AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿರುವ ರಾಜ್ಯದ 24 ಪುರೋಹಿತರು ನಮ್ಮ ಸೌಭಾಗ್ಯ ಎಂದರು

ಪ್ರಾಣ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿರುವ ರಾಜ್ಯದ 24 ಪುರೋಹಿತರು ನಮ್ಮ ಸೌಭಾಗ್ಯ ಎಂದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 20, 2024 | 11:02 AM

Share

ಮಕ್ಕಳಿಗೆ ಬಾಲ್ಯದಿಂದಲೇ ರಾಮನ ಬಗ್ಗೆ ತಿಳಿಸುವುದನ್ನು ಪೋಷಕರು ಪ್ರಾರಂಭಿಸಬೇಕು ಎಂದು ಕರ್ನಾಟಕದ ಒಬ್ಬ ಪುರೋಹಿತರು ಹೇಳುತ್ತಾರೆ. ರಾಮ ಹೇಗೆ ಮನುಕುಲಕ್ಕೆ ಆದರ್ಶ ವ್ಯಕ್ತಿಯಾದ? ಅತನನ್ನು ನಾವು ಯಾಕೆ ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತೇವೆ, ರಾಮಾಯಣದಲ್ಲಿ ಅಯೋಧ್ಯೆಯ ಮಹತ್ವ ಮೊದಲಾದ ಸಂಗತಿಗಳನ್ನು ಮಕ್ಕಳಿಗೆ ವಿವರಿಸಬೇಕು ಎಂದು ಅವರು ಹೇಳುತ್ತಾರೆ.

ಅಯೋಧ್ಯೆ: ಜನವರಿ 22 ದೂರವಿಲ್ಲ, ಭಾರತೀಯರೆಲ್ಲ ಎದುರು ನೋಡುತ್ತಿರುವ ರಾಮಮಂದಿರ ಪ್ರಾಣ ಪ್ರತಿಷ್ಠೆ (Ram Temple Consecration) ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳು ಬಾಕಿಯುಳಿದಿವೆ. ನಾವು ಪದೇಪದೆ ಹೇಳುತ್ತಿರುವಂತೆ ರಾಮಮಂದಿರ ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದಂತೆ ಕನ್ನಡಿಗರ ಕೊಡುಗೆ (contribution of Kannadigas) ದೊಡ್ಡದು. ಸೋಮವಾರ ನಡೆಯುವ ಮಂದಿರ ಉದ್ಘಾಟನೆಗೆ ಪೂರಕವಾಗಿ ಧಾರ್ಮಿಕ ವಿಧಿವಿಧಾನ (rituals), ಪೂಜಾ ಕೈಂಕರ್ಯ, ಹೋಮಹವನ ನಡೆಸಲು ರಾಜ್ಯದಿಂದ 24 ಪುರೋಹಿತರು ಹೋಗಿದ್ದು ಅವರೊಂದಿಗೆ ಟಿವಿ9 ಕನ್ನಡ ವಾಹಿನಿ ವರದಿಗಾರ ಮಾತಾಡಿದ್ದಾರೆ. ಪ್ರಾಣ ಪ್ರತಿಷ್ಠೆ ಅಂಗವಾಗಿಯೇ ರಾಮಜನ್ಮಭೂಮಿ ಟ್ರಸ್ಟ್ ನವರು ಎಲ್ಲ ಧಾರ್ಮಿಕ ವಿಧಿಗಳನ್ನು ಆಯೋಜಿಸಿದ್ದಾರೆ ಎಂದು ಅರ್ಚಕರು ಹೇಳುತ್ತಾರೆ. ಅವರು ಹೇಳುವ ಪ್ರಕಾರ ಜನವರಿ 18 ರಿಂದ ಅರಂಭಗೊಂಡು 22 ರವರೆಗೆ ನಡೆಯುವ ಪೂಜಾವಿಧಿಗಳಲ್ಲಿ ರಾಮತಾರಕ ಹೋಮ, ಗಣಪತಿ ಹೋಮ, ಹನುಮತ್ ವ್ರತ ಹೋಮ ಮೊದಲಾದವು ನಡೆಯುತ್ತವೆ. ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಜಗದ್ಗುರು ರಾಮಭದ್ರಾಚಾರ್ಯ ಅವರ ಮಾರ್ಗದರ್ಶನ ಮತ್ತು ಸಮ್ಮುಖದಲ್ಲಿ ನಡೆಯುತ್ತಿವೆ ಎಂದು ರಾಜ್ಯದ ಅರ್ಚಕರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ