಳು ಮನೆ ಬಾಗಿಲಿಗೆ ಹೋಗುವಂತಹ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದರು.
Published On - 4:29 pm, Fri, 13 May 22