Karnataka MLC Elections: ವಿಧಾನಸೌಧದಲ್ಲಿ ಮತದಾನಕ್ಕೂ ಮುನ್ನ ಜೆಡಿಎಸ್ ಮೀಟಿಂಗ್!

Updated on: Jun 18, 2026 | 1:10 PM

ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಮತದಾನಕ್ಕೂ ಮುನ್ನ ಜೆಡಿಎಸ್ ಶಾಸಕರ ಸಭೆಯು ವಿಧಾನಸೌಧದಲ್ಲಿ ನಡೆಯಿತು. ಈ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಭಾಗಿಯಾಗಿದ್ದರು. ಜೆಡಿಎಸ್ ತನ್ನ ಶಾಸಕರ ಮೇಲೆ ವಿಶೇಷ ನಿಗಾ ವಹಿಸಿದ್ದು, ಪಕ್ಷದ ಅಭ್ಯರ್ಥಿ ಗೆಲ್ಲುವುದು ಒಂದು ಭಾಗವಾದರೆ, ಅತಿ ಮುಖ್ಯವಾಗಿ ಅಡ್ಡ ಮತದಾನ ನಡೆಯದಂತೆ ನೋಡಿಕೊಳ್ಳುವುದು ಪಕ್ಷದ ಪ್ರಮುಖ ಉದ್ದೇಶವಾಗಿತ್ತು.

ಬೆಂಗಳೂರು, ಜೂನ್ 18: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಮತದಾನಕ್ಕೂ ಮುನ್ನ ಜೆಡಿಎಸ್ ಶಾಸಕರ ಸಭೆಯು ವಿಧಾನಸೌಧದಲ್ಲಿ ನಡೆಯಿತು. ಈ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಭಾಗಿಯಾಗಿದ್ದರು. ಜೆಡಿಎಸ್ ತನ್ನ ಶಾಸಕರ ಮೇಲೆ ವಿಶೇಷ ನಿಗಾ ವಹಿಸಿದ್ದು, ಪಕ್ಷದ ಅಭ್ಯರ್ಥಿ ಗೆಲ್ಲುವುದು ಒಂದು ಭಾಗವಾದರೆ, ಅತಿ ಮುಖ್ಯವಾಗಿ ಅಡ್ಡ ಮತದಾನ ನಡೆಯದಂತೆ ನೋಡಿಕೊಳ್ಳುವುದು ಪಕ್ಷದ ಪ್ರಮುಖ ಉದ್ದೇಶವಾಗಿತ್ತು.

ಜೆಡಿಎಸ್‌ನ ಲೆಕ್ಕಾಚಾರದ ಪ್ರಕಾರ, ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವುದು, ಎಲ್ಲಾ ಜೆಡಿಎಸ್ ಮತಗಳು ತಮ್ಮ ಅಭ್ಯರ್ಥಿಗೆ ಬೀಳುವಂತೆ ಮಾಡುವುದು ಮತ್ತು ಪಕ್ಷದ ಮತಗಳು ಚದುರಿ ಹೋಗದಂತೆ ತಡೆಯುವುದು ಈ ಸಭೆಯ ಹಿಂದಿನ ಮುಖ್ಯ ಕಾರಣ. ಒಟ್ಟು 18 ಶಾಸಕರನ್ನು ಒಟ್ಟುಗೂಡಿಸಿಕೊಂಡು ಮತದಾನಕ್ಕೆ ಸಜ್ಜುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರನ್ನು ಈ ಹಿಂದೆ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು ಮತ್ತು ನಂತರ ಬಸ್‌ನಲ್ಲಿ ವಿಧಾನಸೌಧಕ್ಕೆ ಕರೆತರಲಾಗಿತ್ತು. ಸಭೆಯಲ್ಲಿ ಮತ ಚಲಾವಣೆ ಮಾಡುವ ವಿಧಾನಗಳ ಬಗ್ಗೆಯೂ ಈಗಾಗಲೇ ಶಾಸಕರಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 18, 2026 12:46 PM
Follow Us