ಆಪರೇಷನ್ ಸಿಂಧೂರ ಭರ್ಜರಿ ಯಶಸ್ಸು: ಟೌನ್ಹಾಲ್ನಲ್ಲಿ ಕಾಂಗ್ರೆಸ್ ನಾಯಕರಿಂದ ಜೈ ಹಿಂದ್ ಕಾರ್ಯಕ್ರಮ
ಆರ್ಮಿ ಜಾಕೆಟ್ ಧರಿಸಿದ ಸಿದ್ದರಾಮಯ್ಯ, ಶಿವಕುಮಾರ್, ಸುರ್ಜೆವಾಲ, ವೇಣುಗೋಪಾಲ್ ಮೊದಲಾದವರೆಲ್ಲ ಹೆಮ್ಮೆ ಮತ್ತು ಅಭಿಮಾನದಿಂದ ಬೀಗುತ್ತಿದ್ದರು. ಆ ಜಾಕೆಟ್ನ ಮಹಿಮೆಯೇ ಅಂಥದ್ದು, ಧರಿಸಿದ ಕೂಡಲೇ ನಾವೂ ಸೈನಿಕರು ಎಂಬ ಭಾವನೆ ಮನದಲ್ಲಿ ಮೂಡಿಬಿಡುತ್ತದೆ. ಹಿಂದೊಮ್ಮೆ ದೇಶಕ್ಕಾಗಿ ತಮ್ಮ ಜೀವವನ್ನು ಒತ್ತೆಯಿಟ್ಟು, ಕುಟುಂಬಗಳಿಂದ ವರ್ಷಗಳವರೆಗೆ ದೂರವಿದ್ದು ದೇಶವನ್ನು ಸುರಕ್ಷಿವಾಗಿಟ್ಟ ಮಾಜಿ ಯೋಧರಿಂದ ಜಾಕೆಟ್ ತೊಡಿಸಿಕೊಳ್ಳುವುದು ಸಾಮಾನ್ಯ ಮಾತೇ?
ಬೆಂಗಳೂರು, ಮೇ 28: ಪಾಕಿಸ್ತಾನ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಭಾರತೀಯ ಸೇನೆಯ ಆಪರೇಶನ್ ಸಿಂಧೂರ (Operation Sindoor) ಸಾಧಿಸಿದ ಮಹಾನ್ ಯಶಸ್ಸನ್ನು ಆಚರಿಸಲು ಕರ್ನಾಟಕ ಸರ್ಕಾರ ಇಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ಜೈ ಹಿಂದ್ ಕಾರ್ಯಕ್ರಮ ಆಯೋಜಿಸಿತ್ತು. ಸಶಸ್ತ್ರ ಪಡೆಗಳ ಮಾಜಿ ಅಧಿಕಾರಿಗಳು, ಯೋಧರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲ ಮತ್ತು ಹಲವಾರು ಗಣ್ಯರು ಭಾಗಿಯಾಗಿದ್ದರು. ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಇತರ ಪ್ರಮುಖರಿಗೆ ಯೋಧರು ಧರಿಸುವ ಜಾಕೆಟ್ ತೊಡಿಸಿದ್ದು ಕಾರ್ಯಕ್ರಮದ ಆಕರ್ಷಣೆಗಳಲ್ಲೊಂದಾಗಿತ್ತು.
ಇದನ್ನೂ ಓದಿ: Operation Sindoor: ದೇಶದ ಹೆಣ್ಣುಮಕ್ಕಳಿಗೆ ‘ಆಪರೇಷನ್ ಸಿಂಧೂರ’ ಅರ್ಪಿಸಿದ ಪ್ರಧಾನಿ ಮೋದಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

