AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನತಾ ಜಲಧಾರೆ ಸಮಾರೋಪ ಸಮಾರಂಭಕ್ಕು ಮುನ್ನ ತಂದೆ, ತಾಯಿ ಆಶಿರ್ವಾದ ಪಡೆದ ಹೆಚ್.ಡಿ. ಕುಮಾರಸ್ವಾಮಿ, ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗಿ

ಜನತಾ ಜಲಧಾರೆ ಸಂಕಲ್ಪ ಸಮಾವೇಶಕ್ಕೆ ತೆರಳುವ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಂದೆ, ತಾಯಿಯ ಆಶೀರ್ವಾದ ಪಡೆದಿದ್ದಾರೆ.

ಜನತಾ ಜಲಧಾರೆ ಸಮಾರೋಪ ಸಮಾರಂಭಕ್ಕು ಮುನ್ನ ತಂದೆ, ತಾಯಿ ಆಶಿರ್ವಾದ ಪಡೆದ ಹೆಚ್.ಡಿ. ಕುಮಾರಸ್ವಾಮಿ, ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗಿ
ಜೆಡಿಎಸ್ ಜನತಾ ಜಲಧಾರೆ
TV9 Web
| Edited By: |

Updated on:May 13, 2022 | 1:50 PM

Share

ಬೆಂಗಳೂರು : ನೆಲಮಂಗಲದಲ್ಲಿಂದು (13 May) (JDS) ಜನತಾ ಜಲಧಾರೆ ಸಂಕಲ್ಪ ಸಮಾವೇಶ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ, ಸಮಾವೇಶಕ್ಕೆ ತೆರಳುವ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumarswamy) ತಂದೆ, ತಾಯಿಯ ಆಶೀರ್ವಾದ ಪಡೆದಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದ ನಿವಾಸಕ್ಕೆ ತರಳಿದ ಹೆಚ್.ಡಿ.ಕೆ ತಂದೆ ಹೆಚ್.ಡಿದೇವೇಗೌಡ (HD Devegouda), ತಾಯಿ ಚನ್ನಮ್ಮ ಅವರ ಆಶೀರ್ವಾದ ಪಡೆದು, ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಜನತಾ ಜಲಧಾರೆ ಸಮಾರೋಪ ಸಮಾರಂಭವು ನೆಲಮಂಗಲ ಸಮಿಪದ ನೆಲಮಂಗಲ ಸಮೀಪದ ಬಾವಿಕೆರೆ ಬಳಿಯ ಬೆಂಗಳೂರುಹಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಈ ಜನತಾ ಜನತಾ ಜಲದಾರೆ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ಹಾಸನದಿಂದ ಅಪಾರ ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಬರುತ್ತಿದ್ದಾರೆ. ಸಮಾರಂಭಕ್ಕೆ ಹಾಸನ ಜಿಲ್ಲೆಯಾದ್ಯಂತ 547 ಸಾರಿಗೆ ಬಸ್ ,600 ಖಾಸಗಿ ವಾಹನಗಳಲ್ಲಿ ಸಮಾರಂಭಕ್ಕೆ ಸಹಸ್ರಾರು ಜನ ಹೊರಟಿದ್ದಾರೆ. ಜಿಲ್ಲೆಯ ಎಂಟೂ ತಾಲ್ಲೂಕಿನಿಂದ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿಗರು ಹೊರಟಿದ್ದಾರೆ. ಹಾಸನ ನಗರದ ರಿಂಗ್ ರಸ್ತೆಯಿಂದ 150 ಬಸ್ ಗಳು ಸಮಾರೋಪ ಸಮಾರಂಭಕ್ಕೆ ಹೊರಟವೆ. ವಾಹನಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಪರ ಜಯಘೋಷ ಮೊಳಗಿಸುತ್ತಾ ಬೆಂಗಳೂರಿನತ್ತ ಹೊರಟಿದ್ದಾರೆ.

ಕಳೆದ ತಿಂಗಳು ಎಪ್ರೀಲ್ 16ರಂದು ಹನುಮ ಜಯಂತಿ ದಿನದಂದು ಜನತಾ ಜಲಧಾರೆ ಪ್ರಾರಂಭವಾಗಿದೆ. ಈ ಜನತಾ ಜಲಧಾರೆ ಸಮಾರೋಪ ಸಮಾವೇಶದಲ್ಲಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಗಂಗಾ ಮಾತೆಯ ಸಾಕ್ಷಿಯಾಗಿ ಸಂಕಲ್ಪ ಮಾಡಲಾಗುವುದು.

ಅಡುಗೆ ವ್ಯವಸ್ಥೆ

ಜನತಾ ಜಲಧಾರೆ (Janata Jaladhare) ಸಮಾವೇಶ ಸಮಾರೋಪ ಸಮಾವೇಶದಲ್ಲಿ, 5 ಲಕ್ಷ ಜನರಿಗೆ ಊಟೋಪಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.  ಸಮಾವೇಶದಲ್ಲಿ ಒಟ್ಟು 5 ಲಕ್ಷ ಜನರಿಗೆ ಅಡುಗೆ ವ್ಯವಸ್ಥೆ ಮಾಡಿಸಲಾಗಿದೆ. 3000 ಬಾಣಸಿಗರು ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ. ಇನ್ನು ಊಟ ಬಡಿಸಲು 2000 ಸಾವಿರ ಸಿಬ್ಬಂದಿ ಇದ್ದಾರೆ.

ಬೆಳಗ್ಗೆ 10 ಗಂಟೆಯಿಂದಲೇ ಜನರಿಗೆ ಫಲಾವ್ ಮತ್ತು ಜಿಲೇಬಿಯನ್ನು ನೀಡಲಾಗಿದೆ. ಸಂಜೆ 4 ಗಂಟೆಗೆ ಉಪ್ಪಿಟ್ಟು ಕೇಸರಿಬಾತ್ ಕೊಡಲಾಗುವುದು. ಜತೆಯಲ್ಲಿ ಮಜ್ಜಿಗೆಯನ್ನು ನೀಡಲಾಗುವುದು. ಸಮಾವೇಶದ ಅಡುಗೆ ನೇತೃತ್ವವನ್ನು ಸತೀಶ್ ಅವರ ನೇತೃತ್ವದ ಎ.ಎಸ್. ಕೇಟರಿಂಗ್ ವಹಿಸಿಕೊಂಡಿದ್ದು, ಬೃಹತ್ ಪ್ರಮಾಣದಲ್ಲಿ ಆಗುತ್ತಿರುವ ಅಡುಗೆ ತಯಾರಿ ಕೆಲಸವನ್ನು ಕುದ್ದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪರಿಶೀಲಿಸಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:41 pm, Fri, 13 May 22