‘ಸಿನಿಮಾ ಆಗುವ ತನಕ ನಿರ್ಮಾಪಕ, ಆಮೇಲೆ ತಗಡು’; ದರ್ಶನ್ಗೆ ಉಮಾಪತಿ ತಿರುಗೇಟು
‘ನಾನು ಎಲ್ಲಿಯೂ ನಾಲಿಗೆ ಹರಿಬಿಟ್ಟಿಲ್ಲ. ಯಾರು ಯಾರಿಗೂ ವಾರ್ನಿಂಗ್ ಕೊಡೋಕೆ ಆಗಲ್ಲ. ವಾರ್ನಿಂಗ್ ಕೊಡೋದು ಮೇಲೆ ಇರುವ ಭಗವಂತ ಮತ್ತು ನಮ್ಮ ಮನೆಯಲ್ಲಿ ಇರುವ ತಂದೆ-ತಾಯಿ ಮಾತ್ರ. ಇಂಥ ವಾರ್ನಿಂಗ್ಗಳಿಗೆ ನಾನು ಕೇರ್ ಮಾಡುವ ವ್ಯಕ್ತಿ ಅಲ್ಲ. ಬೇಕಾದಷ್ಟು ವಾರ್ನಿಂಗ್ಗಳನ್ನು ನಾನು ಕಸದ ಬುಟ್ಟಿಗೆ ಎಸೆದಿದ್ದೇನೆ. ಎಲ್ಲವನ್ನೂ ದೇವರ ನೋಡಿಕೊಳ್ಳುತ್ತಾನೆ’ ಎಂದು ಉಮಾಪತಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ನಿರ್ಮಾಪಕ ಉಮಾಪತಿ ಮತ್ತು ನಟ ದರ್ಶನ್ (Darshan) ನಡುವಿನ ಕಿರಿಕ್ ಈಗ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಇಬ್ಬರೂ ಕೂಡ ನೇರವಾಗಿ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ‘ಕಾಟೇರ’ (Kaatera) ಹಾಗೂ ‘ರಾಬರ್ಟ್’ ಸಿನಿಮಾಗಳ ಕಥೆ-ಟೈಟಲ್ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಗೊಂದಲಗಳು ಮೂಡಿವೆ. ಈ ಕುರಿತು ‘ಕಾಟೇರ’ ಸಿನಿಮಾದ 50ನೇ ದಿನದ ಸುದ್ದಿಗೋಷ್ಠಿಯಲ್ಲಿ ದರ್ಶನ್ ಅವರು ಸ್ಪಷ್ಟನೆ ನೀಡಿದರು. ಈ ವೇಳೆ ‘ತಗಡು’ ಎಂಬ ಪದ ಬಳಕೆ ಮಾಡಿದರು. ಅದಕ್ಕೆ ‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರು ಯಾರಿಗೆ ಗುಮ್ಮುತ್ತಾರೆ? ಇವರೆಲ್ಲ ಕಾನೂನಿಗಿಂತ ದೊಡ್ಡವರಾ? ವೇದಿಕೆ ಸಿಕ್ಕಿದೆ ಅಂತ ಹೇಗೆ ಬೇಕೋ ಹಾಗೆ ಮಾತನಾಡಬಾರದು. ಸಿನಿಮಾ ಆಗುವವರೆಗೆ ನಿರ್ಮಾಪಕರು. ಸಿನಿಮಾ ಆದಮೇಲೆ ತಡಗು. ಇದೇ ತಗಡು ತಾನೇ ರಾಬರ್ಟ್ ಸಿನಿಮಾ ಮಾಡಿದ್ದು? ಅವರು ಸಿನಿಮಾದ ಮುಖ. ಆದರೆ ಬಂಡವಾಳ ಹೂಡಿದ್ದು ನಾನು. ಮನಸಾಕ್ಷಿಗೆ ಯಾರೂ ಸುಳ್ಳು ಹೇಳೋಕೆ ಆಗಲ್ಲ’ ಎಂದು ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!

ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ

ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ

ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್ ಪ್ರಶ್ನೆ
