ಟಿಬಿ ಡ್ಯಾಂನಲ್ಲಿ ಒಳಹರಿವು ಹೆಚ್ಚಾಗಿ ತುಂಗಭದ್ರಾ ನದಿಗೆ ನೀರು ಬಿಡುಗಡೆ, ಕಂಪ್ಲಿ ಸೇತುವೆ ಸಂಪೂರ್ಣ ಮುಳುಗಡೆ

Updated on: Aug 20, 2025 | 10:51 AM

ಸುಮಾರು 8-10ದಿನಗಳ ಹಿಂದೆ ಕಂಪ್ಲಿ ಸೇತುವೆ ಮುಳುಗಡೆಯಾಗುವ ಬಗ್ಗೆ ವರದಿ ಮಾಡಲಾಗಿತ್ತು. ತುಂಗಭದ್ರಾ ಜಲಾಶಯದ ಕ್ರಸ್ಟ್​ಗೇಟ್ ಗಳಲ್ಲಿ ಕೆಲವು ನಾಜೂಕು ಸ್ಥಿತಿಯಲ್ಲಿರುವುದರಿಂದ 90ಟಿಎಂಸಿಗಳಿಗಿಂತ ಹೆಚ್ಚು ನೀರನ್ನು ಅದರಲ್ಲಿ ಸ್ಟೋರ್ ಮಾಡಲಾಗಲ್ಲ. ಹಾಗಾಗಿ 130 ಟಿಎಂಸಿ ಸಾಮರ್ಥ್ಯದ ಡ್ಯಾಂಗೆ ಹೆಚ್ಚುವರಿ ನೀರು ಹರಿದು ಬಂದಂತೆಲ್ಲ ನದಿಗೆ ಬಿಡಲಾಗುತ್ತಿದೆ. ಈ ಭಾಗದ ರೈತರು ಕಂಗಾಲಾಗಿದ್ದಾರೆ.

ಕೊಪ್ಪಳ, ಆಗಸ್ಟ್ 20: ಮಲೆನಾಡ ಪ್ರಾಂತ್ಯದಲ್ಲಿ ಭಾರೀ ಮಳೆ ಸುರಿಯುವುದು ಮುಂದುವರಿದಿರುವ ಕಾರಣ ಜಿಲ್ಲೆಯ ಮುನಿರಾಬಾದ್ ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ತುಂಗಭದ್ರಾ ನದಿಗೆ (River Tungabhadra) ನೀರನ್ನು ಹರಿಬಿಡಲಾಗುತ್ತಿದೆ. ನಮ್ಮ ಕೊಪ್ಪಳ ವರದಿಗಾರ ಹೇಳುವ ಪ್ರಕಾರ ನದಿಗೆ 1 ಲಕ್ಷ ಕ್ಯೂಸೆಕ್ಸ್​ಗೂ ಅಧಿಕ ನೀರನ್ನು ಹರಿಬಿಡಲಾಗಿದೆ ಹಾಗೂ ಕಂಪ್ಲಿ ಮತ್ತು ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿ ವಾಹನ ಸಂಚಾರ ಮತ್ತು ಜನರ ಓಡಾಟ ನಿಷೇಧಿಸಲಾಗಿದೆ. ನದಿಪಾತ್ರದ ಹೊಲಗದ್ದೆಗಳಿಗೂ ನೀರು ನುಗ್ಗಿರುವುದರಿಂದ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿಯ ಸನ್ನಿವೇಶಕ್ಕೆ ತುತ್ತಾಗಿದ್ದಾರೆ.

ಇದನ್ನೂ ಓದಿ:  ಟಿಬಿ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆ, ಮುಳುಗಡೆ ಭೀತಿಯಲ್ಲಿ ಕಂಪ್ಲಿ-ಗಂಗಾವತಿ ಸೇತುವೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ