Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಇಂದಿನಿಂದ ಟಿವಿ9 ಎಕ್ಸ್ ಪೋ; ಮೂರು ದಿನಗಳ ಶಾಪಿಂಗ್ ಮೇಳ ಉದ್ಘಾಟಿಸಿದ ಜೆಡಿಎಸ್ ನಾಯಕ ಟಿಎ ಸರವಣ

ಬೆಂಗಳೂರು: ಇಂದಿನಿಂದ ಟಿವಿ9 ಎಕ್ಸ್ ಪೋ; ಮೂರು ದಿನಗಳ ಶಾಪಿಂಗ್ ಮೇಳ ಉದ್ಘಾಟಿಸಿದ ಜೆಡಿಎಸ್ ನಾಯಕ ಟಿಎ ಸರವಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 27, 2023 | 2:06 PM

ಇಂದಿನಿಂದ ರವಿವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸ್ಟಾಲ್ ಗಳು ಓಪನ್ ಆಗಿರುತ್ತವೆ ಮತ್ತು ಗ್ರಾಹಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವೀಕೆಂಡ್ ಗಾಗಿ ಬೇರೆಯೇನಾದರೂ ಪ್ಲ್ಯಾನ್ ಮಾಡಿಕೊಂಡಿದ್ರೆ ಅದನ್ನು ಮುಂದಿನ ವಾರಕ್ಕೆ ಮುಂದೂಡಿ ಈ ವಾರದ ವೀಕೆಂಡನ್ನು ಟಿವಿ9 ಎಕ್ಸ್ ಪೋಗೆ ಮೀಸಲಿಡಿ!

ಬೆಂಗಳೂರು: ದಸರಾ ಹಬ್ಬದ ಬಳಿಕ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಇಂದಿನಿಂದ ಮತ್ತೊಂದು ಉತ್ಸವದಲ್ಲಿ ಪಾಲ್ಗೊಳ್ಳುವ ಸದವಕಾಶ. ಟಿವಿ9 ಪ್ರಾಯೋಜಕತ್ವದ ಎಕ್ಸ್ ಪೋ (Tv9 Expo) ಇಂದಿನಿಂದ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ನಡೆಯಲಿದ್ದು, ಇಂದು ಬೆಳಗ್ಗೆ ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಟಿಎ ಸರವಣ (TA Saravana) ಶಾಪಿಂಗ್ ಉತ್ಸವವನ್ನು ಟೇಪ್ ಕತ್ತರಿಸಿ ಉದ್ಘಾಟಿಸಿದರು. ಅವರೊಂದಿಗೆ ಸ್ಯಾಂಡಲ್ ವುಡ್ ನಟಿ ಧನ್ಯಾ ರಾಮ್ಕುಮಾರ್ (Dhanya Ramkumar), ನಟ ಚಿಕ್ಕಣ್ಣ (Chikkanna), ವಿಕ್ಕಿ ಅರುಣ್, ನವೀನ್ ಗಿರಿಯಾ, ನೊಬೆಲ್ ಜೈಕರ್ ಮೊದಲಾದವರನ್ನು ನೋಡಬಹುದು. ನಂತರ ಗಣ್ಯರು ವೇದಿಕೆಯ ಮೇಲೆ ದೀಪ ಬೆಳಗಿದ್ದನ್ನು ಸಹ ದೃಶ್ಯಗಳಲ್ಲಿ ನೋಡಬಹುದು. ಎಕ್ಸ್ ಪೋ ನಲ್ಲಿ ಲೈಫ್ ಸ್ಟೈಲ್, ಪೀಠೋಪಕರಣಗಳು, ಆಟೋಮೊಬೈಲ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು ಇಲ್ಲಿ 100 ಕ್ಕೂ ಹೆಚ್ಚು ಸ್ಟಾಲ್ ಗಳಿವೆ. ಇಂದಿನಿಂದ ರವಿವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸ್ಟಾಲ್ ಗಳು ಓಪನ್ ಆಗಿರುತ್ತವೆ ಮತ್ತು ಗ್ರಾಹಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವೀಕೆಂಡ್ ಗಾಗಿ ಬೇರೆಯೇನಾದರೂ ಪ್ಲ್ಯಾನ್ ಮಾಡಿಕೊಂಡಿದ್ರೆ ಅದನ್ನು ಮುಂದಿನ ವಾರಕ್ಕೆ ಮುಂದೂಡಿ ಈ ವಾರದ ವೀಕೆಂಡನ್ನು ಟಿವಿ9 ಎಕ್ಸ್ ಪೋಗೆ ಮೀಸಲಿಡಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ