AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ತಿ, ಜಡೇಶ್​, ಸೂರಜ್​ಗೆ ಕಾರು ಉಡುಗೊರೆ; ಸ್ಟಾರ್ಟ್​ ಮಾಡಿ ಹಾರೈಸಿದ ದರ್ಶನ್​

ಮಾಸ್ತಿ, ಜಡೇಶ್​, ಸೂರಜ್​ಗೆ ಕಾರು ಉಡುಗೊರೆ; ಸ್ಟಾರ್ಟ್​ ಮಾಡಿ ಹಾರೈಸಿದ ದರ್ಶನ್​

ಮದನ್​ ಕುಮಾರ್​
|

Updated on: May 02, 2024 | 10:23 PM

Share

ಸೂಪರ್​ ಹಿಟ್​ ‘ಕಾಟೇರ’ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಆ ಖುಷಿಯಲ್ಲಿ ಚಿತ್ರತಂಡದವರಿಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಕಾರು ಕೊಡಿಸಿದ್ದಾರೆ. ಕಾರು ಸ್ಟಾರ್​ ಮಾಡುವ ಮೂಲಕ ‘ಚಾಲೆಂಜಿಂಗ್ ಸ್ಟಾರ್​’ ದರ್ಶನ್​ ಅವರು ಜಡೇಶ್​, ಮಾಸ್ತಿ ಮತ್ತು ಸೂರಜ್​ ಅವರಿಗೆ ವಿಶ್​ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ನಟ ದರ್ಶನ್​ ಅವರು ‘ಕಾಟೇರ’ (Kaatera) ಸಿನಿಮಾದಿಂದ ಭರ್ಜರಿ ಯಶಸ್ಸು ಕಂಡರು. ಅವರ ಜೊತೆಗೆ ಚಿತ್ರತಂಡದಲ್ಲಿ ಕೆಲಸ ಮಾಡಿದ ಅನೇಕರಿಗೆ ಗೆಲುವು ಸಿಕ್ಕಿತು. ಈ ಸಿನಿಮಾದ ಪರದೆ ಹಿಂದೆ ಕೆಲಸ ಮಾಡಿದ ತಂತ್ರಜ್ಞರ ಬೆನ್ನುತಟ್ಟುವ ಕೆಲಸ ಇಂದು ಆಗಿದೆ. ಹೌದು, ಕಥೆ ಬರೆದ ಜಡೇಶ್​ ಕುಮಾರ್​, ಸಂಭಾಷಣೆ ಬರೆದ ಮಾಸ್ತಿ ಹಾಗೂ ನಟ ಸೂರಜ್​ ಅವರಿಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ (Rockline Venkatesh) ಅವರು ಹೊಸ ಕಾರು ಕೊಡಿಸಿದ್ದಾರೆ. ಇಂದು (ಮೇ 2) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ನಂತರ ಈ ಮೂವರಿಗೆ ಕಾರು ಗಿಫ್ಟ್​ ನೀಡಲಾಯಿತು. ಮಾಸ್ತಿ, ಜಡೇಶ್​ ಮತ್ತು ಸೂರಜ್​ ಅವರ ಹೊಸ ಕಾರನ್ನು ದರ್ಶನ್​ (Darshan) ಅವರು ಸ್ಟಾರ್ಟ್​ ಮಾಡಿದ್ದಾರೆ. ಕೈ ನೋವಿನ ನಡುವೆಯೂ ಅವರು ಕಾರು ಆನ್​ ಮಾಡಿ ಶುಭ ಕೋರಿದ್ದಾರೆ. 2023ರ ಡಿಸೆಂಬರ್​ 29ರಂದು ಬಿಡುಗಡೆ ಆದ ‘ಕಾಟೇರ’ ಸಿನಿಮಾ 100 ದಿನಗಳನ್ನು ಪೂರೈಸಿದೆ. ಆ ಸಂಭ್ರಮವನ್ನು ಈ ರೀತಿಯಲ್ಲಿ ಚಿತ್ರತಂಡ ಸೆಲೆಬ್ರೇಟ್ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ತರುಣ್​ ಸುಧೀರ್​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಹಾಜರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More