AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು

‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು

ಮಂಜುನಾಥ ಸಿ.
|

Updated on: Jul 30, 2025 | 6:35 PM

Share

Darshan Fans vs Pratham: ನಟ ದರ್ಶನ್ ತೂಗುದೀಪ ಅವರ ಅಭಿಮಾನಿಗಳು ತಮಗೆ ಕಿರುಕುಳ ನೀಡಿದ್ದಾರೆ. ಕೊಲೆಗೆ ಯತ್ನಿಸಿದ್ದಾರೆಂದು, ತಮಗೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನೆಗೆ ಕೂತಿದ್ದಾರೆ. ಪ್ರಥಮ್​ಗೆ ಕೆಲವರ ಬೆಂಬಲವೂ ದೊರೆತಿದೆ. ಇದೀಗ ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು ಹರಿಹಾಯ್ದಿದ್ದಾರೆ.

ದರ್ಶನ್ (Darshan) ಅಭಿಮಾನಿಗಳ ದುರ್ವರ್ತನೆಯಿಂದ ರೋಸಿ ಹೋಗಿರುವ ಪ್ರಥಮ್, ಕೊನೆಗೆ ಪ್ರತಿಭಟನೆಗೆ ಇಳಿದಿದ್ದಾರೆ. ಇಷ್ಟು ದಿನ ದರ್ಶನ್​ ಅಭಿಮಾನಿಗಳನ್ನು ಬೈಯ್ಯುತ್ತಿದ್ದ ಪ್ರಥಮ್, ಈಗ ನೇರವಾಗಿ ದರ್ಶನ್​ಗೆ ಮಾತಿನ ಛಾಟಿ ಬೀಸಿದ್ದಾರೆ. ದರ್ಶನ್ ಅಭಿಮಾನಿಯೊಬ್ಬ ತಮ್ಮನ್ನು ಕೊಲ್ಲಲು ಯತ್ನಿಸಿದ ಡ್ರ್ಯಾಗರ್ ಎಂದು ಪ್ರಥಮ್ ಆರೋಪ ಮಾಡಿ ದೂರು ಸಹ ನೀಡಿದ್ದಾರೆ. ಕೆಲವರು ಪ್ರಥಮ್​ಗೆ ಬೆಂಬಲ ನೀಡಿ, ಪ್ರಥಮ್​ಗೆ ನ್ಯಾಯ ಸಿಗಬೇಕು ಎಂದಿದ್ದಾರೆ. ಇದೀಗ ನಿರ್ಮಾಪಕ ಕೆ ಮಂಜು, ದರ್ಶನ್ ಅಭಿಮಾನಿಗಳ ಪರವಾಗಿ ಮಾತನಾಡಿ, ಪ್ರಥಮ್​​ಗೆ ಛೀಮಾರಿ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More