‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
Darshan Fans vs Pratham: ನಟ ದರ್ಶನ್ ತೂಗುದೀಪ ಅವರ ಅಭಿಮಾನಿಗಳು ತಮಗೆ ಕಿರುಕುಳ ನೀಡಿದ್ದಾರೆ. ಕೊಲೆಗೆ ಯತ್ನಿಸಿದ್ದಾರೆಂದು, ತಮಗೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನೆಗೆ ಕೂತಿದ್ದಾರೆ. ಪ್ರಥಮ್ಗೆ ಕೆಲವರ ಬೆಂಬಲವೂ ದೊರೆತಿದೆ. ಇದೀಗ ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು ಹರಿಹಾಯ್ದಿದ್ದಾರೆ.
ದರ್ಶನ್ (Darshan) ಅಭಿಮಾನಿಗಳ ದುರ್ವರ್ತನೆಯಿಂದ ರೋಸಿ ಹೋಗಿರುವ ಪ್ರಥಮ್, ಕೊನೆಗೆ ಪ್ರತಿಭಟನೆಗೆ ಇಳಿದಿದ್ದಾರೆ. ಇಷ್ಟು ದಿನ ದರ್ಶನ್ ಅಭಿಮಾನಿಗಳನ್ನು ಬೈಯ್ಯುತ್ತಿದ್ದ ಪ್ರಥಮ್, ಈಗ ನೇರವಾಗಿ ದರ್ಶನ್ಗೆ ಮಾತಿನ ಛಾಟಿ ಬೀಸಿದ್ದಾರೆ. ದರ್ಶನ್ ಅಭಿಮಾನಿಯೊಬ್ಬ ತಮ್ಮನ್ನು ಕೊಲ್ಲಲು ಯತ್ನಿಸಿದ ಡ್ರ್ಯಾಗರ್ ಎಂದು ಪ್ರಥಮ್ ಆರೋಪ ಮಾಡಿ ದೂರು ಸಹ ನೀಡಿದ್ದಾರೆ. ಕೆಲವರು ಪ್ರಥಮ್ಗೆ ಬೆಂಬಲ ನೀಡಿ, ಪ್ರಥಮ್ಗೆ ನ್ಯಾಯ ಸಿಗಬೇಕು ಎಂದಿದ್ದಾರೆ. ಇದೀಗ ನಿರ್ಮಾಪಕ ಕೆ ಮಂಜು, ದರ್ಶನ್ ಅಭಿಮಾನಿಗಳ ಪರವಾಗಿ ಮಾತನಾಡಿ, ಪ್ರಥಮ್ಗೆ ಛೀಮಾರಿ ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
