ಸಿಎಂ ಇಬ್ರಾಹಿಂ ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಅಲೆಯುವ ವ್ಯಕ್ತಿ, ಅದರೆ ಜೆಡಿಎಸ್ ನನ್ನ ರಕ್ತದಲ್ಲಿದೆ: ಟಿಎ ಸರವಣ, ಎಮ್ಮೆಲ್ಸಿ
ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತಮ್ಮ ಮಗನಿಗೆ ಹುಮ್ನಾಬಾದ್ ಕ್ಷೇತ್ರದಿಂದ ಸ್ಪರ್ಧಿಸಲು ಬಿ ಫಾರ್ಮ್ ನೀಡಿದ್ದು ಅವರ ಪುತ್ರ ವ್ಯಾಮೋಹವಲ್ಲವೇ? 1996 ರಲ್ಲಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಇಬ್ರಾಹಿಂಗೆ ಮೂರು ಜವಾಬ್ದಾರಿಗಳನ್ನು ನೀಡಿದ್ದರು. ಅವರು ಅಧಿಕಾರದಿಂದ ಕೆಳಗಿಳಿಯುತ್ತಲೇ ತಾವು ಆಧಿಕಾರ ಗಿಟ್ಟಿಸಲು ಬೇರೆ ಪಕ್ಷಕ್ಕೆ ಹೋದರು. ಅಲ್ಲಿ ಅಧಿಕಾರ ತಪ್ಪಿದಾಗ ಪುನಃ ಜೆಡಿಎಸ್ ಗೆ ಬಂದರು ಅಂತ ಸರವಣ ಹೇಳಿದರು.
ಬೆಂಗಳೂರು: ಸಾಮಾನ್ಯವಾಗಿ ಡಿಫೆನ್ಸಿವ್ ಗೇಮ್ ಆಡಬಯಸುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿಎ ಸರವಣ (TA Saravana) ಇಂದು ಅಟ್ಯಾಕಿಂಗ್ ಮೂಡ್ ನಲ್ಲಿದ್ದರು. ಅವರ ಎದುರಾಳಿಯಾಗಿದ್ದು ಈಗಲೂ ತಾನೇ ಜೆಡಿಎಸ್ ರಾಜ್ಯಾಧ್ಯಕ್ಷನೆದು ಹೇಳಿಕೊಂಡು ತಿರುಗುತ್ತಿರುವ ಸಿಎಂ ಇಬ್ರಾಹಿಂ (CM Ibrahim). ತಮ್ಮ ಪಕ್ಷ ನಿಷ್ಠೆ ಬಗ್ಗೆ ಮಾತಾಡಿದ ಸರವಣ ಕಳೆದ 25 ವರ್ಷಗಳಿಂದ ಇದೇ ಪಕ್ಷದಲ್ಲಿದ್ದುಕೊಂಡು ಹೆಚ್ ಡಿ ದೇವೇಗೌಡ (HD Devegowda) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜೊತೆ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತನ್ನ ರಕ್ತವೇ ಜೆಡಿಎಸ್ ಎಂದು ಹೇಳಿದರು. ಕೇವಲ ಅಧಿಕಾರದ ಆಸೆಗಾಗಿ ಪಕ್ಷದಿಂದ ಪಕ್ಷಕ್ಕೆ ಅಲೆಯುವ ಇಬ್ರಾಹಿಂ ಜೆಡಿಎಸ್ ಗೆ ನೀಡಿರುವ ಕಾಣಿಕೆಯಾದರೂ ಏನು? ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತಮ್ಮ ಮಗನಿಗೆ ಹುಮ್ನಾಬಾದ್ ಕ್ಷೇತ್ರದಿಂದ ಸ್ಪರ್ಧಿಸಲು ಬಿ ಫಾರ್ಮ್ ನೀಡಿದ್ದು ಅವರ ಪುತ್ರ ವ್ಯಾಮೋಹವಲ್ಲವೇ? 1996 ರಲ್ಲಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಇಬ್ರಾಹಿಂಗೆ ಮೂರು ಜವಾಬ್ದಾರಿಗಳನ್ನು ನೀಡಿದ್ದರು. ಅವರು ಅಧಿಕಾರದಿಂದ ಕೆಳಗಿಳಿಯುತ್ತಲೇ ತಾವು ಆಧಿಕಾರ ಗಿಟ್ಟಿಸಲು ಬೇರೆ ಪಕ್ಷಕ್ಕೆ ಹೋದರು. ಅಲ್ಲಿ ಅಧಿಕಾರ ತಪ್ಪಿದಾಗ ಪುನಃ ಜೆಡಿಎಸ್ ಗೆ ಬಂದರು ಅಂತ ಸರವಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ