Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಪ್ಲಿ ಪುರಸಭೆ ಇಂಜಿನೀಯರ್ ಶರಣಪ್ಪ ನಿವಾಸದ ಮೇಲೆ ಲೋಕಾಯುಕ್ತ ದಾಳಿ, ಕಾಗದ ಪತ್ರಗಳ ಪರಿಶೀಲನೆ

ಕಂಪ್ಲಿ ಪುರಸಭೆ ಇಂಜಿನೀಯರ್ ಶರಣಪ್ಪ ನಿವಾಸದ ಮೇಲೆ ಲೋಕಾಯುಕ್ತ ದಾಳಿ, ಕಾಗದ ಪತ್ರಗಳ ಪರಿಶೀಲನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2023 | 11:45 AM

ಶರಣಪ್ಪರ ಮನೆ ಗಂಗಾವತಿ ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿದ್ದರೂ ಅವರು ಬಳ್ಳಾರಿ ಜಿಲ್ಲೆ ಕಂಪ್ಲಿ ಪುರಸಭೆ ಪರಿಸರ ವಿಭಾಗದ ಇಂಜಿನೀಯರ್ ಆಗಿ ಸೇವೆಯಲ್ಲಿದ್ದಾರೆ. ಶರಣಪ್ಪ ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರೋದು ಪತ್ತೆಯಾದ ಬಳಿಕ ಕೊಪ್ಪಳ ಲೋಕಾಯುಕ್ತ ಡಿವೈ ಎಸ್ ಪಿ ಸಲೀಂ ಪಾಶಾ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

ಕೊಪ್ಪಳ: ದೊಡ್ಡ ಮನೆ ಅಥವಾ ಬಹು ಅಂತಸ್ತಿನ ಮನೆ, ಅದರ ಮುಂದಿನ ವಿಶಾಲ ಅವರಣದಲ್ಲಿ ಒಂದೆರಡು ಕಾರು ಮತ್ತು 3-4 ದುಬಾರಿ ಬೈಕ್ ಗಳಿದ್ದರೆ ಆ ಮನೆ ಒಬ್ಬ ಸರಕಾರೀ ಅಧಿಕಾರಿಗೆ (government official) ಸೇರಿದ್ದು ಅಂತ ಜನ ಸಾಮಾನ್ಯರು ಭಾವಿಸುವ ದಿನಗಳಿವು. ಭ್ರಷ್ಟಾಚಾರ (corruption) ನಮ್ಮ ವ್ಯವಸ್ಥೆಯಲ್ಲಿ ಹಾಸುಹೊಕ್ಕಿದೆ ಅಂತ ಹೇಳಿದರೆ ಅದು ಕ್ಲೀಷೆ ಅನಿಸುತ್ತದೆ, ಅದ್ಯಾವ ಸುದ್ದಿ ಸ್ವಾಮಿ ಬೇರೆ ಏನನ್ನಾದರೂ ಹೇಳಿ ಅಂತ ಜನ ಹೇಳುತ್ತಾರೆ. ರಾಜ್ಯದಲ್ಲಿ ಇಂದು 63 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ದೃಶ್ಯಗಳಲ್ಲಿ ಕಾಣುತ್ತಿರೋದು ಜಿಲ್ಲೆಯ ಗಂಗಾವತಿಯಲ್ಲಿರುವ ಇಂಜಿನೀಯರ್ ಶರಣಪ್ಪನವರ (engineer Sharanappa) ಮನೆ. ಶರಣಪ್ಪರ ಮನೆ ಗಂಗಾವತಿ ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿದ್ದರೂ ಅವರು ಬಳ್ಳಾರಿ ಜಿಲ್ಲೆ ಕಂಪ್ಲಿ ಪುರಸಭೆ ಪರಿಸರ ವಿಭಾಗದ ಇಂಜಿನೀಯರ್ ಆಗಿ ಸೇವೆಯಲ್ಲಿದ್ದಾರೆ. ಶರಣಪ್ಪ ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರೋದು ಪತ್ತೆಯಾದ ಬಳಿಕ ಕೊಪ್ಪಳ ಲೋಕಾಯುಕ್ತ ಡಿವೈ ಎಸ್ ಪಿ ಸಲೀಂ ಪಾಶಾ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳು ಆಸ್ತಿಪತ್ರ, ದಾಖಲೆಗಳ ಪರಿಶೀಲನೆ ನಡೆಸಿದ್ದು ವಿವರಗಳು ಇನ್ನಷ್ಟೇ ಲಭ್ಯವಾಗಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ