AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಧಿಕೃತ ಟೋಲ್​ಗಳು: ತಮ್ಮ ಕ್ಷೇತ್ರದ ಜನ ಮತ್ತು ರೈತರಿಗಾಗಿ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ ಕರೆಮ್ಮ

ಅನಧಿಕೃತ ಟೋಲ್​ಗಳು: ತಮ್ಮ ಕ್ಷೇತ್ರದ ಜನ ಮತ್ತು ರೈತರಿಗಾಗಿ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ ಕರೆಮ್ಮ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 30, 2025 | 4:54 PM

Share

ಸತೀಶ್ ಜಾರಕಿಹೊಳಿ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್, ಸಚಿವ ಬೋಸರಾಜು ಮೊದಲಾದ ಎಲ್ಲರ ಬಗ್ಗೆ ತನಗೆ ಸಾಕಷ್ಟು ಗೌರವವಿದೆ, ಅದರೆ ಯಾರೊಬ್ಬರೂ ತಮ್ಮ ಪರವಾಗಿ ಮಾತಾಡಲಿಲ್ಲ ಅಂತ ಬಹಳ ವೇದನೆಯಾಗುತ್ತಿದೆ, ಟೋಲ್​ಗಳನ್ನು ತೆಗೆಸಲು ಮುಂದಿನ ಹೋರಾಟವನ್ನು ಕ್ಷೇತ್ರದ ಜನರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಕರೆಮ್ಮ ಹೇಳಿದರು.

ಬೆಂಗಳೂರು, ಜುಲೈ 30: ತಮ್ಮ ಭಾಗದ ಜನ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ್ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದರು. ಇವರು ಹೋರಾಟ ನಡೆಸಿರುವುದು ತಮ್ಮ ಕ್ಷೇತ್ರದ ಕಾಕ್ರಗಲ್ ಮತ್ತು ಜಾಲಹಳ್ಳಿಯಲ್ಲಿ ನಿರ್ಮಾಣ ಆಗಿರುವ ಎರಡು ಅನಧಿಕೃತ ಟೋಲ್​ಗಳ (unauthorized toll plazas) ವಿಷಯದಲ್ಲಿ. ಇವೆರಡನ್ನು ಬಂದ್ ಮಾಡಿಸಬೇಕು, ರೈತರು ಮತ್ತು ಬಡಜನರಿಗೆ ಬಹಳ ತೊಂದರೆಯಾಗುತ್ತಿದೆ ಅಂತ ಇವರು ದೇವದುರ್ಗದಲ್ಲಿ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದರು. ಬೆಂಗಳೂರಲ್ಲಿ ಒಂದು ಸಭೆ ಮಾಡಿ ಸಮಸ್ಯೆ ಬಗೆ ಹರಿಸುವ ಅಂತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅಧಿಕಾರಿಗಳು ಕಳಿಸಿದ ಸಂದೇಶವನ್ನು ನಂಬಿ ಕರೆಮ್ಮ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದರಂತೆ. ಆದರೆ, ಇವತ್ತು ನಡೆದ ಸಭೆಯಲ್ಲಿ ಯಾರೊಬ್ಬರು ತಮ್ಮ ಪರ ಮಾತಾಡದ ಕಾರಣ ಅವರು ಬೇಸತ್ತು, ಭ್ರಮನಿರಸನಗೊಂಡು ಮೀಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಹೊರಬಂದಿದ್ದಾರೆ.

ಇದನ್ನೂ ಓದಿ:  ರಾಯಚೂರು: ಕಾನ್ಸ್​​​ಟೇಬಲ್ ಮೇಲೆ ಜೆಡಿಎಸ್​​​ ಶಾಸಕಿ ಕರೆಮ್ಮ ಪುತ್ರನಿಂದ ಹಲ್ಲೆ​

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ