AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದಲ್ಲಿ ಜವಳಿ ವರ್ತಕನಿಂದ ರೂ. 500 ಗಳಿಗೆ 4 ಸೀರೆ ಆಫರ್, ಅಂಗಡಿಗೆ ಮುಗಿಬಿದ್ದ ಮಹಿಳೆಯರು!

ಮಂಡ್ಯದಲ್ಲಿ ಜವಳಿ ವರ್ತಕನಿಂದ ರೂ. 500 ಗಳಿಗೆ 4 ಸೀರೆ ಆಫರ್, ಅಂಗಡಿಗೆ ಮುಗಿಬಿದ್ದ ಮಹಿಳೆಯರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 30, 2025 | 7:48 PM

Share

ಹುಚ್ಚನ ಮದುವೇಲಿ ಉಂಡವನೇ ಜಾಣ ಅಂತ ಕನ್ನಡದಲ್ಲೊಂದು ಮಾತಿದೆ. ಅಂಗಡಿಗೆ ಮೊದಲು ಬಂದವರು ₹500 ಗಳಿಗೆ 4 ಸೀರೆ ಕೊಂಡಿರುತ್ತಾರೆ. ಓಕೆ, ಅವರೇನೋ ಅದೃಷ್ಟವಂತರಿರಬಹುದು, ಅದರೆ ಅವರಿಗೆ ಸಿಕ್ಕ ಸೀರೆಗಳ ಗುಣಮಟ್ಟ ಗಣನೆಗೆ ಬರುತ್ತದೆ. ಇವತ್ತು ಮಾರುಕಟ್ಟೆಯಲ್ಲಿ 500 ರೂ. ಮೌಲ್ಯ ಅಥವಾ ಖರೀದಿ ಸಾಮರ್ಥ್ಯ ಎಷ್ಟಿದೆ ಅಂತ ಎಲ್ಲರಿಗೂ ಗೊತ್ತು. ಯಾವ ವ್ಯಾಪಾರಿಯೂ ನಷ್ಟ ಮಾಡಿಕೊಳ್ಳಲಾರ!

ಮಂಡ್ಯ, ಜುಲೈ 30: ಇದೇನಿದ್ರೂ ಆಫರ್​ಗಳ (offer) ಜಮಾನಾ ಮಾರಾಯ್ರೇ. ಬೈ ವನ್ ಗೆಟ್ ಟೂ, 50% ಡಿಸ್ಕೌಂಟ್ ಸೇಲ್ ಮೊದಲಾದ ಆಮಿಷಗಳನ್ನು ನಾವು ಸಾಮಾನ್ಯವಾಗಿ ಎಲ್ಲ ಅಂಗಡಿಗಳಲ್ಲಿ ಕಾಣುತ್ತೇವೆ. ಗ್ರಾಹಕರು ನೆನಪಿಟ್ಟುಕೊಳ್ಳಬೇಕಿರುವ ಒಂದು ಸಂಗತಿಯೆಂದರೆ, ಯಾವ ವ್ಯಾಪಾರಿಯೂ ತನಗೆ ನಷ್ಟ ಮಾಡಿಕೊಂಡು ಆಫರ್ ಕೊಡಲಾರ. ಮಂಡ್ಯ ನಗರದ ವಿವಿ ರಸ್ತೆಯಲ್ಲಿ ಇವತ್ತು ಒಂದು ಜವಳಿ ಅಂಗಡಿ ಅರಂಭವಾಗಿದೆ. ಗ್ರಾಹಕರನ್ನು ಸೆಳೆಯಲು ಅಂಗಡಿಯ ಮಾಲೀಕ ₹500 ಗಳಿಗೆ 4 ಸೀರೆ ಮಾರಲು ಮುಂದಾಗಿದ್ದಾನೆ. ಸುದ್ದಿ ಕಾಳ್ಗಿಚ್ಚಿನಂತೆ ಮಂಡ್ಯದಲ್ಲಿ ಹರಡಿದೆ. ಅದರ ಪರಿಣಾಮವೇ ಇದು! ಸಾವಿರಾರು ಮಹಿಳೆಯರು ಸೀರೆ ಕೊಳ್ಳಲು ಮುಗಿಬಿದ್ದಿದ್ದಾರೆ. ಕ್ರೌಡನ್ನು ನಿಭಾಯಿಸಲಾಗದ ಅಂಗಡಿ ಮಾಲೀಕ ಪೊಲೀಸರನ್ನು ಕರೆಸಿ ಶಟರ್
ಎಳೆದು ಮನೆಗೆ ಹೋಗಿದ್ದಾನೆ!

ಇದನ್ನೂ ಓದಿ:   46 ಕೋಟಿ ಜಿಯೋ ಬಳಕೆದಾರರಿಗೆ ಬಂಪರ್ ಆಫರ್: 200 ದಿನಗಳ ವ್ಯಾಲಿಡಿಟಿಯ ಪ್ಲ್ಯಾನ್ ಬಿಡುಗಡೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ