ಕನ್ನಡ ಭಾಷೆಯ ಬಗ್ಗೆ ಮಾತಾಡಲು ಕಮಲ್ ಹಾಸನ್​ಗೆ ಇರೋ ಯೋಗ್ಯತೆಯಾದರೂ ಏನು? ನಾರಾಯಣಗೌಡ, ಕರವೇ

Updated on: May 28, 2025 | 1:43 PM

ಕನ್ನಡಿಗರಿಗೆ ಸಹನೆ ಜಾಸ್ತಿ, ಸಹಿಸಿಕೊಳ್ಳೋದು ಒಳ್ಳೆಯತನದ ಲಕ್ಷಣ, ಆದರೆ ಬೇರೆಯವರು ಅದನ್ನು ದೌರ್ಬಲ್ಯವೆಂದು ಭಾವಿಸಬಾರದು, ಕನ್ನಡಿಗರು ಮೃದು ಸ್ವಭಾವದವರು ಮತ್ತು ಸ್ನೇಹ ಜೀವಿಗಳು; ಆದರೆ ಭಾಷೆ-ನೆಲ-ಜಲದ ವಿಷಯದಲ್ಲಿ ನಮ್ಮನ್ನು ಯಾರಾದರೂ ಕೆಣಕಿದರೆ ಒಗ್ಗೂಡಿ ಮುಗಿ ಬೀಳುತ್ತೇವೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದರು.

ಬೆಂಗಳೂರು, ಮೇ 28: ಕಮಲ್ ಹಾಸನ್  ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಆಡಿದ ಮಾತು ಬಹಳ ದುಬಾರಿಯಾಗಿದೆ. ಇಂದು ನಮ್ಮ ವರದಿಗಾರನೊಂದಿಗೆ ಮಾತಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ (TA Narayanagowda), ಕಮಲ್ ಹಾಸನ್ ಕೇವಲ ತಮಿಳರನ್ನು ಓಲೈಸಲು ಮತ್ತು ತನ್ನ ಭಾಷೆಯ ಮೇಲಿನ ದುರಭಿಮಾನದಿಂದ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಅವರಿಗೆ ಮಾತಾಡುವ ಚಪಲವಿದ್ದರೆ ತಮಿಳು ಭಾಷೆಯ ಬಗ್ಗೆ ಮಾತಾಡಿಕೊಳ್ಳಲಿ, ಕನ್ನಡ ಭಾಷೆ ಕುರಿತು ಮಾತಾಡಲು ಅವರಿಗೆ ಇರುವ ಯೋಗ್ಯತೆಯಾದರೂ ಏನು? ತಾನಾಡಿರುವ ಮಾತುಗಳನ್ನು ಕಮಲ ಹಾಸನ್ ಕೂಡಲೇ ವಾಪಸ್ಸು ತೆಗೆದುಕೊಳ್ಳಬೇಕು, ಎಂದು ನಾರಾಯಣಸ್ವಾಮಿ ಹೇಳಿದರು.

ಇದನ್ನೂ ಓದಿ:  ಕಮಲ್ ಹಾಸನ್ ಹೇಳಿಕೆ ವಿರುದ್ಧ ಧ್ವನಿ ಎತ್ತಿದ ಅಹಿಂಸಾ ಚೇತನ್; ಉಳಿದ ಸೆಲೆಬ್ರಿಟಿಗಳ ಮೌನವೇಕೆ?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More