ದೆಹಲಿಯ ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯೆ ಎಂದು ಬದಲಾಯಿಸಿದ ಹಿಂದೂ ಕಾರ್ಯಕರ್ತರು
ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯೆ ಎಂದು ಹಿಂದೂ ಕಾರ್ಯಕರ್ತರು ಬದಲಾವಣೆ ಮಾಡಿದ್ದಾರೆ. ಬಾಬರ್ ರಸ್ತೆಯ ಸೈನ್ ಬೋರ್ಡ್ ಮೇಲೆ ಅಯೋಧ್ಯೆ ಮಾರ್ಗ ಸ್ಟಿಕ್ಕರ್ ಅಂಟಿಸಲಾಗಿದೆ. ಈ ಘಟನೆ ಇಂದು ಬೆಳಿಗ್ಗೆ (ಜ.20) ಕಂಡು ಬಂದಿದೆ. ಬಾಬರ್ ರಸ್ತೆಯ ಹೆಸರನ್ನು ಬದಲಾಯಿಸಬೇಕೆಂದು ಹಿಂದೂ ಸೇನೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ.
ದೆಹಲಿ, ಜ.20: ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆಗೆ ಇನ್ನು ಎರಡು ದಿನ ಬಾಕಿದೆ. ರಾಮಮಂದಿರದಲ್ಲಿ ಸಕಲಸಿದ್ಧತೆಗಳು ನಡೆಯುತ್ತಿದೆ. ರಾಮ ಲಲ್ಲಾನ ಮೂರ್ತಿ ಕೂಡ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಇಡಲಾಗಿದೆ. ಇದರ ನಡುವೆ ದೆಹಲಿಯ ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯೆ ಎಂದು ಹಿಂದೂ ಕಾರ್ಯಕರ್ತರು ಬದಲಾವಣೆ ಮಾಡಿದ್ದಾರೆ. ಬಾಬರ್ ರಸ್ತೆಯ ಸೈನ್ ಬೋರ್ಡ್ ಮೇಲೆ ಅಯೋಧ್ಯೆ ಮಾರ್ಗ ಸ್ಟಿಕ್ಕರ್ ಅಂಟಿಸಲಾಗಿದೆ. ಈ ಘಟನೆ ಇಂದು ಬೆಳಿಗ್ಗೆ (ಜ.20) ಕಂಡು ಬಂದಿದೆ. ಬಾಬರ್ ರಸ್ತೆಯ ಹೆಸರನ್ನು ಬದಲಾಯಿಸಬೇಕೆಂದು ಹಿಂದೂ ಸೇನೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ, ಹಿಂದೂ ಸೇನೆ ಬಹಳ ದಿನಗಳಿಂದ ಈ ರಸ್ತೆಯ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದೇವು. ಈ ದೇಶವು ಭಗವಾನ್ ಶ್ರೀರಾಮ, ಶ್ರೀ ಕೃಷ್ಣ, ಶ್ರೀ ವಾಲ್ಮೀಕಿ, ಗುರು ರವಿದಾಸರಂತಹ ಮಹಾಪುರುಷರ ಹೆಸರು ಇಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವು ಎಂದು ಹೇಳಿದ್ದಾರೆ. ಈಗ ಬಾಬರಿ ಮಸೀದಿ ಇಲ್ಲದಿರುವಾಗ ದೆಹಲಿಯ ಬಾಬರ್ ರಸ್ತೆಯಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದರೆ. ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯೆ ಎಂದು ಬದಲಾಸಿರುವ ವಿಡಿಯೋವನ್ನು ಎಎನ್ಐ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಬಾಬರ್ ಎಂದು ಬರೆದಿರುವ ರಸ್ತೆ ಬೋರ್ಡ್ ಮೇಲೆ ಅಯೋಧ್ಯೆ ಎಂದು ಬರೆದಿರುವ ಸ್ಟಿಕ್ಕರ್ ಅಂಟಿಸುವುದನ್ನು ಕಾಣಬಹುದು
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ