ಹುಲಿ ಉಗರು ಪ್ರಕರಣ; ವ್ಯಕ್ತಿಯೊಬ್ಬನಿಂದ ವಶಪಡಿಸಿಕೊಂಡ ಪೆಂಡೆಂಟ್ ಅಸಲಿ ಹುಲಿ ಉಗುರು ಅಂತ ಖಾತ್ರಿಯಾದರೆ ಮಾತ್ರ ಕೂಡಲೇ ಬಂಧಿಸಲಾಗುವುದು: ಅರಣ್ಯಾಧಿಕಾರಿ

ಹುಲಿ ಉಗರು ಪ್ರಕರಣ; ವ್ಯಕ್ತಿಯೊಬ್ಬನಿಂದ ವಶಪಡಿಸಿಕೊಂಡ ಪೆಂಡೆಂಟ್ ಅಸಲಿ ಹುಲಿ ಉಗುರು ಅಂತ ಖಾತ್ರಿಯಾದರೆ ಮಾತ್ರ ಕೂಡಲೇ ಬಂಧಿಸಲಾಗುವುದು: ಅರಣ್ಯಾಧಿಕಾರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 27, 2023 | 3:07 PM

ಕಾನೂನು ಎಲ್ಲರಿಗೂ ಒಂದೇ, ವಶಪಡಿಸಿಕೊಳ್ಳಲಾದ ಪೆಂಡೆಂಟ್ ಅಸಲಿ ಹುಲಿ ಉಗುರು ಅಂತ ಅರಣ್ಯಾಧಿಕಾರಿಗೆ ಖಾತ್ರಿಯಾದರೆ ಅದನ್ನು ಧರಸಿದ್ದ ವ್ಯಕ್ತಿಯನ್ನು ಕೂಡಲೇ ಬಂಧಿಸಲಾಗುವುದು, ಅನುಮಾನ ಬಂದರೆ, ಅದನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳಿಸಿ ಅದು ಅಸಲಿ ಹುಲಿಯುಗುರು ಅನ್ನೋದು ದೃಢಪಟ್ಟರೆ ಬಂಧಿಸಲಾಗುವುದು ಎಂದು ಪರಿಮಳ ಹೇಳಿದರು.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಾಸವಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಅಳಿಯ ಮತ್ತು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ (Rajat Ullagaddimath) ಸಹ ಹುಲಿ ಉಗುರಿನ ಅಥವಾ ಅದರಂತೆ ಕಾಣುವ ಪೆಡೆಂಟ್ ಧರಿಸಿದ್ದು ಬೆಳಕಿಗೆ ಬಂದಿದ್ದು ಸಹಾಯಕ‌ ಅರಣ್ಯ ಸಂರಕ್ಷಣಾಧಿಕಾರಿ ವಿಎಚ್ ಪರಿಮಳ (VH Parimala) ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ಅವರ ಮನೆಗೆ ತೆರಳಿ ಅದನ್ನು ವಶಪಡಿಸಿಕೊಂಡಿದ್ದಾರೆ. ರಜತ್ ಮನೆಯಲ್ಲಿ ಶೋಧ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊದಿಗೆ ಮಾತಾಡಿದ ಪರಿಮಳ, ರಜತ್ ಮನೆಯಿಂದ ವಶಪಡಿಸಿಕೊಂಡಿರುವ ಪೆಂಡೆಂಟ್ ಅನ್ನು ಪರೀಕ್ಷಣೆಗಾಗಿ ಫೋರೆನ್ಸಿಕ್ ಲ್ಯಾಬ್ ಕಳಿಸಲಾಗುವುದೆಂದು ಹೇಳಿದರು. ಅದು ಸರಿ, ಆದರೆ ಸೆಲಿಬ್ರಿಟಿಯಲ್ಲದ ವರ್ತೂರು ಸಂತೋಷ್ ಅವರನ್ನು ಕೂಡಲೇ ಬಂಧಿಸಿದರೆ, ಸೆಲಿಬ್ರಿಟಿಗಳಿಗೆ ಯಾಕೆ ರಿಯಾಯಿತಿ ನೀಡಲಾಗುತ್ತಿದೆ, ಸಂತೋಷ್ ಗೊಂದು ಕಾನೂನು ಬೇರೆಯವರಿಗೆ ಮತ್ತೊಂದ್ಯಾಕೆ ಎಂದು ಸುದ್ದಿಗಾರರು ಕೇಳಿದಾಗ, ಕಾನೂನು ಎಲ್ಲರಿಗೂ ಒಂದೇ, ವಶಪಡಿಸಿಕೊಳ್ಳಲಾದ ಪೆಂಡೆಂಟ್ ಅಸಲಿ ಹುಲಿ ಉಗುರು ಅಂತ ಅರಣ್ಯಾಧಿಕಾರಿಗೆ ಖಾತ್ರಿಯಾದರೆ ಅದನ್ನು ಧರಸಿದ್ದ ವ್ಯಕ್ತಿಯನ್ನು ಕೂಡಲೇ ಬಂಧಿಸಲಾಗುವುದು, ಅನುಮಾನ ಬಂದರೆ, ಅದನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳಿಸಿ ಅದು ಅಸಲಿ ಹುಲಿಯುಗುರು ಅನ್ನೋದು ದೃಢಪಟ್ಟರೆ ಬಂಧಿಸಲಾಗುವುದು ಎಂದರು. ಸಂತೋಷ್ ರನ್ನು ಬಂಧಿಸಿರುವುದಕ್ಕೆ ಮತ್ತು ಉಳಿದವರನ್ನು ಬಂಧಿಸದಿರುವುದಕ್ಕೆ ಅರಣ್ಯ ಸಚಿವ ಮತ್ತು ಅವರ ಇಲಾಖೆಯ ಅಧಿಕಾರಿಗಳು ನೀಡುತ್ತಿರುವ ಸ್ಪಷ್ಟನೆ ಕನ್ನಡಿಗರಿಗಂತೂ ಅರ್ಥವಾಗುತ್ತಿಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ