AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿ(ಎಸ್) ಪಕ್ಷದ ನಿಷ್ಠಾವಂತ ನಾಯಕ ವೈ ಎಸ್ ವಿ ದತ್ತಾ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ!

ಜೆಡಿ(ಎಸ್) ಪಕ್ಷದ ನಿಷ್ಠಾವಂತ ನಾಯಕ ವೈ ಎಸ್ ವಿ ದತ್ತಾ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ!

TV9 Web
| Edited By: |

Updated on: Dec 14, 2022 | 4:40 PM

Share

ಕೋಮುವಾದಿ ಪಕ್ಷ ಬಿಜೆಪಿಯನ್ನು ಮಣಿಸುವುದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಅಂತ ಮನವರಿಕೆಯಾಗಿರುವುದರಿಂದ ಆ ಪಕ್ಷ ಸೇರಲು ನಿರ್ಧರಿಸಿರುವುದಾಗಿ ದತ್ತಾ ಹೇಳಿದರು.

ಬೆಂಗಳೂರು: ಜೆಡಿ(ಎಸ್) ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದ ಮತ್ತು ಕಳೆದ ಅರ್ಧ ಶತಮಾನದಿಂದ ಜನತಾ ಪರಿವಾರದಲ್ಲಿ (Janata Parivar) ಗುರುತಿಸಿಕೊಂಡಿದ್ದ ಮಾಜಿ ಶಾಸಕ ವೈ ಎಸ್ ವಿ ದತ್ತಾ (YSV Datta) ಅವರು ಪಕ್ಷ ತೊರೆದು ಕಾಂಗ್ರೆಸ್ (Congress) ಪಕ್ಷಕ್ಕೆ ಸೇರುವ ನಿರ್ಧಾರವನ್ನು ಇಂದು ಬೆಂಗಳೂರಲ್ಲಿ ಪ್ರಕಟಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಕಡೂರು ಮತಕ್ಷೇತ್ರದ ತಮ್ಮ ಬೆಂಬಲಿಗರು ಮತ್ತು ಅಭಿಮಾನಿಗಳ ಒತ್ತಾಸೆಯ ಮೇರೆಗೆ ಮತ್ತು ಕೋಮುವಾದಿ ಪಕ್ಷ ಬಿಜೆಪಿಯನ್ನು ಮಣಿಸುವುದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಅಂತ ಮನವರಿಕೆಯಾಗಿರುವುದರಿಂದ ಆ ಪಕ್ಷ ಸೇರಲು ನಿರ್ಧರಿಸಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ