Jio Price Hike: ರಿಲಯನ್ಸ್ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ ಏರಿಕೆ |
ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಎಲ್ಲಾ ರಿಚಾರ್ಜ್ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದೆ. ಹೊಸ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.
5G ಪ್ಲ್ಯಾನ್ಗಳನ್ನು ಕಡಿಮೆ ದರಕ್ಕೆ ಪರಿಚಯಿಸುವ ಮೂಲಕ ಸುದ್ದಿಯಾಗಿದ್ದ ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಎಲ್ಲಾ ರಿಚಾರ್ಜ್ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದೆ. ಹೊಸ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಈ ಹಿಂದೆ ₹155 ಇದ್ದ ರಿಚಾರ್ಜ್ ಪ್ಲ್ಯಾನ್ ಜುಲೈ 3 ರಿಂದ ₹189ಕ್ಕೆ ಏರಲಿದೆ. ಇದರಲ್ಲಿ ಶೇ. 22ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಗರಿಷ್ಠ ಪ್ರಮಾಣದ ಮೊಬೈಲ್ ಗ್ರಾಹಕರನ್ನು ಹೊಂದಿರುವ ಜಿಯೋ ಈಗಿರುವ 19 ಪ್ಲ್ಯಾನ್‌ಗಳಿಗೆ ಬೆಲೆ ಏರಿಕೆ ಮಾಡಿದೆ. ಇದರಲ್ಲಿ 17 ಪ್ರೀಪೇಡ್ ಪ್ಲ್ಯಾನ್‌ಗಳಾಗಿದ್ದು, ಎರಡು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಾಗಿವೆ. ಯಾವೆಲ್ಲಾ ಪ್ಲ್ಯಾನ್‌ಗಳ ಬೆಲೆ ಎಷ್ಟು ಏರಿಕೆ ಮಾಡಲಾಗಿದೆ ಎನ್ನುವ ವಿವರ ವಿಡಿಯೊದಲ್ಲಿದೆ.