ಕಲಬುರಗಿ ಮರ್ಯಾದಾ ಹತ್ಯೆ: ಸಮಗ್ರ ಮಾಹಿತಿಯನ್ನು ನೀಡಿದ ಪೊಲೀಸ್ ಕಮೀಷನರ್ ಡಾ ಶರಣಪ್ಪ

Updated on: Aug 30, 2025 | 5:28 PM

ಮಗಳು ಅನ್ಯಜಾತಿಯ ಯುವಕನನ್ನು ಮದುವೆಯಾದರೆ, ಉಳಿದ ಇಬ್ಬರು ಹೆಣ್ಣುಮಕ್ಕಳಿಗೆ ವರಗಳು ಸಿಗೋದು ಕಷ್ಟವಾಗುತ್ತದೆ ಎಂಬ ಆತಂಕಕ್ಕೊಳಗಾಗಿದ್ದ ಶಂಕರ್, ಪ್ರೀತಿಯಲ್ಲಿ ಬಿದ್ದಿದ್ದ ಮಗಳನ್ನೇ ಕೊಲ್ಲಲು ನಿರ್ಧರಿಸಿದ್ದ. ಕೊಲೆ ಮಾಡಿದ್ದೂ ಅಲ್ಲದೆ ಶವಸಂಸ್ಕಾರ ನಡೆಸಿ ಸಾಕ್ಷ್ಯ ನಾಶ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಶಂಕರ್ ಮತ್ತು ಉಳಿದಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ಶರಣಪ್ಪ ಹೇಳಿದರು.

ಕಲಬುರಗಿ, ಆಗಸ್ಟ್ 30: ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮರ್ಯಾದಾ ಹತ್ಯೆಗೆ ಸಂಬಂಧಿಸಿದಂತೆ ಕಲಬುರಗಿ ಪೊಲೀಸ್ ಕಮೀಷನರ್ ಡಾ ಶರಣಪ್ಪ ಎಸ್ ಡಿ (Dr Sharanappa SD) ಸುದ್ದಿಗೋಷ್ಠಿಯೊಂದನ್ನು ನಡೆಸಿ ಹೆಚ್ಚಿ ವಿವರಗಳನ್ನು ನೀಡಿದ್ದಾರೆ. ಎರಡನೇ ಪಿಯುಸಿ ಮುಗಿಸಿದ್ದ ಕವಿತಾ ಹೆಸರಿನ 18-ವರ್ಷದ ಯುವತಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಅವನನ್ನೇ ಮದುವೆಯಾಗೋದಾಗಿ ಹೇಳಿದಾಗ ಕುಪಿತಗೊಂಡ ಅವಳ ತಂದೆ ಶಂಕರ, ತನ್ನ ತಮ್ಮನ ಮಗ ಹಾಗೂ ಷಡ್ಡಕನನ್ನು ಜೊತೆ ಸೇರಿಸಿಕೊಂಡು ಕವಿತಾಳ ಕತ್ತು ಹಿಸುಕಿ ಸಾಯಿಸುತ್ತಾರೆ ಮತ್ತು ಅವಳ ಸಾವನ್ನು ಅತ್ಮಹತ್ಯೆ ಎಂಬಂತೆ ಬಿಂಬಿಸಲು ಸತ್ತು ಶವವಾಗಿದ್ದ ಅವಳ ಬಾಯಲ್ಲಿ ಕ್ರಿಮಿನಾಶಕ ಔಷಧಿಯನ್ನು ಸುರಿದು ನಂತರ ಅಂತಿಮ ಸಂಸ್ಕಾರವನ್ನೂ ನಡೆಸುತ್ತಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ವಿಚಾರಣೆ ನಡೆಸಲಾಗಿ ಯುವತಿಯ ಕೊಲೆ ನಡೆದಿರುವುದು ಬೆಳಕಿಗೆ ಬರುತ್ತದೆ ಎಂದು ಕಮೀಶನರ್ ಶರಣಪ್ಪ ಹೇಳುತ್ತಾರೆ.

ಇದನ್ನೂ ಓದಿ:  ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರೂ ದಲಿತರಿಗೆ ದೇಗುಲದಲ್ಲಿ ಕಾಲಿಡಲು ಅವಕಾಶವಿಲ್ಲ: ಮರ್ಯಾದಾ ಹತ್ಯೆ ಬಗ್ಗೆ ಸಿಎಂ ಟ್ವೀಟ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ