ಕಲಬುರಗಿ ಬಂದ್: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ, ವ್ಯಾಪಾರಸ್ಥರ ಮೇಲೆ ದರ್ಪ
ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆಗಳು ನಡೆದವು.ಪ್ರತಿಭಟನೆ ಹೆಸರಿನಲ್ಲಿ ಕೆಲವು ಕಡೆ ಕಿಡಿಗೇಡಿಗಳು ಗುಂಡಾ ವರ್ತನೆ ತೋರಿದ್ದು, ವಾಹನಗಳಿಗೆ ಹಾನಿ ಮಾಡಿದ್ದಾರೆ ಮತ್ತು ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ನಗರದಾದ್ಯಂತ ಬೈಕ್ನಲ್ಲಿ ಕಿಡಿಗೇಡಿಗಳು ಸುತ್ತಾಡಿದ್ದಾರೆ.
ಕಲಬುರಗಿ, ಡಿಸೆಂಬರ್ 24: ಡಾ. ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರು ನೀಡಿರುವ ಹೇಳಿಕೆ ಖಂಡಿಸಿ ಕಲಬುರಗಿ ಬಂದ್ ಕರೆ ನೀಡಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ಹೆಸರಿನಲ್ಲಿ ಕೆಲವು ಕಡೆ ಕಿಡಗೇಡಿಗಳು ಗುಂಡಾ ವರ್ತನೆ ತೋರಿದ್ದಾರೆ. ಬೈಕ್ನಲ್ಲಿ ಬರ್ತಿದ್ದ ವ್ಯೆಕ್ತಿಯನ್ನ ತಡೆದು ದೊಣ್ಣೆಯಿಂದ ಬೈಕ್ಗೆ ಹೊಡೆದಿದ್ದಾರೆ.
ಕಲಬುರಗಿ ನಗರದ ಶಹಬಜಾರ್ ಬಳಿ ಬರುತ್ತಿದ್ದ ವ್ಯಕ್ತಿಯ ಬೈಕ್ಗೆ ಕಿಡಿಗೇಡಿಗಳು ದೊಣ್ಣೆಯಿಂದ ಹೊಡೆದಿದ್ದಾರೆ. ಅಲ್ಲದೇ, ಆಗಿದ್ದ ಅಂಗಡಿಯನ್ನು ಬಲವಂತವಾಗಿ ಮುಚ್ಚಿಸಿ ಕುರ್ಚಿ ಹೊರಗೆ ಬಿಸಾಕಿದ್ದಾರೆ. ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ನಗರದಾದ್ಯಂತ ಬೈಕ್ನಲ್ಲಿ ಕಿಡಿಗೇಡಿಗಳು ಸುತ್ತಾಡಿದ್ದಾರೆ.
Latest Videos