ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ
ಕಲಬುರಗಿಯ ಶೇಖ್ ರೋಜಾ ದರ್ಗಾದಲ್ಲಿ ನಡೆದ ಸಾಮೂಹಿಕ ವಿವಾಹದ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಮುಸ್ಲಿಂ ಧ್ವಜವನ್ನು ರಾಷ್ಟ್ರಧ್ವಜದ ಮೇಲೆ ಹಾರಿಸಲಾಗಿದ್ದು, ಇದರಿಂದ ರಾಷ್ಟ್ರೀಯ ಭಾವನೆಗೆ ಧಕ್ಕೆಯಾಗಿದೆ. ಈ ಘಟನೆಯ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲಬುರಗಿ, ಜನವರಿ 11: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ (Muslim Flag) ಮಾಡಿರುವಂತಹ ಘಟನೆ ನಗರದ ಶೇಖ್ ರೋಜಾ ದರ್ಗಾದ ಆವರಣದಲ್ಲಿ ನಡೆದಿದೆ. ನಿನ್ನೆ ಶೇಖ್ ರೋಜಾದಲ್ಲಿ ಸಾಮೂಹಿಕ ವಿವಾಹ ವೇಳೆ ಧ್ವಜಾರೋಹಣ ಮಾಡಲಾಗಿದ್ದು, ಮುಸ್ಲಿಂ ಧ್ವಜದ ಕೆಳಗೆ ರಾಷ್ಟ್ರಧ್ವಜ ಇಟ್ಟು ಅಪಮಾನ ಮಾಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಚೌಕ್ ಪೊಲೀಸ್ ಠಾಣೆಗೆ ಕೆಲ ಮುಸ್ಲಿಂ ಮುಖಂಡರಿಂದಲೇ ದೂರು ನೀಡಲಾಗಿದೆ. ಇನ್ನು ರಾಷ್ಟ್ರ ಧ್ವಜ ಅಪಮಾನ ಮಾಡಿರುವುದನ್ನು ಹಿಂದು ಜಾಗೃತಿ ಸೇನೆ ಖಂಡಿಸಿದೆ. ಕ್ರಮಕ್ಕೆ ಆಗ್ರಹಿಸಲಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.