ಎಸ್ ಪಿ ಎದುರೇ ಪೇದೆಯೊಬ್ಬರ ಮೇಲೆ ಹಲ್ಲೆ ಮಾಡಿರುವ ಡಿವೈಎಸ್ ಪಿ ವಿರುದ್ಧ ಹೆಚ್ ಡಿ ರೇವಣ್ಣ ಕಿಡಿಕಾರಿದರು
ಆಸ್ಪತ್ರೆಗೆ ದಾಖಲಾಗಿರುವ ಕಾನ್ಸ್ಟೇಬಲ್ ಜೊತೆ ಮಾತಾಡಲು ಹೋದ ರೇವಣ್ಣ ಡಿವೈಎಸ್ ಪಿ ಗೆ ತರಾಟೆ ತೆಗೆದುಕೊಳ್ಳಲು ಪೋನ್ ಮಾಡಿದಾಗ ಆ ಅಧಿಕಾರಿ ತನ್ನ ಪೋನನ್ನು ಬೇರೆಯವರಿಗೆ ಕೊಟ್ಟಂತೆ ಕಾಣಿಸುತ್ತದೆ. ಮಾತಾಡಿದ ವ್ಯಕ್ತಿಗೆ ರೇವಣ್ಣ ತಾಕೀತು ಮಾಡಿದ್ದಾರೆ.
ಹಾಸನದ ಡಿವೈ ಎಸ್ ಪಿಯದ್ದೇ ಏನೋ ಸಮಸ್ಯೆ ಇರುವಂತಿದೆ. ಹಿಂದೆ ಹಾಸನದಲ್ಲಿ ಜೆಡಿ(ಎಸ್) ಕಾರ್ಯಕರ್ತನೊಬ್ಬನ ಪೋಸ್ಟ್ ಮಾರ್ಟಮ್ ಗೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ಫೋನಲ್ಲಿ ಡಿವೈಎಸ್ ಪಿ ಮೇಲೆ ಮನಬಂದಂತೆ ಕೂಗಾಡಿದಾಗ ನಾವೇ ರೇವಣ್ಣನವರನ್ನು ಟೀಕಿಸಿದ್ದು ನಿಮಗೆ ಗೊತ್ತಿದೆ. ಅದರೆ ಹಾಸನದಲ್ಲಿ ಅದೇ ಡಿವೈಎಸ್ ಪಿ (DySP) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಮ್ಮುಖದಲ್ಲೇ ಒಬ್ಬ ಪೊಲೀಸ ಪೇದೆಯ (police constable) ಮೇಲೆ ಹಲ್ಲೆ ಮಾಡಿದ್ದಾರೆ. ಇದು ಅಧಿಕಾರದ ದರ್ಪ ಮತ್ತು ದುಷ್ಟತನವಲ್ಲದೆ ಬೇರೇನೂ ಅಲ್ಲ. ಆಸ್ಪತ್ರೆಗೆ ದಾಖಲಾಗಿರುವ ಕಾನ್ಸ್ಟೇಬಲ್ ಜೊತೆ ಮಾತಾಡಲು ಹೋದ ರೇವಣ್ಣ ಡಿವೈಎಸ್ ಪಿ ಗೆ ತರಾಟೆ ತೆಗೆದುಕೊಳ್ಳಲು ಪೋನ್ ಮಾಡಿದಾಗ ಆ ಅಧಿಕಾರಿ ತನ್ನ ಪೋನನ್ನು ಬೇರೆಯವರಿಗೆ ಕೊಟ್ಟಂತೆ ಕಾಣಿಸುತ್ತದೆ. ಮಾತಾಡಿದ ವ್ಯಕ್ತಿಗೆ ರೇವಣ್ಣ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ: Viral Video: ತಡವಾಗಿ ಬಂದ ಶಿಕ್ಷಕಿಗೆ ಚಪ್ಪಲಿಯಲ್ಲಿ ಥಳಿಸಿದ ಪ್ರಿನ್ಸಿಪಾಲ್; ಶಾಕಿಂಗ್ ವಿಡಿಯೋ ವೈರಲ್