ಕಾಳಿ ನದಿಯ ಹೊಸ ಸೇತುವೆ ಕೂಡ ಸೇಫ್ ಅಲ್ಲ; ಮತ್ತೊಂದು ಅನಾಹುತವಾಗುವ ಸುಳಿವು ಬಿಚ್ಚಿಟ್ಟ ಕಾರವಾರ ಶಾಸಕ
ಕಾಳಿ ನದಿಯ ಹೊಸ ಸೇತುವೆ(Kali River Bridge) ಕೂಡ ಸೇಫ್ ಇಲ್ಲ, ಈ ಕುರಿತು ಹಿಂದೆಯೇ ಪ್ರತಿಭಟನೆ ಮಾಡಿದ್ದೆ. ಆದ್ರೆ, ಸ್ಥಳೀಯರು ಅದಕ್ಕೆ ರಾಜಕೀಯ ತಿರುವು ಕೊಟ್ಟರು. ಜನರ ಜೀವದ ವಿಚಾರದಲ್ಲಿ ರಾಜಕೀಯ ಮಾಡಿದಕ್ಕೆ ಬೇಸರವಾಗಿ ಪ್ರತಿಭಟನೆ ಕೈ ಬಿಟ್ಟೆ ಎನ್ನುವ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಅನಾಹುತವಾಗುವ ಸುಳಿವನ್ನು ಕಾರವಾರ ಶಾಸಕ ಸತೀಶ್ ಸೈಲ್ ಬಿಚ್ಚಿಟ್ಟಿದ್ದಾರೆ.
ಉತ್ತರ ಕನ್ನಡ, ಆ.16: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಅನಾಹುತವಾಗುವ ಸುಳಿವನ್ನು ಕಾರವಾರ ಶಾಸಕ ಸತೀಶ್ ಸೈಲ್(Satish Sail) ಬಿಚ್ಚಿಟ್ಟಿದ್ದಾರೆ. ಅಂಕೋಲಾದ ಶಿರೂರಿನಲ್ಲಿ ಮಾತನಾಡಿದ ಅವರು, ‘ಕಾಳಿ ನದಿಯ ಹೊಸ ಸೇತುವೆ(Kali River Bridge) ಕೂಡ ಸೇಫ್ ಇಲ್ಲ, ಈ ಕುರಿತು ಹಿಂದೆಯೇ ಪ್ರತಿಭಟನೆ ಮಾಡಿದ್ದೆ. ಆದ್ರೆ, ಸ್ಥಳೀಯರು ಅದಕ್ಕೆ ರಾಜಕೀಯ ತಿರುವು ಕೊಟ್ಟರು. ಜನರ ಜೀವದ ವಿಚಾರದಲ್ಲಿ ರಾಜಕೀಯ ಮಾಡಿದಕ್ಕೆ ಬೇಸರವಾಗಿ ಪ್ರತಿಭಟನೆ ಕೈ ಬಿಟ್ಟೆ. ಈಗ ಆ ಸೇತುವೆ ಬಿರುಕು ಬಿಟ್ಟಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ ಎಂದರು.
ಇನ್ನು ವಾರದ ಹಿಂದೆ ಹಳೆ ಸೇತುವೆ ಕುಸಿದ ಹಿನ್ನೆಲೆ ಎರಡು ಬದಿಯ ವಾಹನಗಳು ಒಂದೇ ಸೇತುವೆ ಮೇಲೆ ಸಂಚರಿಸುತ್ತಿವೆ. ಹೀಗಾಗಿ ಸಂಬಂಧಪಟ್ಟವರು ಆದಷ್ಟು ಬೇಗ ಮುನ್ನೆಚ್ಚರಿಕೆ ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಅನಾಹುತ ಆಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಐಆರ್‌ಬಿ ಯವರು ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ:ಕಾರವಾರ ಸೇತುವೆ ಕುಸಿತ: ಕಾಳಿ ನದಿಗೆ ಬಿದ್ದು ಬದುಕಿ ಬಂದ ರೋಚಕ ಅನುಭವ ವಿವರಿಸಿದ ಲಾರಿ ಚಾಲಕ ಬಾಲ ಮುರುಗನ್
ಸುಮಾರು 41 ವರ್ಷಗಳಿಂದ ಕಾರವಾರ-ಗೋವಾ ನಡುವೆ ಸಂಚಾರಕ್ಕೆ ಬಳಕೆಯಾಗುತ್ತಿದ್ದ ಸೇತುವೆ ಆ.7 ರ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದುಬಿದ್ದಿತ್ತು. ಈ ದುರ್ಘಟನೆಯಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೂಡಲೇ ಹಳೆಯ ಸೇತುವೆ ಪಕ್ಕದಲ್ಲಿದ್ದ ಹೊಸ ಸೇತುವೆ ಮೇಲೆ ಸಂಚಾರ ನಿರ್ಭಂದಿಸಿ, ಸೇತುವೆಯ ಗುಣಮಟ್ಟದ ಕುರಿತು ವರದಿ ನೀಡುವಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪೆನಿಗೆ ಸೂಚನೆ ನೀಡಿದ್ದರು. ಅದರಂತೆ ಪರಿಶೀಲನೆ ನಡೆಸಿದ ಬಳಿಕ ಹೊಸ ಸೇತುವೆ ಮೂಲಕ ವಾಹನ ಸಂಚಾರಕ್ಕೆ NHAI ಅಸ್ತು ನೀಡಿತ್ತು. ಇದೀಗ ಕಾರವಾರ ಶಾಸಕ ಸತೀಶ್ ಸೈಲ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ