Loading video

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ ಸಿಬ್ಬಂದಿ

| Updated By: ವಿವೇಕ ಬಿರಾದಾರ

Updated on: Feb 19, 2025 | 11:13 AM

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕರ್ತವ್ಯದಲ್ಲಿ ಇದ್ದ 35 ವರ್ಷದ ಚಂದನಸಿಂಗ್ ಎಂಬ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಕಂಪನಿ ಸಿಬ್ಬಂದಿ ಅಮಾನವೀಯವಾಗಿ ಎಳೆದೊಯ್ದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯಿಂದ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಕಲಬುರಗಿ, ಫೆಬ್ರವರಿ 19: ಕರ್ತವ್ಯನಿರತ ವೇಳೆ ಹೃದಯಾಘಾತದಿಂದ ಮೃತಪಟ್ಟ ಕಾರ್ಮಿಕನ ಮೃತದೇವನ್ನು ಶ್ರೀ ಸಿಮೆಂಟ್ ಕಂಪನಿ ಸಿಬ್ಬಂದಿ ಪ್ರಾಣಿ ತರಹ ಎಳೆದೊಯ್ದ ವಿಡಿಯೋ ವೈರಲ್​ ಆಗಿದೆ. ಮನಕಲಕುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ನಡೆದಿದೆ. ಬಿಹಾರ ಮೂಲದ ಚಂದನಸಿಂಗ್ (35) ಮೃತ ದುದೈವಿ. ಚಂದನಸಿಂಗ್ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಕರ್ತವ್ಯನಿರತ ವೇಳೆ ಲೋ ಬಿಪಿಯಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ಕಾರ್ಮಿಕ ಚಂದನಸಿಂಗ್​ ತದೇಹವನ್ನು ಸಿಬ್ಬಂದಿ ದರದರನೇ ಎಳೆದುಕೊಂಡು ಹೋಗಿದ್ದಾರೆ. ಶ್ರೀ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸೇಡಂ ಪೊಲೀಸರು, 6 ಮಂದಿ ಕಾರ್ಮಿಕರನ್ನು ಬಂಧಸಿದ್ದಾರೆ. ಆರೋಪಿಗಳಾದ ಹೈದರ್ ಅಲಿ, ರವಿಶಂಕರ್, ಹರಿಂದರ್ ನಿಶಾದ್, ಅಜಯ್, ರಮೇಶಚಂದ್ರ ಅಖಿಲೇಶ್‌ ಬಂಧಿತ ಆರೋಪಿಗಳು.  ಬಿಎನ್​ಎಸ್​ ಕಾಯ್ದೆಯ 129(ಇ) ಮತ್ತು 129(ಡಿ) ಅಡಿ ಕೇಸ್ ದಾಖಲಾಗಿದೆ. ಬಂಧಿತ 6 ಮಂದಿ ಕಾರ್ಮಿಕರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ‌ಒಪ್ಪಿಸಿದ್ದಾರೆ.

Published on: Feb 19, 2025 07:41 AM