ಕಾಳಿ‌ ನದಿ ಹೊಸ ಸೇತುವೆಯಡಿ ಬಿರುಕು: ಸುಳ್ಳು ಮಾಹಿತಿ ಹಬ್ಬಿಸುವವರ ವಿರುದ್ಧ ಕ್ರಮ‌, ಜಿಲ್ಲಾಧಿಕಾರಿ ಎಚ್ಚರಿಕೆ

|

Updated on: Aug 16, 2024 | 8:18 PM

ಕಾರವಾರದ ಕಾಳಿ‌ ನದಿ ಹೊಸ ಸೇತುವೆಯಡಿ ಬಿರುಕು ಕಾಣಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ‘ನಿನ್ನೆಯೇ ಈ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆ. IRB ಹಾಗೂ NHAI ಅಧಿಕಾರಿಗಳು ಮತ್ತು ತಜ್ಞರು ಇಂದು ಪರಿಶೀಲನೆ ನಡೆಸಿದ್ದಾರೆ. ಹೊಸ ಸೇತುವೆಯಡಿ ಯಾವುದೇ ಬಿರುಕಿಲ್ಲ, ಅದು ಒಂದರ ಮೇಲೊಂದು ಹಾಕಿದ ಕಾಂಕ್ರೀಟ್ ಪದರವಷ್ಟೇ ಎಂದಿದ್ದಾರೆ.

ಉತ್ತರ ಕನ್ನಡ, ಆ.16: ಕಾರವಾರದ ಕಾಳಿ‌ ನದಿ ಹೊಸ ಸೇತುವೆಯಡಿ ಬಿರುಕು ಕಾಣಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ‘ನಿನ್ನೆಯೇ ಈ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆ. IRB ಹಾಗೂ NHAI ಅಧಿಕಾರಿಗಳು ಮತ್ತು ತಜ್ಞರು ಇಂದು ಪರಿಶೀಲನೆ ನಡೆಸಿದ್ದಾರೆ. ಹೊಸ ಸೇತುವೆಯಡಿ ಯಾವುದೇ ಬಿರುಕಿಲ್ಲ, ಅದು ಒಂದರ ಮೇಲೊಂದು ಹಾಕಿದ ಕಾಂಕ್ರೀಟ್ ಪದರವಷ್ಟೇ. NHAIಯವರು ಓವರ್ ಲ್ಯಾಪಿಂಗ್ ಆಫ್ ಕಾಂಕ್ರೀಟ್ ಸ್ಲರಿ ಎಂದು ವರದಿ ಕೊಟ್ಟಿದ್ದಾರೆ. ಕಾಂಕ್ರೀಟ್ ಪದರ ಒಂದರ ಮೇಲೊಂದು ಹಾಕಿದ ಕಾರಣ ಬಿರುಕು ಬಿದ್ದಂತೇ ಕಾಣುತ್ತಿದೆ. ಜನರು ಯಾವುದೇ ಆತಂಕವಿಲ್ಲದೇ ಸೇತುವೆಯಲ್ಲಿ ಪ್ರಯಾಣಿಸಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುವವರ ಬಗ್ಗೆ ಮಾಹಿತಿ ಕಲೆ ಹಾಕಲು ಸೂಚಿಸಿದ್ದೇನೆ. ಸುಳ್ಳು ಮಾಹಿತಿ ಹಬ್ಬಿಸುವವರ ವಿರುದ್ಧ ಕ್ರಮ‌ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 16, 2024 08:17 PM