ಮೈಸೂರು: ಪೆನ್ಸಿಲ್ ಲೆಡ್‌ನಲ್ಲಿ ಆಕರ್ಷಕವಾಗಿ ಮೂಡಿ ಬಂದ ರಾಮಾಂಜನೇಯ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಯಾರಾದ ಮೂರ್ತಿಯೇ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದೀಗ ಪೆನ್ಸಿಲ್ ಲೆಡ್‌ನಲ್ಲಿ ಶ್ರೀರಾಮ ಮೂಡಿದ್ದಾನೆ. ಕಲಾವಿದ ನಂಜುಂಡಸ್ವಾಮಿ ಕೈ ಚಳಕದಲ್ಲಿ ಶ್ರೀರಾಮ ಮೂರ್ತಿ ಅರಳಿದೆ.
ಮೈಸೂರು, ಜನವರಿ 20: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಈಗಾಗಲೆ ರಾಮಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಯಾರಾದ ಮೂರ್ತಿಯೇ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದೀಗ ಪೆನ್ಸಿಲ್ ಲೆಡ್‌ನಲ್ಲಿ ಶ್ರೀರಾಮ ಮೂಡಿದ್ದಾನೆ. ಕಲಾವಿದ ನಂಜುಂಡಸ್ವಾಮಿ ಕೈ ಚಳಕದಲ್ಲಿ ಶ್ರೀರಾಮ ಮೂರ್ತಿ ಅರಳಿದೆ. ಪೆನ್ಸಿಲ್ ಲೆಡ್‌ನಲ್ಲಿ ಬಿಲ್ಲು ಬಾಣ ಹಿಡಿದ ಶ್ರೀರಾಮ, ಪಾದದ ಬಳಿ ಆಂಜನೇಯ ಕುಳಿತಿದ್ದಾನೆ. ಆಂಜನೇಯನ ಪಕ್ಕದಲ್ಲಿ ಶ್ರೀರಾಮ ಬರಹವಿದೆ.
Latest Videos