ದರ್ಶನ್ ಮೇಲಿರುವ ಕೊಲೆ ಆರೋಪದ ಬಗ್ಗೆ ಆಪ್ತ ಗೆಳೆಯ ತರುಣ್ ಸುಧೀರ್ ಮೊದಲ ಮಾತು
ನಟ ದರ್ಶನ್ ಅವರ ಜೊತೆ ಆಪ್ತ ಒಡನಾಟ ಹೊಂದಿರುವ ತರುಣ್ ಸುಧೀರ್ ಅವರು ಇದೇ ಮೊದಲ ಬಾರಿಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ವರ್ಷಗಳಿಂದ ದರ್ಶನ್ ಮತ್ತು ತರುಣ್ ಸುಧೀರ್ ಕುಟುಂಬದ ನಡುವೆ ಆತ್ಮೀಯತೆ ಇದೆ. ಈಗ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದು, ಆ ಕುರಿತು ತರುಣ್ ಸುಧೀರ್ ಭಾವುಕವಾಗಿ ಮಾತನಾಡಿದ್ದಾರೆ.
ದರ್ಶನ್ ನಟನೆಯ ‘ರಾಬರ್ಟ್’, ‘ಕಾಟೇರ’ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ತರುಣ್ ಸುಧೀರ್ ಅವರು ಈಗ ರೇಣುಕಾ ಸ್ವಾಮಿ ಕೊಲೆ ಕೇಸ್ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ಏನು ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಮನಸ್ಸಿಗೆ ನೋವಾಗಿದೆ. ರೇಣುಕಾ ಸ್ವಾಮಿ ಕುಟುಂಬದ ಬಗ್ಗೆಯೂ ನನಗೆ ಅಪಾರವಾದ ನೋವು ಇದೆ. ಈ ಘಟನೆ ಆಗಬಾರದಿತ್ತು. ಇಲ್ಲಿ ಕೂಡ ನಮ್ಮ ಕುಟುಂಬ ಇದೆ. ನಮ್ಮ ಅಣ್ಣನೇ ಆ ರೀತಿ ಮಾಡಿದ್ದರೆ ಏನು ನೋವು ಆಗುತ್ತೋ ಅದೇ ನೋವಲ್ಲಿ ನಾನು ಇದ್ದೇನೆ. ದರ್ಶನ್ ಅವರದ್ದು ತಪ್ಪು ಇಲ್ಲ ಅಂತಲೇ ಹೊರಗೆ ಬರಬಹುದಲ್ಲ ಎಂಬ ನಂಬಿಕೆ ನನ್ನದು. ಅದನ್ನೂ ಮೀರಿ ಕಾನೂನು ಇದೆ. ತನಿಖೆ ಸರಿಯಾಗಿ ಆಗುತ್ತದೆ. ಹಾಗಾಗಿ ವೈಯಕ್ತಿಕವಾಗಿ ನಾನೂ ಏನೂ ಹೇಳೋಕೆ ಆಗಲ್ಲ. ದರ್ಶನ್ ಅವರನ್ನು ನಂಬಿಕೊಂಡ ದೊಡ್ಡ ಕುಟುಂಬಕ್ಕೆ ಕೂಡ ನೋವು ಆಗಿದೆ’ ಎಂದು ತರುಣ್ ಸುಧೀರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us