ಉದ್ಯೋಗಾಕಾಂಕ್ಷಿ ಯುವಕರಿಗೆ ಅನ್ಯಾಯವಾಗಲು ಬಿಡಲ್ಲ, ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡಲ್ಲ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರದ ಹಾಗೆ ವಸ್ತುಸ್ಥಿತಿಯಿಂದ ವಿಮುಖರಾಗುವ ಪ್ರಯತ್ನ ತಮ್ಮ ಸರ್ಕಾರ ಮಾಡುತ್ತಿಲ್ಲ, ಬಿಜೆಪಿ ಸರ್ಕಾರವಾದರೋ ಹಗರಣವೇ ನಡೆದಿಲ್ಲ ಅಂತ ಹೇಳಿತ್ತು, ಆದರೆ ತಮ್ಮ ಸರ್ಕಾರ ಪ್ರಮಾದವನ್ನು ಅಂಗೀಕರಿಸಿ ತನಿಖೆ ನಡೆಸಲು ಮುಂದಾಗಿದೆ ಮತ್ತು ವಿದ್ಯಾವಂತ ಯುವಕರಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ ಎಂದು ಖರ್ಗೆ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಪಿಎಸ್ ನೇಮಕಾತಿ ಪರೀಕ್ಷೆಗೆ (PSI recruitment exam) ಸಂಬಂಧಿಸಿದಂತೆ ಪುನಃ ಅವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡು, ಕೆಲ ಭ್ರಷ್ಟ ಅಧಿಕಾರಿಗಳು (corrupt officials) ತಮ್ಮ ಹಳೆ ಚಾಳಿಯನ್ನು ಬಿಟ್ಟಿಲ್ಲ ಎಂದರು. ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿದೆ, ತಮ್ಮ ಸರ್ಕಾರ ಸಮಗ್ರ ತನಿಖೆ ನಡೆಸುತ್ತದೆ ಮತ್ತು ಯಾವುದೇ ಕಾರಣಕ್ಕೆ ಉದ್ಯೋಗಾಕಾಂಕ್ಷಿ ಯುವಕರಿಗೆ ಅನ್ಯಾಯವಾಗಲು ಬಿಡಲ್ಲ ಮತ್ತು ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡಲ್ಲ ಎಂದು ಹೇಳಿದರು. ಹಿಂದಿನ ಸರ್ಕಾರದ ಹಾಗೆ ವಸ್ತುಸ್ಥಿತಿಯಿಂದ ವಿಮುಖರಾಗುವ ಪ್ರಯತ್ನ ತಮ್ಮ ಸರ್ಕಾರ ಮಾಡುತ್ತಿಲ್ಲ, ಬಿಜೆಪಿ ಸರ್ಕಾರವಾದರೋ ಹಗರಣವೇ ನಡೆದಿಲ್ಲ ಅಂತ ಹೇಳಿತ್ತು, ಆದರೆ ತಮ್ಮ ಸರ್ಕಾರ ಪ್ರಮಾದವನ್ನು ಅಂಗೀಕರಿಸಿ ತನಿಖೆ ನಡೆಸಲು ಮುಂದಾಗಿದೆ ಮತ್ತು ವಿದ್ಯಾವಂತ ಯುವಕರಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ ಎಂದು ಖರ್ಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ