ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ

Edited By:

Updated on: May 14, 2026 | 11:33 AM

ಮಾಜಿ ಸಚಿವ, ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ ಪ್ರಧಾನಿ ನರೇಂದ್ರ ಮೋದಿಯನ್ನು ಮಾಸ್​​ ಲೀಡರ್​​ ಎಂದು ಕರೆದಿದ್ದಾರೆ. ಇಂದಿರಾ ಗಾಂಧಿ ಅವರ ಬಳಿಕ ಮೋದಿಯವರೇ ಜನಪ್ರಿಯ ನಾಯಕ. ನಾನೇನು ಅವರನ್ನು ಹೊಗಳುತ್ತಿಲ್ಲ ಇರುವ ವಾಸ್ತವಾಂಶವನ್ನು ಹೇಳುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ ಬಗ್ಗೆ ಮೋದಿ ಹೇಳಿಕೆ ಸಂಬಂಧವೂ ಅವರು ಕಿಡಿ ಕಾರಿದ್ದಾರೆ.

ತುಮಕೂರು, ಮೇ 14: ಇಂದಿರಾ ಗಾಂಧಿ ಬಿಟ್ಟರೆ ಮಾಸ್​​ ಲೀಡರ್​​ ನರೇಂದ್ರ ಮೋದಿಯೇ ಎಂದು ಮಾಜಿ ಸಚಿವ, ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ ಹೇಳಿದ್ದಾರೆ. ನಾನು ಹೀಗೆ ಹೇಳಿರೋದನ್ನು ಕೇಳಿದರೆ ನಮ್ಮಲ್ಲಿ ಕೆಲವರ ಕಣ್ಣು ಕೆಂಪಾಗುತ್ತೆ. ನಾನೇನು ಅವರನ್ನು ಹೊಗಳುತ್ತಿಲ್ಲ ಇರುವ ವಾಸ್ತವಾಂಶವನ್ನು ಹೇಳುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ ಬಗ್ಗೆ ಮೋದಿ ಹೇಳಿಕೆ ಸಂಬಂಧ ಕಿಡಿ ಕಾರಿರುವ ರಾಜಣ್ಣ, ಸಿಎಂ ಕುರ್ಚಿ ಅಲುಗಾಡುತ್ತಿದೆಯೋ ಅಥವಾ ಇಲ್ಲವೋ ಅದು ನಮ್ಮ ಪಕ್ಷದ ವಿಚಾರ. ಸಿಎಂ ಸ್ಥಾನಕ್ಕೂ ಪ್ರಧಾನಿ ಮೋದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More