ಚಾಕೊಲೇಟ್ನಿಂದ ತಯಾರಾದ ದರ್ಶನ್ ಪ್ರತಿಮೆ; ಡಿ ಬಾಸ್ಗೆ ಸ್ನೇಹಿತರ ಸರ್ಪ್ರೈಸ್
ನಟ ದರ್ಶನ್ ಅವರಿಗೆ ವಿವಾದಗಳು ಹೊಸದೇನೂ ಅಲ್ಲ. ಇತ್ತೀಚೆಗೆ ಅವರ ಆಡಿದ ಕೆಲವು ಮಾತುಗಳು ಕೂಡ ವಿವಾದಕ್ಕೆ ಕಾರಣ ಆಗಿವೆ. ಆದರೆ ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಂಡಿಲ್ಲ. ಸದ್ಯ ಅವರು ಸೆಲೆಬ್ರೇಷನ್ ಮೂಡ್ನಲ್ಲಿ ಇದ್ದಾರೆ. ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಾಕೊಲೇಟ್ನಿಂದ ಮಾಡಿದ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರ ಸ್ನೇಹಿತರ ಬಳಗ ದೊಡ್ಡದು. ಸಮಯ ಸಿಕ್ಕಾಗಲೆಲ್ಲ ಅವರು ಗೆಳೆಯರ ಜೊತೆ ಸೇರುತ್ತಾರೆ. ಈಗ ‘ಕಾಟೇರ’ (Kaatera) ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಅವರು ಸ್ನೇಹಿತರೊಂದಿಗೆ ಒಂದಷ್ಟು ಸಮಯ ಕಳೆದಿದ್ದಾರೆ. ಡಿ ಬಾಸ್ಗೆ ಆಪ್ತರಾದ ವಿನಯ್ ಅವರು ಚಾಕೊಲೇಟ್ನಿಂದ ದರ್ಶನ್ ಅವರ ಪ್ರತಿಮೆ ಮಾಡಿಸಿದ್ದಾರೆ. ಅದನ್ನು ನೋಡಿ ದರ್ಶನ್ ಖುಷಿಪಟ್ಟಿದ್ದಾರೆ. ಈ ಪ್ರತಿಮೆ 6.2 ಅಡಿ ಎತ್ತರ ಇದೆ. ಇದರ ತೂಕ ಬರೋಬ್ಬರಿ 250 ಕೆಜಿ. ರಾಮನಗರದಲ್ಲಿ ಈ ಪ್ರತಿಮೆಯನ್ನು (Darshan chocolate statue) ಅನಾವರಣ ಮಾಡಲಾಗಿದೆ. ಇತ್ತೀಚೆಗೆ ‘ಕಾಟೇರ’ ಚಿತ್ರದ ಸಕ್ಸಸ್ ಸೆಲೆಬ್ರೇಷನ್ ನಡೆಯಿತು. 50ನೇ ದಿನದ ಸಂಭ್ರಮಾಚರಣೆ ವೇಳೆ ದರ್ಶನ್ ಅವರು ಆಡಿದ ಮಾತುಗಳಿಂದ ವಿವಾದ ಶುರುವಾಗಿದೆ. ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ದರ್ಶನ್ ಅವರು ‘ತಗಡು’ ಎಂದಿದ್ದಕ್ಕೆ ಕೆಲವರಿಂದ ಖಂಡನೆ ವ್ಯಕ್ತವಾಗಿದೆ. ಅದಕ್ಕೆಲ್ಲ ಡೋಂಟ್ ಕೇರ್ ಎನ್ನುತ್ತಿರುವ ದರ್ಶನ್ ಅವರು ಸದ್ಯ ಪಾರ್ಟಿ ಮೂಡ್ನಲ್ಲಿ ಇದ್ದಾರೆ. ಸ್ನೇಹಿತರ ಜೊತೆ ಸೇರಿ ಅವರು ಸೆಲೆಬ್ರೇಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.