ಇದ್ರೆ ನೆಮ್ಮದಿಯಾಗ್ ಇರ್ಬೇಕ್: ದರ್ಶನ್ ಸದ್ಯದ ಪರಿಸ್ಥಿತಿ ಬಗ್ಗೆ ಕೆ. ಮಂಜು ಮಾತು
ದರ್ಶನ್ ಅವರ ‘ದಿ ಡೆವಿಲ್’ ಸಿನಿಮಾದಿಂದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಎಂಬ ಹಾಡು ಬಿಡುಗಡೆಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ದರ್ಶನ್ ಬಗ್ಗೆ ನಿರ್ಮಾಪಕ ಕೆ. ಮಂಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಅವನು ನೆಮ್ಮದಿಯಾಗಿ ಇರುತ್ತಾನೆ. ರೇಣುಕಾಸ್ವಾಮಿ ಕುಟುಂಬಕ್ಕೆ ಒಳ್ಳೆಯದು ಮಾಡಬೇಕು’ ಎಂದು ಕೆ. ಮಂಜು ಅವರು ಹೇಳಿದ್ದಾರೆ.
ನಟ ದರ್ಶನ್ ಅಭಿನಯದ ‘ದಿ ಡೆವಿಲ್’ (The Devil) ಸಿನಿಮಾದಿಂದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ (Idre Nemmadi Agi Irbeku) ಎಂಬ ಹಾಡು ಬಿಡುಗಡೆಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ದರ್ಶನ್ ಬಗ್ಗೆ ನಿರ್ಮಾಪಕ ಕೆ. ಮಂಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ದರ್ಶನ್ ಒಳ್ಳೆಯ ಹುಡುಗ. ವೈಯಕ್ತಿಕವಾಗಿ ನನಗೆ ಒಳ್ಳೆಯ ಸ್ನೇಹಿತ. ಕಷ್ಟದಿಂದ ಬೆಳೆದವರು. ಅದು ಖುಷಿ ವಿಚಾರ. ಅವರಿಗೆ ಒಳ್ಳೆಯದಾಗುತ್ತದೆ. ತಪ್ಪು ಎಲ್ಲರೂ ಮಾಡುತ್ತಾರೆ. ತಿದ್ದಿಕೊಂಡು ನಡೆಯಬೇಕು. ಅವನು ನೆಮ್ಮದಿಯಾಗಿ ಇರುತ್ತಾನೆ. ರೇಣುಕಾಸ್ವಾಮಿ ಕುಟುಂಬಕ್ಕೆ ಒಳ್ಳೆಯದು ಮಾಡಬೇಕು’ ಎಂದು ಕೆ. ಮಂಜು (K Manju) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
