Karnataka Assembly Session: ಮಾತಿಗೆ ಸ್ಪೀಕರ್ ಅಡ್ಡಿಪಡಿಸಿದಾಗ ತಾಳ್ಮೆ ಕಳೆದುಕೊಂಡ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್

Updated on: Aug 21, 2025 | 12:54 PM

ನಾನು ಮಾತಾಡಲು ನಿಂತಾಗೆಲ್ಲ ಸಭಾಧ್ಯಕ್ಷರು ತಡೆಯುವ ಪ್ರಯತ್ನ ಮಾಡುತ್ತಾರೆ ಎಂದು ಹೇಳುವ ಶರಣಗೌಡ ನೆರವಿಗೆ ಬೆಜೆಪಿ ಮತ್ತು ಜೆಡಿಸ್ ಪಕ್ಷದ ನಾಯಕರು ಧಾವಿಸುತ್ತಾರೆ. ಮಾತಿನ ಭರದಲ್ಲಿ ಶರಣಗೌಡಗೆ ಖಾದರ್ ಹೊರಗೆ ಹೋಗುವುದಾದರೆ ಹೋಗಿ ಅನ್ನುತ್ತಾರೆ. ಅದಕ್ಕೆ ಬಿಜೆಪಿ ನಾಯಕರು, ಸ್ಪೀಕರ್ ಹಾಗೆ ಹೇಳುವುದು ಸರಿಯಲ್ಲ, ಅವರು ಹೇಳಿದ್ದು ತಪ್ಪು ಎನ್ನುತ್ತಾರೆ. ಶರಣಗೌಡ ತಮ್ಮ ಅಸಮಧಾನ ಹೊರಹಾಕುವುದು ಮುಂದುವರಿಸಿದಾಗ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಸಮಾಧಾನಗೊಳಿಸುತ್ತಾರೆ.

ಬೆಂಗಳೂರು, ಆಗಸ್ಟ್ 21: ಮಸೂದೆಯೊಂದಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿದ್ದಾಗ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ (JDS MLA Sharangouda Kandkur) ಮತ್ತು ಸಭಾಧ್ಯಕ್ಷ ಯುಟಿ ಖಾದರ್ ನಡುವೆ ಮಾತಿನ ಚಕಮಕಿ ನಡೆಯಿತು. ತಮ್ಮ ಕ್ಷೇತ್ರದಲ್ಲಿ ನಡೆಯುವ ಜಾತ್ರೆಗಳು ಮತ್ತು ಜಾತ್ರೆಗಳಲ್ಲಿ ಸೇರುವ ಅಪಾರ ಜನರನ್ನು ಉಲ್ಲೇಖಿಸಿ ಮತಾಡಿದ ಶಾಸಕರು ಜಾತ್ರೆಗಳಿಗೆ 10 ದಿನಗಳಷ್ಟು ಮೊದಲು ಅನುಮತಿ ಪಡೆಯಬೇಕೆನ್ನುವುದು ಓಬೀರಾಯನ ಸಂಸ್ಕೃತಿಯನ್ನು ಜ್ಞಾಪಿಸುತ್ತದೆ ಎಂದು ಹೇಳಿ, ಗೃಹ ಸಚಿವರು ಯಾದಗಿರಿಯಲ್ಲಿ ಪೊಲೀಸ್ ಠಾಣೆಯೊಂದನ್ನು ಉದ್ಘಾಟಿಸಲು ಬಂದಿದನ್ನು ಹೇಳುವಾಗ ಮಧ್ಯ ಪ್ರವೇಶ ಮಾಡುವ ಸ್ಪೀಕರ್, ಮಸೂದೆಗೆ ಸಂಬಂಧಿಸಿದಂತೆ ಮಾತಾಡಿ, ಹಳೆಯ ಕತೆಗಳೆಲ್ಲ ಬೇಡ ಅನ್ನುತ್ತಾರೆ. ಸ್ಪೀಕರ್ ತನ್ನ ಮಾತಿಗೆ ಅಡ್ಡಿಪಡಿಸಬಾರದೆಂದು ಮನವಿ ಮಾಡುವ ಶರಣಗೌಡ, ಖಾದರ್ ಅವರು ಪದೇಪದೆ ಅದೇ ಮಾತನ್ನು ಹೇಳಿದಾಗ ತಾಳ್ಮೆ ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ:  Karnataka Assembly session: ಡಿಕೆ ಶಿವಕುಮಾರ್ ಮತ್ತು ಮುನಿರತ್ನ ನಡುವೆ ಸದನದಲ್ಲಿ ಜುಗಲ್​ ಬಂದಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Aug 21, 2025 12:51 PM