AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: 23 ವರ್ಷಗಳ ಬಳಿಕ ಮೂಡಿಬಂದ ಶತಕ..!

IND vs WI: 23 ವರ್ಷಗಳ ಬಳಿಕ ಮೂಡಿಬಂದ ಶತಕ..!

ಝಾಹಿರ್ ಯೂಸುಫ್
|

Updated on:Oct 13, 2025 | 11:00 AM

Share

India vs West Indies, 2nd Test: ಬರೋಬ್ಬರಿ 23 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ಆರಂಭಿಕ ದಾಂಡಿಗ ಜಾನ್ ಕ್ಯಾಂಪ್​ಬೆಲ್ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮುಂದುವರೆಸಿದ್ದು, 67 ಓವರ್​ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 225 ರನ್​ ಕಲೆಹಾಕಿದೆ.

ಬರೋಬ್ಬರಿ 23 ವರ್ಷಗ ಬಳಿಕ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟರ್​ರೊಬ್ಬರು ಭಾರತದಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಕಣಕ್ಕಿಳಿದ ಜಾನ್ ಕ್ಯಾಂಪ್​ಬೆಲ್ 115 ರನ್​ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ವಿಂಡೀಸ್ ಪಡೆಯ ಶತಕದ ಬರ ನೀಗಿದೆ.

ಅಂದರೆ ಕಳೆದ 23 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ಯಾವುದೇ ಬ್ಯಾಟರ್ ಭಾರತದ ಪಿಚ್​ನಲ್ಲಿ ಟೆಸ್ಟ್ ಶತಕ ಬಾರಿಸಿರಲಿಲ್ಲ. 2002 ರಲ್ಲಿ ನಡೆದ ಈಡನ್ ಗಾರ್ಡನ್ಸ್ ಟೆಸ್ಟ್ ಪಂದ್ಯದಲ್ಲಿ ವಾವೆಲ್ಸ್ ಹಿಂಡ್ಸ್ 100 ರನ್​ಗಳಿಸಿದ್ದೇ ಕೊನೆ. ಇದಾದ ಬಳಿಕ ವಿಂಡೀಸ್ ತಂಡದ ಯಾವುದೇ ಒಪನರ್​ ಬ್ಯಾಟರ್ ಭಾರತೀಯ ಪಿಚ್​ನಲ್ಲಿ ಮೂರಂಕಿ ಮೊತ್ತ ಗಳಿಸಿರಲಿಲ್ಲ.

ಇದೀಗ ಬರೋಬ್ಬರಿ 23 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ಆರಂಭಿಕ ದಾಂಡಿಗ ಜಾನ್ ಕ್ಯಾಂಪ್​ಬೆಲ್ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮುಂದುವರೆಸಿದ್ದು, 67 ಓವರ್​ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 225 ರನ್​ ಕಲೆಹಾಕಿದೆ.

ಸಂಕ್ಷಿಪ್ತ ಸ್ಕೋರ್ ವಿವರ:

ಭಾರತ ಮೊದಲ ಇನಿಂಗ್ಸ್- 518/5 ಡಿಕ್ಲೇರ್

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್-  248

ವೆಸ್ಟ್ ಇಂಡೀಸ್ ದ್ವಿತೀಯ ಇನಿಂಗ್ಸ್- 225/3 (ಫಾಲೋ ಆನ್)

 

 

 
Published on: Oct 13, 2025 10:59 AM