ಬೆಳಗಾವಿ ಅಧಿವೇಶನ: ಸಭಾಧ್ಯಕ್ಷರ ಕಾಲೆಳೆದ ಬಸನಗೌಡ ಯತ್ನಾಳ್, ತಕ್ಕ ಜವಾಬು ನೀಡಿದ ಯುಟಿ ಖಾದರ್!

ಬೆಳಗಾವಿ ಅಧಿವೇಶನ: ಸಭಾಧ್ಯಕ್ಷರ ಕಾಲೆಳೆದ ಬಸನಗೌಡ ಯತ್ನಾಳ್, ತಕ್ಕ ಜವಾಬು ನೀಡಿದ ಯುಟಿ ಖಾದರ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2023 | 1:36 PM

Karnataka Assembly Winter Session 2023: ಇದು ಕಳವಳಕಾರಿ ಸಂಗತಿಯಲ್ಲದೆ ಮತ್ತೇನೂ ಅಲ್ಲ. ವಿಧಾನ ಮಂಡಲದ ಅಧಿವೇಶನ ಶಾಸಕರು ಮಂತ್ರಿಗಳ ಪಿಕ್ನಿಕ್ ಗಾಗಿ ನಡೆಸಲಾಗುವುದಿಲ್ಲ. ಅಧಿವೇಶನ ಜಾರಿಯಲ್ಲಿರುವಾಗ ಮಂತ್ರಿಗಳು ತಮ್ಮ ತಮ್ಮ ಸ್ಥಳಗಳಲ್ಲಿ ಉಪಸ್ಥಿತರಿರಬೇಕು. ಜನ ಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿರೋದು ಅವರೇ ತಾನೇ? ವಿರೋಧ ಪಕ್ಷದ ನಾಯಕರನ್ನು ಎದುರಿಸಲು ಮಂತ್ರಗಳಿಗೆ ಹೆದರಿಕೆಯಾಗುತ್ತಿದೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವರಿಗೆ ತಾಕೀತು ಮಾಡುವ ಅವಶ್ಯಕತೆಯಿದೆ.

ಬೆಳಗಾವಿ: ಬೆಳಗಾವಿ ವಿಧಾನಸಭಾ ಅಧಿವೇಶನದ ಎರಡನೇ ದಿನದ ಕಾರ್ಯಕಲಾಪ ಶುರುವಾದಾಗ ಮಂತ್ರಿಗಳ ಗೈರುಹಾಜರಿ ಬಗ್ಗೆ ವಿರೋಧ ಪಕ್ಷದ ನಾಯಕರ ಸರ್ಕಾರದ ವಿರುದ್ಧ ಕಿಡಿಕಾರಿದರು. ಸದಸ್ಯರೊಬ್ಬರು ಮಾತಾಡುವಾಗ ಸಭಾಧ್ಯಕ್ಷ ಯುಟಿ ಖಾದರ್ (Speaker UT Khader) ಅವರನ್ನು ಕೂರುವಂತೆ ಹೇಳುವಾಗಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಎದ್ದುನಿಂತು ಸ್ಪೀಕರ್ ಅವರು ಆಡಳಿತ ಪಕ್ಷದ ಸದಸ್ಯರ ವಿರುದ್ಧ ಚಾಟಿ ಬೀಸದಿದ್ದರೆ 5 ವರ್ಷಗಳ ಕಾಲ ಸಭಾಧ್ಯಕ್ಷರಾಗೇ ಉಳಿಯಬೇಕಾಗುತ್ತದೆ, ಯಾವತ್ತೂ ಮಂತ್ರಿ ಮಾಡಲ್ಲ ಎಂದು ಹೇಳಿದಾಗ ಸಭಾಧ್ಯಕ್ಷಕರು, ಕೇವಲ ಮಂತ್ರಿಯಾಗುವ ಉದ್ದೇಶಕ್ಕೆ ಕಠೋರ ನಿರ್ಣಯಗಳನ್ನು ತೆಗೆದುಕೊಳ್ಳಲಾಗಲ್ಲ, ತಾನು ಹಾಗೆ ಮಾಡುವುದು ಸಾಧ್ಯವೇ ಇಲ್ಲ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಅವರು ಎದ್ದು ನಿಂತು, ಸದನ ಆರಂಭಗೊಳ್ಳುವ ಮೊದಲು ಎಲ್ಲರೂ ಒಳಗೆ ಬಂದು ಕೂತಿರಬೇಕು ಅಂತ ಸೋಮವಾರ ಸ್ಪೀಕರ್ ಎಲ್ಲರಿಗೆ ಬುದ್ಧಿವಾದ ಹೇಳಿದರೂ ಸಚಿವರ ಸ್ಥಾನಗಳೆಲ್ಲ ಖಾಲಿ ಇವೆ, ತಾವು ಯಾರನ್ನು ಪ್ರಶ್ನಿಸುವುದು ಅಂತ ಕೇಳಿದರು. ಅದಕ್ಕೆ ಸ್ಪೀಕರ್, ನಾವು ಕಾರ್ಯಕಲಾಪ ಶುರು ಮಾಡೋಣ ಅವರು ಬಂದು ಜಾಯಿನ್ ಆಗುತ್ತಾರೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ