BSY in Kalaburagi: ಬಿಎಸ್ ಯಡಿಯೂರಪ್ಪ ರೋಡ್ ಶೋನಲ್ಲಿ ಲಂಬಾಣಿ ಸಮುದಾಯದ ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ ಶಾಸಕರ ಪತ್ನಿ!
ಕಲಬುರಗಿ ಗ್ರಾಮೀಣ ಮತ್ತು ಚಿತ್ತಾಪೂರ ವಿಧಾನಸಭಾ ಕ್ಷೇತ್ರಗಳಲ್ಲಿ ಲಂಬಾಣಿ ಸಮುದಾಯದ ಜನ ಸಾಕಷ್ಟಿದ್ದಾರೆ. ಅವರ ಮತಗಳು ನಿರ್ಣಾಯಕ ಎಂದರೂ ತಪ್ಪಾಗಲಾರದು.
ಕಲಬುರಗಿ: ಜಿಲ್ಲೆಯ ಶಹಾಬಾದ್ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಭರ್ಜರಿ ರೋಡ್ ಶೋ ನಡೆಸಿದ್ದು ಸಹಸ್ರಾರು ಜನ ಇದರಲ್ಲಿ ಭಾಗವಹಿಸಿದ್ದಾರೆ. ಶಹಾಬಾದ್ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದು ಬಿಜೆಪಿಯ ಬಸವರಾಜ್ ಮತ್ತಿಮೂಡ್ (Basavaraj Mattimud) ಇಲ್ಲಿಯ ಶಾಸಕರಾಗಿದ್ದಾರೆ. ರೋಡ್ ಶೋನಲ್ಲಿ ಶಾಸಕರು ಕುಣಿದಿದ್ದು ನಿಜ ಆದರೆ ಅವರ ಪತ್ನಿ ಜಯಶ್ರೀ ಮತ್ತಿಮೂಡ್ (Jayashree Mattimud) ಅವರು ಸಹ ಲಂಬಾಣಿ ಸಮುದಾಯದ ಮಹಿಳೆಯರೊಂದಿಗೆ ಹೆಜ್ಜೆ ಹಾಕಿದರು. ನಾವು ಈಗಾಗಲೇ ವರದಿ ಮಾಡಿರುವಂತೆ ಕಲಬುರಗಿ ಗ್ರಾಮೀಣ ಮತ್ತು ಚಿತ್ತಾಪೂರ ವಿಧಾನಸಭಾ ಕ್ಷೇತ್ರಗಳಲ್ಲಿ ಲಂಬಾಣಿ ಸಮುದಾಯದ ಜನ ಸಾಕಷ್ಟಿದ್ದಾರೆ. ಅವರ ಮತಗಳು ನಿರ್ಣಾಯಕ ಎಂದರೂ ತಪ್ಪಾಗಲಾರದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 07, 2023 04:40 PM
Latest Videos