DC ಕಚೇರಿ ಎದುರು ಪ್ರತಿಭಟನೆಗೆ ಬಂದವರು ಕಸ ಹಾಕಿ ಹೋದ್ರು, ಸ್ವಚ್ಛಗೊಳಿಸಿದ ಪೊಲೀಸ್ ಇನ್ಸ್ಪೆಕ್ಟರ್
DC ಕಚೇರಿ ಎದುರು ಪ್ರತಿಭಟನೆಗೆ ಬಂದವರು ಕಸ ಹಾಕಿ ಹೋಗಿದ್ದು, ಅದನ್ನು ಕಲಬುರಗಿ ನಗರದ ಅಶೋಕ ನಗರ ಠಾಣೆಯ ಸಿಪಿಐ ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ.
ಕಲಬುರಗಿ: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು (ಡಿಸೆಂಬರ್ 14) ರೈತರು ಪ್ರತಿಭಟಿಸಿದ್ರು. ಪ್ರತಿಭಟನೆಗೆ ತೊಗರಿ ಗಿಡಗಳನ್ನು ತಂದಿದ್ದ ರೈತರು ಬಳಿಕ ಅಲ್ಲಿಯೇ ಬಿಟ್ಟು ಹೋಗಿದ್ರು. ಅಷ್ಟೇ ಅಲ್ಲ.. ಆವರಣ ಸುತ್ತಮುತ್ತ ಕಸ ಕಡ್ಡಿಯಿಂದ ತುಂಬಿ ತುಳುಕುತ್ತಿತ್ತು.
ಈ ವೇಳೆ ಕಲಬುರಗಿ ನಗರದ ಅಶೋಕ ನಗರ ಠಾಣೆಯ ಸಿಪಿಐ ಪಂಡಿತ್ ಸಾಗರ್ ಆವರಣವನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದ್ದು, ಕಲಬುರಗಿಯ ಪೊಲೀಸ್ ಇನ್ಸ್ಪೆಕ್ಟರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Latest Videos