ಸಿಟಿಐ, ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಮತ್ತೇ ಅವ್ಯವಹಾರ, ಹತಾಶರಾಗುತ್ತಿರುವ ವಿದ್ಯಾವಂತ ಉದ್ಯೋಗಾಕಾಂಕ್ಷಿಗಳು
ಗೃಹ ಸಚಿವ ಜಿ ಪರಮೇಶ್ವರ್ ಅವರೇ ಕಮರ್ಶಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವುದನ್ನು ಬಹಳ ಡಿಪ್ಲೋಮ್ಯಾಟಿಕ್ ಅಂಗೀಕರಿಸುತ್ತಾರೆ. ಗುಪ್ತದಳದ ಲಿಂಗಯ್ಯ ಹೆಸರಿನ ಒಬ್ಬ ಪಿಎಸ್ ಐ ಪ್ರಶ್ನೆಪತ್ರಿಕೆ ಲೀಕ್ ಮಾಡಿದ ಅರೋಪ ಕೇಳಿಬಂದಿದೆ. ಸಿಸಿಬಿ ತನಿಖೆ ನಡೆಸುತ್ತಿದೆ ಅದು ಖಾತ್ರಿಯಾದರೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಸಚಿವ ಹೇಳುತ್ತಾರೆ.
ಬೆಂಗಳೂರು: ವಿವಿಧ ಹುದ್ದೆಗಳಿಗೆ ನೇಮಕಾತಿ (recruitment) ಮತ್ತು ಪೂರಕವಾದ ಪ್ರವೇಶ ಪರೀಕ್ಷೆ ಅಥವಾ ಟೆಸ್ಟ್ ಗಳನ್ನು ನಡೆಸುಬ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ಅಧೀನದಲ್ಲಿರುವ ಪ್ರಾಧಿಕಾರಗಳಿಗೆ (authorities) ನೀಡುವ ಬದಲು ಬೇರೆ ಗ್ರಹಗಳ ಜೀವಿಗಳಿಗೆ ವಹಿಸಿಕೊಡುವುದು ಉತ್ತಮ ಅನಿಸುತ್ತದೆ! ಅಕ್ರಮ-ಅವ್ಯವಹಾರ, ಕಳ್ಳಾಟಗಳಿಲ್ಲದೆ (irregularities) ಪರೀಕ್ಷೆಗಳನ್ನು ನಡೆಸುವುದು ಈ ಪ್ರಾಧಿಕಾರಗಳಿಗೆ ಸಾಧ್ಯವಿಲ್ಲ. ಪ್ರತಿಬಾರಿ ಪರೀಕ್ಷೆ ನಡೆಸುವಾಗಲೂ ಒಂದಿಲ್ಲೊಂದು ಅಕ್ರಮ. ವಿದ್ಯಾವಂತ ಮತ್ತು ಪ್ರತಿಭಾವಂತ ಯುವಕರು ಹತಾಶರಾಗುತ್ತಿದ್ದಾರೆ, ಅವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೇಲೆ ವಿಶ್ವಾಸ ಹೊರಟುಹೋಗಿದೆ. ಪ್ರತಿಬಾರಿ ನಡೆಯುವ ಅವ್ಯವಹಾರಗಳಿಂದ ಅವರಲ್ಲಿ ವ್ಯವಸ್ಥೆ ವಿರುದ್ಧ ಜಿಗುಪ್ಸೆ ಉಂಟಾಗುತ್ತಿದೆ. ಇಲ್ನೋಡಿ, ಗೃಹ ಸಚಿವ ಜಿ ಪರಮೇಶ್ವರ್ ಅವರೇ ಕಮರ್ಶಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವುದನ್ನು ಬಹಳ ಡಿಪ್ಲೋಮ್ಯಾಟಿಕ್ ಅಂಗೀಕರಿಸುತ್ತಾರೆ.
ಗುಪ್ತದಳದ ಲಿಂಗಯ್ಯ ಹೆಸರಿನ ಒಬ್ಬ ಪಿಎಸ್ ಐ ಪ್ರಶ್ನೆಪತ್ರಿಕೆ ಲೀಕ್ ಮಾಡಿದ ಅರೋಪ ಕೇಳಿಬಂದಿದೆ. ಸಿಸಿಬಿ ತನಿಖೆ ನಡೆಸುತ್ತಿದೆ ಅದು ಖಾತ್ರಿಯಾದರೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಸಚಿವ ಹೇಳುತ್ತಾರೆ. ಅಂದರೆ, ನಡೆದ ಪರೀಕ್ಷೆಗಳು ಕ್ಯಾನ್ಸಲ್ ಮಾಡಿ ಅವುಗಳಖನ್ನು ಮತ್ತೊಮ್ಮೆ ಶೆಡ್ಯೂಲ್ ಮಾಡೋದೆ ಸರ್ಕಾರ ತೆಗೆದುಕೊಳ್ಳುವ ಕ್ರಮ! ಮತ್ತೇ ಮೂರು ವರ್ಷ ಹಾಳು, ಈಗ ಪರೀಕ್ಷೆ ಬರೆದ ಯುವಕರು ಮುಂದಿನ ಪರೀಕ್ಷೆ ಹೊತ್ತಿಗೆ ವಯೋಮಿತಿ ವಿಷಯದಲ್ಲಿ ಅನರ್ಹರಾಗಿರುತ್ತಾರೆ. ಸರ್ಕಾರ ಯಾವುದೇ ಇದ್ದರೂ ಈ ಸೈಕಲ್ ಜಾರಿಯಲ್ಲಿರೋದು ಕನ್ನಡಿಗರ ದೌರ್ಭಾಗ್ಯ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ