ಚಿತ್ರದುರ್ಗದ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕಿರೀಟ, ಬೆಳ್ಳಿ ಕುದುರೆ ಸೇರಿ ಲಕ್ಷಾಂತರ ಬೆಲೆ ಬಾಳುವ ಆಭರಣ ಕಳವು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದ ಲಕ್ಷ್ಮಿರಂಗನಾಥಸ್ವಾಮಿ ದೇಗುಲದಲ್ಲಿ ಬೆಳ್ಳಿಕುದುರೆ, ಕಿರೀಟ, ಕಣ್ಣು ಸೇರಿ ಬೆಲೆಬಾಳುವ ದೇವರ ಆಭರಣ ಕಳ್ಳತನವಾಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದ ಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಖದೀಮರು ಕನ್ನ ಹಾಕಿದ್ದಾರೆ. ದೇಗುಲದ ಬೀಗ ಮುರಿದು ಲಕ್ಷ್ಮೀ ರಂಗನಾಥಸ್ವಾಮಿ ದೇವರ ಆಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಬೆಳ್ಳಿಕುದುರೆ, ಕಿರೀಟ, ಕಣ್ಣು ಸೇರಿ ಬೆಲೆಬಾಳುವ ದೇವರ ಆಭರಣ ಕಳ್ಳತನವಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಮತ್ತೊಂದೆಡೆ ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲ ತಾಲೂಕಿನ ಎಡೆಹಳ್ಳಿಯಲ್ಲಿರುವ ಮಾರಮ್ಮ ದೇಗುಲದಲ್ಲೂ ಕಳ್ಳತನವಾಗಿದೆ. ಖದೀಮರು ತಡರಾತ್ರಿ ದೇವಸ್ಥಾನ ಹುಂಡಿ ಎತ್ತೊಯ್ದಿದ್ದಾರೆ. ಕಳ್ಳರ ಕೃತ್ಯ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಳೆದ 3 ವರ್ಷಗಳಿಂದ ಹುಂಡಿ ಎಣಿಕೆ ಆಗಿರಲಿಲ್ಲ. ದೇವಸ್ಥಾನದ ಹುಂಡಿ ಎತ್ತೊಯ್ದು ಅದರಲ್ಲಿನ ಹಣ ತೆಗೆದುಕೊಂಡು ಖಾಲಿ ಹುಡಿಯನ್ನು ದೇವಸ್ಥಾನದ ಹೊರಗಡೆ ಬಿಸಾಡಿದ್ದಾರೆ.
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

