‘ಟಿಆರ್​ಪಿ ಬಂತು ನಿಜ, ಆದರೂ ನಾವು ಲಾಸ್​ನಲ್ಲಿ ಇದ್ದೇವೆ’; ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕನ ಅಳಲು

Edited By:

Updated on: Aug 20, 2022 | 10:10 PM

ನಿರ್ಮಾಪಕ ಆರೂರು ಜಗದೀಶ್ ಅವರು ಅನಿರುದ್ಧ್ ಹೇಳಿದ ವಿಚಾರಗಳು ಸುಳ್ಳು ಎಂಬುದನ್ನು ಹೇಳಿದ್ದಾರೆ. ತಮಗೆ ನಷ್ಟ ಉಂಟಾಗಿದೆ ಎಂದಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿಯ (Jothe Jotheyali) ನಿರ್ಮಾಪಕ ಹಾಗೂ ಕಥಾ ನಾಯಕನ ನಡುವೆ ಇರುವ ಅಸಮಾಧಾನ ಹೊರ ಜಗತ್ತಿಗೆ ಗೊತ್ತಾಗಿದೆ. ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಕೈ ಬಿಡಲಾಗಿದೆ. ಈ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಅನಿರುದ್ಧ್​ (Aniruddha Jatkar) ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರು. ನಿರ್ಮಾಪಕ ಆರೂರು ಜಗದೀಶ್ ಅವರು ಅನಿರುದ್ಧ್ ಹೇಳಿದ ವಿಚಾರಗಳು ಸುಳ್ಳು ಎಂಬುದನ್ನು ಹೇಳಿದ್ದಾರೆ. ತಮಗೆ ನಷ್ಟ ಉಂಟಾಗಿದೆ ಎಂದಿದ್ದಾರೆ.