Loading video

SR Srinivas: ಇಂದು ಪಕ್ಷದಿಂದ ಅಧಿಕೃತವಾಗಿ ಹೊರಬೀಳಲಿದ್ದಾರೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್

Updated on: Mar 27, 2023 | 10:10 AM

ತಮ್ಮ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವಿನ ಸಂಬಂಧ ಅಣ್ಣತಮ್ಮಂದಿರಂತಿತ್ತು. ಸುಮಾರು ಒಂದೂವರೆ ವರ್ಷಗಳ ಹಿಂದೆ ಆ ಸಂಬಂಧಕ್ಕೆ ಯಾರೋ ಹುಳಿ ಹಿಂಡಿದರು ಅಂತ ಶ್ರೀನಿವಾಸ್ ಹೇಳಿದರು.

ತುಮಕೂರು: ಗುಬ್ಬಿ ಕ್ಷೇತ್ರದ (Gubbi constituency) ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ (SR Srinivas) ಇಂದು ಬೆಳಗ್ಗೆ 11 ಗಂಟೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಪಕ್ಷದಿಂದ ಹೊರಬೀಳಲಿದ್ದಾರೆ. ಹೊರಬೀಳಲಿದ್ದರೋ ಅಥವಾ ಹೊರದೊಬ್ಬಲ್ಪಟ್ಟಿರುವರೋ ಅಂತ ಗುಬ್ಬಿ ಜನರೇ ಹೇಳಬೇಕು. ಯಾಕೆಂದರೆ, ರಾಜೀನಾಮೆ ಸಲ್ಲಿಸುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶ್ರೀನಿವಾಸ್ ತಮ್ಮ ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವಿನ ಸಂಬಂಧ ಅಣ್ಣತಮ್ಮಂದಿರಂತಿತ್ತು. ಸುಮಾರು ಒಂದೂವರೆ ವರ್ಷಗಳ ಹಿಂದೆ ಆ ಸಂಬಂಧಕ್ಕೆ ಯಾರೋ ಹುಳಿ ಹಿಂಡಿದರು ಅಂತ ಹೇಳಿದರು. ಆದರೆ ಸುಮಾರು ಎರಡು ದಶಕಗಳ ಕಾಲ ಪಕ್ಷಕ್ಕಾಗಿ ದುಡಿಯುವ ಅವಕಾಶ ನೀಡಿದ್ದಕ್ಕಾಗಿ ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡರನ್ನು ಕೃತಜ್ಞತೆಯಿಂದ ನೆನೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ