ರಮ್ಯಾ ಟ್ವೀಟ್ನಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಶೇಪ್ಔಟ್ ಆಗಿದೆ; ನನ್ನನ್ನು ಟಚ್ ಮಾಡಿ ಅಯ್ಯೋ ಪಾಪ ಅನ್ನೋ ಸ್ಥಿತಿಗೆ ಬಂದಿದ್ದಾರೆ -ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
ವ್ಯಕ್ತಿಯ ಸ್ವಾತಂತ್ರ್ಯ ಪರಸ್ಪರ ಸಂಬಂಧ ಸ್ನೇಹ ಪ್ರಶ್ನಿಸುವ ಕೀಳುಮಟ್ಟಕ್ಕೆ ಹೋದಂತ ವ್ಯಕ್ತಿ ಡಿಕೆಶಿ. ಅವರ ಬಗ್ಗೆ ಅವರದೇ ಎಲ್ಲ ನಾಯಕರು ಸಂಪೂರ್ಣ ಖಂಡಿಸಿದ್ದಾರೆ. ಏನೋ ಆಪಾದನೆ ಮಾಡಬೇಕು, ಅದಕ್ಕೊಂಡು ಅರ್ಥ ಕಲ್ಪಿಸಿ ದಿಕ್ಕು ತಪ್ಪಿಸಬೇಕು ಅಂತ ಹೊರಟಿದ್ದವರಿಗೆ ಅವರ ಪಕ್ಷದವರೇ ತಕ್ಕ ಪಾಠ ಕಲಿಸಿದ್ದಾರೆ.
ಬೆಂಗಳೂರು: ಮಾಜಿ ಸಂಸದೆ ರಮ್ಯಾ(Ramya) ಟ್ವೀಟ್ನಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ(DK Shivakumar) ಶೇಪ್ಔಟ್ ಆಗಿದೆ ಎಂದು ಬೆಂಗಳೂರಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಟಾಂಗ್ ಕೊಟ್ಟಿದ್ದಾರೆ. ತಾನು ಯಾರಿಗೆ ಬೇಕಾದರೂ ತಾಗ್ತೀನಿ ಅಂತ ಬಿಲ್ಡಪ್ ಕೊಡ್ತಿದ್ರು. ಆದರೆ ಈಗ ಡಿಕೆಶಿವಕುಮಾರ್ಗೆ ಶೇಪ್ಔಟ್ ಆಗಿದೆ. ರಮ್ಯಾ ಟ್ವೀಟ್ ಬಳಿಕ ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದಾರೆ. ಇಂಥವರು ನಮ್ಮ ಅಧ್ಯಕ್ಷರಾ ಎಂದು ಮುಜುಗರ ಅನುಭವಿಸ್ತಿದ್ದಾರೆ. ಅಶ್ವತ್ಥ್ ನಾರಾಯಣನನ್ನು ಮುಗಿಸುತ್ತೇನೆ ಎಂದು ಹೊರಟಿದ್ರು. ಈಗ ಡಿಕೆಶಿಯೇ ರಾಜಕೀಯವಾಗಿ ಮುಗಿದು ಹೋಗುತ್ತಿದ್ದಾರೆ. ನಟಿ ರಮ್ಯಾ ಪಾಪ ಹೆಣ್ಣುಮಗಳು, ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಡಿಕೆ ಶಿವಕುಮಾರ್ಗೆ ಟಾಂಗ್ ಕೊಟ್ಟಿದ್ದಾರೆ.
ವ್ಯಕ್ತಿಯ ಸ್ವಾತಂತ್ರ್ಯ ಪರಸ್ಪರ ಸಂಬಂಧ ಸ್ನೇಹ ಪ್ರಶ್ನಿಸುವ ಕೀಳುಮಟ್ಟಕ್ಕೆ ಹೋದಂತ ವ್ಯಕ್ತಿ ಡಿಕೆಶಿ. ಅವರ ಬಗ್ಗೆ ಅವರದೇ ಎಲ್ಲ ನಾಯಕರು ಸಂಪೂರ್ಣ ಖಂಡಿಸಿದ್ದಾರೆ. ಏನೋ ಆಪಾದನೆ ಮಾಡಬೇಕು, ಅದಕ್ಕೊಂಡು ಅರ್ಥ ಕಲ್ಪಿಸಿ ದಿಕ್ಕು ತಪ್ಪಿಸಬೇಕು ಅಂತ ಹೊರಟಿದ್ದವರಿಗೆ ಅವರ ಪಕ್ಷದವರೇ ತಕ್ಕ ಪಾಠ ಕಲಿಸಿದ್ದಾರೆ. ಇನ್ಮುಂದೆ ಡಿಕೆ ಶಿವಕುಮಾರ್ ಇಂಥ ಮಾತನಾಡಲ್ಲ ಅನಿಸುತ್ತದೆ. ಡಿಕೆ ಶಿವಕುಮಾರ್ ಇದನ್ನು ಅರ್ಥ ಮಾಡ್ಕೋತಾರೆ ಅನ್ಸತ್ತೆ. ಈ ರೀತಿಯ ಹೇಳಿಕೆ ಮೂಲಕ ಅವರ ವ್ಯಕ್ತಿತ್ವ ಮನೋಭಾವ ಏನು ಅನ್ನೋದು ಬಹಳ ಸ್ಪಷ್ಟವಾಗಿ ಗೊತ್ತಾಗ್ತಿದೆ. ಹೀಗಾಗಿ ನನಗೆ ಸಂತೋಷ ಆಗ್ತಿದೆ.
ನನ್ನನ್ನು ಟಚ್ ಮಾಡಿ ಅಯ್ಯೋ ಪಾಪ ಅನ್ನೋ ಸ್ಥಿತಿಗೆ ಬಂದಿದ್ದಾರೆ ಅವರ ಆಂತರಿಕ ವಿಚಾರ, ಆದರೂ ಮಾಧ್ಯಮಗಳು ನನ್ನನ್ನೂ ಇದರಲ್ಲಿ ಸೇರಿಸಿದ್ದೀರಾ. ಡಿಕೆ ಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡಿದ್ದು ಅವರ ತಪ್ಪು. ನನ್ನನ್ನು ಟಚ್ ಮಾಡಿ ಅಯ್ಯೋ ಪಾಪ ಅನ್ನೋ ಸ್ಥಿತಿಗೆ ಬಂದಿದ್ದಾರೆ. ಎಂಥ ವ್ಯಕ್ತಿ ಅಧ್ಯಕ್ಷರಾಗಿದ್ದಾರಪ್ಪ ಅನ್ನೋ ಮುಜುಗರ ಕಾಂಗ್ರೆಸ್ ನಾಯಕರಿಗೆ ಆಗಿದೆ. ಅನುಕಂಪ ಒಳ್ಳೆಯವರ ಮೇಲೆ ಇರತ್ತೆ, ಸಜ್ಜನರ ಮೇಲೆ ಇರತ್ತೆ, ಡಿಕೆ ಶಿವಕುಮಾರ್ ಅಂಥವರ ಮೇಲಲ್ಲ. ಅವರದೇ ಪಕ್ಷದ ಹೆಣ್ಣು ಮಗಳ ಮೇಲೆಯೇ ತೇಜೋವಧೆ ಮಾಡಿದರೆ ಏನಾಗತ್ತೆ ಎನ್ನುವ ಬಿಸಿ ಡಿಕೆ ಶಿವಕುಮಾರ್ಗೆ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು ಕೊಟ್ಟಿದ್ದಾರೆ.
Published On - 3:13 pm, Fri, 13 May 22