ಈ ಇಳಿ ವಯಸ್ಸಿನಲ್ಲಿ ಏನು ಹೇಳುತ್ತೇನೆ ಎಂದು ಕೇಳುವ ಕುತೂಹಲ ಜೆಡಿಎಸ್ ಮುಖಂಡರಿಗಿದೆ: ದೇವೇಗೌಡ

Updated on: Nov 06, 2024 | 2:18 PM

ಕೇಂದ್ರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರದಿದ್ದರೆ ನಿಖಿಲ್ ಚನ್ನಪಟ್ಟಣದಿಂದ ಸ್ಪರ್ಧಿಸುವ ಪ್ರಶ್ನೆ ಏಳುತ್ತಿರಲಿಲ್ಲ, ಇಲ್ಲಿನ ಉಪ ಚುನಾವಣೆಗೆ ನಿಖಿಲ್ ನನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿಸಬೇಕೆಂದು ಹೇಳಿದ್ದು ತಾನು ಎಂದ ದೇವೇಗೌಡ, ಎಲ್ಲ ಮುಖಂಡರು ತನ್ನ ನಿರ್ಧಾರವನ್ನು ಒಪ್ಪಿದ್ದಾರೆ, ಒಬ್ಬ ಅತ್ಯುತ್ತಮ ನಾಯಕನಾಗುವ ಲಕ್ಷಣಗಳು ನಿಖಿಲ್​ನಲ್ಲಿವೆ ಅಂತ ಹೇಳಿದರು.

ರಾಮನಗರ: ಹೆಚ್ ಡಿ ಕುಮಾರಸ್ವಾಮಿಯವರ ಹಾಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಹ ಚನ್ನಪಟ್ಟಣ ಉಪ ಚುನಾವಣೆಯನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದಾರೆ. ಇಂದು ರಾಮನಗರದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ದೇವೇಗೌಡರು, ಚನ್ನಪಟ್ಟಣ ಕ್ಷೇತ್ರದ ಎಲ್ಲ 200 ಹಳ್ಳಿಗಳನ್ನು ಸುತ್ತುವುದು ತನಗೆ ಸಾಧ್ಯವಾಗಲ್ಲ, ಅದರೆ ಪ್ರತಿ ಗ್ರಾಮ ಪಂಚಾಯತ್​ಗೆ ಹೋಗಿ ನಿಖಿಲ್ ಪರವಾಗಿ ಮತ ಯಾಚಿಸುತ್ತೇನೆ ಎಂದು ಹೇಳಿದರು. ತನ್ನ ಸಭೆಗೆ ಎಲ್ಲ ಗ್ರಾಮಗಳ ಜೆಡಿಎಸ್ ಮುಖಂಡರು ಬರುತ್ತಾರೆ, 92ರ ಇಳಿವಯಸ್ಸಿನಲ್ಲಿ ತಾನು ಏನು ಹೇಳುತ್ತೇನೆ ಅನ್ನೋದನ್ನು ಕೇಳುವ ಕುತೂಹಲದಿಂದ ಅವರು ಬರುತ್ತಾರೆ ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜನರ ಆಶೀರ್ವಾದವಿದ್ದರೆ ಇನ್ನೂ ನಾಲ್ಕಾರು ವರ್ಷ ಜನಸೇವೆ ಮಾಡುತ್ತೇನೆ: ಹೆಚ್ ಡಿ ದೇವೇಗೌಡ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More